ಈ ತಪ್ಪು ಮಾಡಿದ್ರೆ ಗೃಹಲಕ್ಷ್ಮಿ ಯೋಜನೆ ₹2,000 ಬರೋದಿರಲಿ, ನಿಮ್ಮ ಮೇಲೆಯೇ ಬೀಳುತ್ತೆ ದಂಡ
ಸರ್ಕಾರದಿಂದ ಬರುವ 2000 ರೂ. ಪಡೆದುಕೊಳ್ಳಲು (Money Deposit) ಹೋಗಿ ಹಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಯಾಕೆ ಬರುತ್ತೆ ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಅಡಿಯಲ್ಲಿ ಲಾಭ ಪಡೆದುಕೊಂಡಿರುವ ಗೃಹಿಣಿಯರ ಸಂಖ್ಯೆ ಬರೋಬ್ಬರಿ 82 ಲಕ್ಷ. ಆದರೆ ಇನ್ನೂ ಸುಮಾರು 20 ಲಕ್ಷದಷ್ಟು ಗೃಹಿಣಿಯರಿಗೆ ಹಣ ಬಂದಿಲ್ಲ.
ಹಣ ಬಾರದೇ ಇದ್ದಾಗ (DBT) ಅದರ ಬಗ್ಗೆ ಯೋಚನೆ ಹೆಚ್ಚಾಗುವುದು ಸಹಜ. ನಮ್ಮ ಪಕ್ಕದ ಮನೆಯವರಿಗೂ ಬಂದಿದೆ ಆದರೆ ನನ್ನ ಖಾತೆಗೆ ಮಾತ್ರ 2000 ರೂ. ಬಂದಿಲ್ವಲ್ಲ ಅಂತ ಸಾಕಷ್ಟು ಜನ ಬೇಸರಗೊಂಡವರು ಇದ್ದಾರೆ.
ಆದರೆ ಹಣ ಬಂದಿಲ್ಲ ಎನ್ನುವ ಕಾರಣಕ್ಕೆ ಇದೊಂದು ತಪ್ಪು ಮಾಡಲು ಹೋಗಿ ಹಲವು ಮಹಿಳೆಯರು ಇಂದು ತಮ್ಮ ಬಳಿ ಇರುವ ಹಣವನ್ನು ಕೂಡ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಸರ್ಕಾರದಿಂದ ಬರುವ 2000 ರೂ. ಪಡೆದುಕೊಳ್ಳಲು (Money Deposit) ಹೋಗಿ ಹಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಯಾಕೆ ಬರುತ್ತೆ ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಹೊಸ ವಸತಿ ಯೋಜನೆ! ಬಡವರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೋರಾಟ ಕೇಂದ್ರ ಸರ್ಕಾರ
ಈ ತಪ್ಪು ಎಂದಿಗೂ ಮಾಡಬೇಡಿ
ಎಲ್ಲರಿಗೂ ಗೊತ್ತಿರುವ ಹಾಗೆ ಸರ್ಕಾರವು ಈಗಾಗಲೇ ತಿಳಿಸಿರುವಂತೆ ನೀವು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಒಂದೇ ಒಂದು ರೂಪಾಯಿಗಳನ್ನು ಕೂಡ ಖರ್ಚು ಮಾಡಬೇಕಾಗಿಲ್ಲ.
ಅರ್ಜಿ ಫಾರಂ (Application form) ಗೆ ಕೊಡಬೇಕಾಗಿರುವ 20 ರೂಪಾಯಿಗಳನ್ನು ಕೂಡ ಸರ್ಕಾರವೇ ಭರಿಸುತ್ತದೆ. ಹಾಗಾಗಿ ಒಂದು ರೂಪಾಯಿ ಖರ್ಚಿಲ್ಲದೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಎರಡು ಸಾವಿರ ರೂಪಾಯಿಗಳನ್ನು ಉಚಿತವಾಗಿ ಮಹಿಳೆಯರು ಪಡೆಯಬಹುದು.
ಈಗಾಗಲೇ ಹಲವರಿಗೆ ಹಣ ಬಂದಿದೆ ಆದರೆ ಇನ್ನೂ ಕೆಲವರಿಗೆ ಹಣ ಬಂದಿಲ್ಲ ಇದೇ ಕಾರಣಕ್ಕೆ ಸರ್ಕಾರದ ಅಧಿಕೃತ ವೆಬ್ಸೈಟ್ (Government official website) ಹಾಗೂ ಅಪ್ಲಿಕೇಶನ್ ಗಳನ್ನು ಹೊರತುಪಡಿಸಿ ಬೇರೆ ಬೇರೆ ನಕಲಿ ವೆಬ್ಸೈಟ್ (Fake website) ಗಳಲ್ಲಿ ಅರ್ಜಿ ಹಾಕಲು ಹೋಗಿ ಅಥವಾ ಸ್ಟೇಟಸ್ ಪರಿಶೀಲನೆ ಮಾಡಲು ಹೋಗಿ ಮಹಿಳೆಯರು ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ.
ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂತಾ? ಇಲ್ವಾ? ಇಲ್ಲಿದೆ ಫ್ರೀ ಕರೆಂಟ್ ಬಗ್ಗೆ ಬಿಗ್ ಅಪ್ಡೇಟ್
ಫೇಕ್ ಅಪ್ಲಿಕೇಶನ್ ಗಳು
ಹೌದು ಸರ್ಕಾರದ ಯೋಜನೆಗಳು ಜಾರಿಯಾದಾಗಿನಿಂದ ಸರ್ಕಾರದ ಅಧಿಕೃತ ವೆಬ್ಸೈಟ್ ಅನೇಕ ಹೋಲುವ ಸಾಕಷ್ಟು ನಕಲಿ ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ (Mobile Application) ಗಳು ಬಿಡುಗಡೆಯಾಗಿವೆ.
ಇದೊಂದು ಲಿಂಕ್ ಕ್ಲಿಕ್ ಮಾಡಿದ್ರೆ 2000 ನಿಮ್ಮ ಖಾತೆಗೆ (Bank Account) ಜಮಾ ಆಗುತ್ತೆ ಎನ್ನುವಂತಹ ಹಲವು ಸಂದೇಶಗಳು (SMS) ನಿಮ್ಮ ಮೊಬೈಲ್ ಬರಬಹುದು. ಹಾಗೇನಾದ್ರೂ ನೀವು ಇಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ನಲ್ಲಿ ಇರುವ ಹಣವೆಲ್ಲ ಹ್ಯಾಕ್ ಮಾಡಿ ಲಪಟಾಯಿಸಲಾಗುತ್ತದೆ.
ಅಷ್ಟೇ ಅಲ್ಲ ನಿಮ್ಮ ಮೊಬೈಲ್ ಕೂಡ ಹ್ಯಾಕ್ ಆಗಬಹುದು, ಇದರಿಂದ ಮೊಬೈಲ್ ನಲ್ಲಿ ಇರುವ ಎಲ್ಲಾ ಖಾಸಗಿ ವಿಷಯಗಳು ಕೂಡ ಹ್ಯಾಕರ್ ಕೈ ಸೇರಬಹುದು.
ಈ ಹಿಂದೆ ಕೇಂದ್ರ ಸರ್ಕಾರವು ಕೂಡ ಈ ಬಗ್ಗೆ ಸೂಚನೆ ನೀಡಿದೆ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯೋಜನೆಗಳನ್ನು ನೀಡುವ ನೆಪದಲ್ಲಿ ಹಲವು ನಕಲಿ ಅಪ್ಲಿಕೇಶನ್ ಹಾಗೂ ವೆಬ್ಸೈಟ್ ಗಳು ಆರಂಭವಾಗಿದೆ.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಚಾಲ್ತಿಯಲ್ಲಿದೆಯೋ ಸ್ಟೇಟಸ್ ಚೆಕ್ ಮಾಡಿ! ಹೊಸ ಲಿಂಕ್ ಬಿಡುಗಡೆ
ಜನರು ತಿಳಿಯದೆ ಇಂತಹ ಅಪ್ಲಿಕೇಶನ್ ಬಳಸುವುದರ ಮೂಲಕ ಮೋಸ ಹೋಗುತ್ತಿದ್ದಾರೆ. ಸರ್ಕಾರದ ಯಾವುದೇ ಸೈಟ್ ಇದ್ದರೂ .gov.in ಎನ್ನುವುದು ಕಡ್ಡಾಯವಾಗಿ ಇದ್ದೇ ಇರುತ್ತದೆ. ಈ ರೀತಿ ಇಲ್ಲ ಎಂದರೆ ಅದು ನಕಲಿ ಎಂದು ನೀವು ಭಾವಿಸಬಹುದು.
ನಕಲಿ ಅಪ್ಲಿಕೇಶನ್ ನಿಂದ ಮೊಬೈಲ್ ಗೆ (Mobile SMS) ಬರುವಂತಹ ಯಾವುದೇ ಸಂದೇಶಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ ಬಳಿ ಇರುವ ಹಣ ಕಳೆದುಕೊಳ್ಳಬೇಡಿ. ಸರ್ಕಾರ ತನ್ನ ಯೋಜನೆಯ ಲಾಭವನ್ನು ಜನರಿಗೆ ನೀಡಲು ಹೆಚ್ಚು ವೆಬ್ಸೈಟ್ ಹಾಗೂ ಅಪ್ಲಿಕೇಶನ್ ಬಿಡುಗಡೆ ಮಾಡುವುದಿಲ್ಲ.
ಸರ್ಕಾರದಿಂದ ಒಂದು ಅಪ್ಲಿಕೇಶನ್ ಹಾಗೂ ಒಂದು ಅಧಿಕೃತ ವೆಬ್ಸೈಟ್ ಮಾತ್ರ ಇರುತ್ತದೆ. ಹಾಗೂ ಗ್ರಾಹಕರು ಯಾವ ವೆಬ್ಸೈಟ್ ಬಳಸಬೇಕು ಎನ್ನುವುದಕ್ಕೆ ಸರ್ಕಾರ ಮಾಹಿತಿಯನ್ನು ಕೂಡ ನೀಡುತ್ತದೆ. ಹಾಗಾಗಿ ಸರ್ಕಾರದ ಮಾರ್ಗದರ್ಶನ ಇಲ್ಲದೆ ಬೇರೆ ವೆಬ್ಸೈಟ್ ಗಳನ್ನು ಕ್ಲಿಕ್ ಮಾಡಿ ಅಥವಾ ಆ ವೆಬ್ಸೈಟ್ಗಳಲ್ಲಿ ಹಣ ಪಡೆಯುವುದಕ್ಕೆ ಹಣಕೊಟ್ಟು ಕಳೆದುಕೊಳ್ಳಬೇಡಿ.
ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಜಮಾ; ನಿಮಗೂ ಜಮಾ ಆಗಿದ್ಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ
ಮಧ್ಯವರ್ತಿಗಳ ಹಾವಳಿ:
ಗೃಹಲಕ್ಷ್ಮಿ ಯೋಜನೆ ನೇರವಾಗಿ ಸರ್ಕಾರದಿಂದ ಫಲಾನುಭವಿಗಳಿಗೆ ಸಿಗುವಂತದ್ದು. ಹಾಗಾಗಿ ಮಧ್ಯವರ್ತಿಗಳಿಗೆ (mediators) ಹಣ ಕೊಟ್ಟು ಅವರಿಂದ ಸರ್ಕಾರದ ಹಣ ಬರುವಂತೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ.
ನಿಮ್ಮ ಎಲ್ಲಾ ಕೆಲಸ ಮಾಡಿಕೊಡ್ತೀವಿ ಇಷ್ಟು ಹಣ ಕೊಡಿ ಎನ್ನುವ ಮಧ್ಯವರ್ತಿಗಳು ಕೂಡ ಹುಟ್ಟಿಕೊಂಡಿದ್ದಾರೆ. ಸ್ವಲ್ಪ ವಿಳಂಬವಾದರೂ ನೀವು ಫಲಾನುಭವಿಗಳಾಗಿದ್ದರೆ ನಿಮ್ಮ ಖಾತೆಗೆ ಹಣ ಬರುತ್ತದೆ, ಆದರೆ ಹೀಗೆ ನಕಲಿ ಬಳಸುವುದರ ಮೂಲಕ ಹಾಗೂ ಮಧ್ಯವರ್ತಿಗಳ ಆಮಿಷಕ್ಕೆ ಬಲಿಯಾಗುವುದರ ಮೂಲಕ ನಷ್ಟ ಅನುಭವಿಸಬೇಡಿ.
If you do this mistake, you will loss Your Money while Apply Gruha Lakshmi Yojana