ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂತಾ? ಇಲ್ವಾ? ಇಲ್ಲಿದೆ ಫ್ರೀ ಕರೆಂಟ್ ಬಗ್ಗೆ ಬಿಗ್ ಅಪ್ಡೇಟ್
ಇನ್ನು ನೀವು ನಿಮ್ಮ ಆವರೇಜ್ ವಿದ್ಯುತ್ 200ಗಿಂತ ಕಡಿಮೆ ಇದ್ದು ಅರ್ಜಿ ಸಲ್ಲಿಸಿ ಈಗಲೂ ಕೂಡ ಬಿಲ್ ಪಾವತಿ ಮಾಡಬೇಕಾಗಿರುವ ಪರಿಸ್ಥಿತಿ ಬಂದರೆ, ಪರಿಹರಿಸಿಕೊಳ್ಳಲು ನೀವು ದೂರು ಸಲ್ಲಿಸಬಹುದು.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (government guarantee scheme) ಒಂದಾಗಿರುವ ಗೃಹಜ್ಯೋತಿ ಯೋಜನೆ (Gruha Jyothi scheme) ಈಗಾಗಲೇ ಆರಂಭವಾಗಿ ಮೂರು ತಿಂಗಳು ಕಳೆದಿವೆ.
ಕೋಟ್ಯಂತರ ಜನ ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಆನ್ಲೈನ್ (online application) ಮೂಲಕವೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿತ್ತು, ಅದರ ಜೊತೆಗೆ ಬೆಂಗಳೂರು ಒನ್, ಗ್ರಾಮ ಒನ್ ಮೊದಲಾದ ಸೇವ ಕೇಂದ್ರಗಳಲ್ಲಿಯೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಚಾಲ್ತಿಯಲ್ಲಿದೆಯೋ ಸ್ಟೇಟಸ್ ಚೆಕ್ ಮಾಡಿ! ಹೊಸ ಲಿಂಕ್ ಬಿಡುಗಡೆ
ಶೂನ್ಯ ವಿದ್ಯುತ್ (zero electricity bill) ಪಡೆದುಕೊಂಡ ಕೋಟ್ಯಾಂತರ ಜನ:
ಮನೆಯ ಮಾಲೀಕರು ಮಾತ್ರವಲ್ಲದೆ ಬಾಡಿಗೆದಾರರು (Rent House) ಕೂಡ ಅರ್ಜಿ ಸಲ್ಲಿಸಿ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿದೆ.
ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಇರಲೇಬೇಕಾದ ಮುಖ್ಯವಾಗಿರುವ ಅರ್ಹತೆ ಅಂದರೆ ನೀವು ಬಳಸುವ ವಿದ್ಯುತ್ 200 Unit ಗಿಂತಲೂ (Less than 200 unit) ಕಡಿಮೆ ಇರಬೇಕು. ಹೆಚ್ಚಿಗೆ ವಿದ್ಯುತ್ ಬಳಸಿದರೆ ಅಂತವರಿಗೆ ಖಂಡಿತವಾಗಿಯೂ ಯಾವ ಪ್ರಯೋಜನವು ಸಿಗುವುದಿಲ್ಲ.
ಕೊನೆಗೂ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಇಲ್ವಾ? ಹೀಗೆ ಮಾಡಿದ್ರೆ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ
ಆವರೇಜ್ ಲೆಕ್ಕಾಚಾರ
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಮನೆಯ ವಿದ್ಯುತ್ 200ಗಿಂತಲೂ ಕಡಿಮೆ ಇರಬೇಕು. 2022 – 23ರ ಸರಾಸರಿ ವಿದ್ಯುತ್ ಬಳಕೆ ಹಾಗೂ ಹೆಚ್ಚುವರಿಯಾಗಿ 10% ಯೂನಿಟ್ ಈ ಎರಡು ಸೇರಿ 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸಿದರೆ ನಿಮಗೆ ಉಚಿತ ವಿದ್ಯುತ್ ಸಿಗುತ್ತದೆ.
ಉದಾಹರಣೆಗೆ ನೀವು ಪ್ರತಿ ತಿಂಗಳು ಬಳಸುವ ವಿದ್ಯುತ್ 150 ಯೂನಿಟ್ ಆದರೆ, ಸರ್ಕಾರದಿಂದ 10% ಉಚಿತ ಅಂದರೆ 160 ಯೂನಿಟ್ ವಿದ್ಯುತ್ ಬಳಸಿದರೆ ಉಚಿತ ವಿದ್ಯುತ್ ಸಿಗುತ್ತೆ. ಒಟ್ಟಾರೆಯಾಗಿ ನೀವು ಬಳಸುವ ವಿದ್ಯುತ್ ಮಾತ್ರ 200 ಯೂನಿಟ್ ಮೀರುವ ಹಾಗಿಲ್ಲ. ಸಂಪೂರ್ಣ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡಬೇಕು.
ಇನ್ನು ನಿಮ್ಮ 2022 ಹಾಗೂ 23ರ ಸಾಲಿನ ಆವರೇಜ್ ವಿದ್ಯುತ್ 200ಗಿಂತಲೂ ಕಡಿಮೆ ಬಂದಿದ್ದು, ಈಗ ಒಂದು ತಿಂಗಳಿನಲ್ಲಿ ಮಾತ್ರ 200 ಯುನಿಟ್ ಗಿಂತ ಜಾಸ್ತಿ ಬಂದರೆ ಆ ಒಂದು ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಜಮಾ; ನಿಮಗೂ ಜಮಾ ಆಗಿದ್ಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ
ಕಡಿಮೆ ವಿದ್ಯುತ್ ಬಳಕೆ ಮಾಡಿದರು ಫ್ರೀ ವಿದ್ಯುತ್ ಸೌಲಭ್ಯ ಸಿಕ್ಕಿಲ್ವಾ?
ಸಾಕಷ್ಟು ಜನ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಆದರೂ ಕೂಡ ವಿದ್ಯುತ್ ಬಿಲ್ ಹೆಚ್ಚಿಗೆ ಬರುತ್ತಿದೆ ಎನ್ನುವ ಕಾರಣಕ್ಕೆ ಉಚಿತ ಬಿಲ್ ಸಿಗುತ್ತಿಲ್ಲ. ಇನ್ನು ನೀವು ನಿಮ್ಮ ಆವರೇಜ್ ವಿದ್ಯುತ್ 200ಗಿಂತ ಕಡಿಮೆ ಇದ್ದು ಅರ್ಜಿ ಸಲ್ಲಿಸಿ ಈಗಲೂ ಕೂಡ ಬಿಲ್ ಪಾವತಿ ಮಾಡಬೇಕಾಗಿರುವ ಪರಿಸ್ಥಿತಿ ಬಂದರೆ, ಪರಿಹರಿಸಿಕೊಳ್ಳಲು ನೀವು ದೂರು ಸಲ್ಲಿಸಬಹುದು.
ಆಯಾ ಎಸ್ಕಾಂ (escom) ಉಪ ವಿಭಾಗೀಯ ಕಚೇರಿ ಅಥವಾ ನಿಮ್ಮ ಹತ್ತಿರದ ವಿದ್ಯುತ್ ಕಚೇರಿಗೆ ಭೇಟಿ ನೀಡಿ ನಿಮ್ಮ ಗೊಂದಲ ಪರಿಹರಿಸಿಕೊಳ್ಳಬಹುದು. ವಿದ್ಯುತ್ ಬಿಲ್ ಹಾಗೂ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಾಹಿತಿ ಆವರೇಜ್ ಎಷ್ಟು ಬಂದಿದೆ ಎಂಬ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಕಚೇರಿಯ ಸಿಬ್ಬಂದಿ ಬಳಿ ತೋರಿಸಿದರೆ ನಿಮಗೆ ಉಚಿತ ವಿದ್ಯುತ್ ಯಾಕೆ ಸಿಗುತ್ತಿಲ್ಲ ಎನ್ನುವ ಮಾಹಿತಿ ತಿಳಿಯುತ್ತದೆ.
ಅನ್ನಭಾಗ್ಯ ಯೋಜನೆಯ 3ನೇ ಕಂತು ಬಿಡುಗಡೆ; ನಿಮ್ಮ ಖಾತೆಗೆ ಬಂದಿದ್ಯಾ ಹೀಗೆ ಚೆಕ್ ಮಾಡಿಕೊಳ್ಳಿ
ಉಚಿತ ವಿದ್ಯುತ್ ಪಡೆದುಕೊಳ್ಳಲು 200 ಯೂನಿಟ್ ಗಿಂತ ಒಳಗೆ ವಿದ್ಯುತ್ ಖರ್ಚು ಮಾಡಬೇಕು, ಹಾಗಾಗಿ ಮನೆಯಲ್ಲಿ ಬಳಕೆ ಮಾಡುವ ವಿದ್ಯುತ್ ಬಗ್ಗೆ ಹೆಚ್ಚಿನ ಗಮನವಹಿಸಿ, ಹೆಚ್ಚು ಬಳಸುತ್ತಿದ್ದರೆ ಅದಕ್ಕೆ ಕಡಿವಾಣ ಹಾಕಿ.
ಇನ್ನು ಸೋಲಾರ್ ವಿದ್ಯುತ್ (solar power) ಬಳಸುತ್ತಿರುವವರಿಗೆ ಸಿಗುತ್ತಿದ್ದ ಸಹಾಯಧನವನ್ನು ಸರ್ಕಾರ ನಿಲ್ಲಿಸಿದೆ ಹಾಗಾಗಿ ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸೋಲಾರ್ ವಿದ್ಯುತ್ (Solar Electricity) ಬಳಸುತ್ತಿರುವವರು ಕೂಡ ಅರ್ಜಿ ಸಲ್ಲಿಸಬಹುದು.
ಸದ್ಯಕ್ಕೆ ಗೃಹಜ್ಯೋತಿ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಆದರೆ ಕೆಲವೇ ದಿನಗಳಲ್ಲಿ ಮತ್ತೆ ಆರಂಭವಾಗಲಿದ್ದು ನಿಮ್ಮ ಆವರೇಜ್ ವಿದ್ಯುತ್ ಬಳಕೆ ಗಿಂತ ಕಡಿಮೆ ಇದ್ದರೆ ಅರ್ಜಿ ಸಲ್ಲಿಸಬಹುದು.
Big update about Gruha Jyothi Yojana Free Electricity Scheme