ಹೊಸ ರೇಷನ್ ಕಾರ್ಡ್‌ಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್! ಸರ್ಕಾರದ ಮಹತ್ವದ ಆದೇಶ
ರೇಷನ್ ಕಾರ್ಡ್ (Ration card) ಇದ್ದವರಿಗೆ ಮಾತ್ರ ಸರ್ಕಾರದ ಯೋಜನೆಯ ಪ್ರಯೋಜನ ಸಿಗುತ್ತೆ ಅನ್ನುವುದು ಹಲವರಿಗೆ ಗೊತ್ತಿರುವ ವಿಚಾರ. ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ ಅಕ್ಕಿಯ ಬದಲು ಹಣ ನಿಮ್ಮ ಖಾತೆಗೆ (Bank Account) ಬರಬೇಕು ಅಂದ್ರೆ ಬಿಪಿಎಲ್ ಕಾರ್ಡ್ (BPL Card) ಹೊಂದಿರುವುದು ಕಡ್ಡಾಯವಾಗಿದೆ.
ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ 2000 ರೂ. ಖಾತೆಗೆ (Bank Account) ಬರಬೇಕು ಅಂದ್ರೆ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಹೊಂದಿರಬೇಕು, ಆದರೆ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿಯ ಹೆಸರೇ ಮೊದಲಿಗೆ ಇರಬೇಕು.
ಈ ತಪ್ಪು ಮಾಡಿದ್ರೆ ಗೃಹಲಕ್ಷ್ಮಿ ಯೋಜನೆ ₹2,000 ಬರೋದಿರಲಿ, ನಿಮ್ಮ ಮೇಲೆಯೇ ಬೀಳುತ್ತೆ ದಂಡ
ರೇಷನ್ ಕಾರ್ಡ್ ನಲ್ಲಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಾದರೆ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಪುರುಷ ಯಜಮಾನನ ಬದಲಿಗೆ ಮಹಿಳೆಯ ಹೆಸರನ್ನೇ ರೇಷನ್ ಕಾರ್ಡ್ ನಲ್ಲಿ ಮೊದಲ ಸ್ಥಾನದಲ್ಲಿ ಸೇರಿಸಬೇಕು.
ಈಗಾಗಲೇ ಸಾಕಷ್ಟು ಮಹಿಳೆಯರು ತಮ್ಮ ಹೆಸರಿಗೆ ರೇಷನ್ ಕಾರ್ಡ್ ಬದಲಾಯಿಸಿಕೊಂಡಿದ್ದಾರೆ. ಆದರೆ ಇನ್ನೂ ಸರ್ಕಾರಕ್ಕೆ ಎರಡು ಲಕ್ಷಕ್ಕೂ ಹೆಚ್ಚಿನ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಂದಾಯವಾಗಿವೆ.
ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಪರಿಶೀಲಿಸಿ ಸದ್ಯದಲ್ಲಿಯೇ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಕೊಡುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
ಈಗಾಗಲೇ ಹೊಸದಾಗಿ ರೇಷನ್ ಕಾರ್ಡ್ (Ration Card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರು (Application) ಹಾಗೂ ಅರ್ಜಿ ಸಲ್ಲಿಸಬೇಕು ಎಂದುಕೊಂಡವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹಳೆ ಅರ್ಜಿ ಪ್ರಕ್ರಿಯೆ (Old Application) ಅಥವಾ ವಿಲೇವಾರಿ ಮುಗಿದ ಬಳಿಕ ಹೊಸ ರೇಷನ್ ಕಾರ್ಡನ್ನು ಸಲ್ಲಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಸರ್ಕಾರ ತಿಳಿಸಿದೆ.
ಸಲ್ಲಿಸಿರುವ ಅರ್ಜಿಗಳ 75% ನಷ್ಟು ಪರಿಶೀಲನೆ ಮುಗಿದಿದ್ದು ಅರ್ಹರಿಗೆ ಸದ್ಯದಲ್ಲಿಯೇ ಹೊಸ ಕಾರ್ಡ್ ವಿತರಣೆ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇದೀಗ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿರುವವರು ತಮ್ಮ ರೇಷನ್ ಕಾರ್ಡ್ ಸ್ಟೇಟಸ್ ತಿಳಿದುಕೊಳ್ಳಬಹುದಾಗಿದೆ.
ಹೊಸ ವಸತಿ ಯೋಜನೆ! ಬಡವರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೋರಾಟ ಕೇಂದ್ರ ಸರ್ಕಾರ
ಆನ್ಲೈನ್ ಮೂಲಕ ರೇಷನ್ ಕಾರ್ಡ್ ಸ್ಟೇಟಸ್ ಹೀಗೆ ಚೆಕ್ ಮಾಡಿ
https://www.karnataka.gov.in/ (https://sevasindhuservices.karnataka.gov.in/citizenApplication.html)
ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.
ನಂತರ ಈ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಬಳಿಕ ಆರ್‌ಸಿ ರಿಕ್ವೆಸ್ಟ್ ಸ್ಟೇಟಸ್ ಲಿಂಕ್ (RC Request Status) ಎನ್ನುವ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೆ, “ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ” ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
ಬಳಿಕ ಎಕನಾಲೆಜ್ಮೆಂಟ್ ನಂಬರ್ (Acknowledgement Number) ಅಂದರೆ ಸ್ವಿಕೃತಿ ಸಂಖ್ಯೆಯನ್ನು ಬಾಕ್ಸ್ ನಲ್ಲಿ ಹಾಕಿ.
ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಸಲ್ಲಿಕೆಯ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.
ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂತಾ? ಇಲ್ವಾ? ಇಲ್ಲಿದೆ ಫ್ರೀ ಕರೆಂಟ್ ಬಗ್ಗೆ ಬಿಗ್ ಅಪ್ಡೇಟ್
ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ
• https://ahara.kar.nic.in/ ಮೊದಲಿಗೆ ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.
• ಈಗ ಹೊಸ ಪೇಜ್ ನಲ್ಲಿ ಈ ಸರ್ವಿಸ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
• ಬಳಿಕ ತಿದ್ದುಪಡಿ ಅಥವಾ ಹೊಸ ಸೇರ್ಪಡೆ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ.
• ಹೊಸ ಪುಟ ತೆರೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಜಿಲ್ಲೆಯನ್ನೂ ಆಯ್ಕೆ ಮಾಡಿ.
• ಬಳಿಕ ಹೊಸ ಸೇರ್ಪಡೆ ಅಥವಾ ತಿದ್ದುಪಡಿ ಫಾರಂ ತೆರೆದುಕೊಳ್ಳುತ್ತದೆ ಅದರಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು.
• ಫಾರ್ಮ್ ಭರ್ತಿ ಮಾಡಿದ ನಂತರ ಅಗತ್ಯ ಇರುವ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
• ದಾಖಲೆಗಳು ಅಪ್ಲೋಡ್ ಆದ ನಂತರ ಎಲ್ಲವೂ ಸರಿಯಾಗಿ ಇದೆಯಾ ಎಂಬುದನ್ನು ಮತ್ತೊಮ್ಮೆ ಮರು ಪರಿಶೀಲಿಸಿ ಸಬ್ಮಿಟ್ ಅನ್ನು ಕ್ಲಿಕ್ ಮಾಡಿ.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಚಾಲ್ತಿಯಲ್ಲಿದೆಯೋ ಸ್ಟೇಟಸ್ ಚೆಕ್ ಮಾಡಿ! ಹೊಸ ಲಿಂಕ್ ಬಿಡುಗಡೆ
ಇಷ್ಟು ಮಾಡಿದರೆ ನಿಮಗೆ ರಿಜಿಸ್ಟರ್ ನಂಬರ್ ಒಂದನ್ನು ಕೊಡಲಾಗುತ್ತದೆ ಆ ನಂಬರ್ ಇಟ್ಟುಕೊಂಡು ನಿಮ್ಮ ರೇಷನ್ ಕಾರ್ಡ್ ಅರ್ಜಿಯ ಅಥವಾ ತಿದ್ದುಪಡಿಯ ಸ್ಟೇಟಸ್ ಅನ್ನು ನಿಮಗೆ ಬೇಕಾದಾಗ ತಿಳಿದುಕೊಳ್ಳಬಹುದು.
Good news for those who are waiting for new ration card, Important Update From Govt