ಫ್ರೀ ಬಸ್ ಸೌಲಭ್ಯ, ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ! ಸರ್ಕಾರದಿಂದ ಮಹತ್ವದ ನಿರ್ಧಾರ

ಮಹಿಳೆಯರಿಗೆ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ (Free Bus) ಪ್ರಯಾಣಿಸಬಹುದಾದ ಶಕ್ತಿ ಯೋಜನೆ (Shakti scheme) ಹೆಚ್ಚು ಯಶಸ್ವಿಯಾಗಿದೆ (successful) ಎನ್ನಬಹುದು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪ್ರಯೋಜನವನ್ನು ಬಹುತೇಕ ರಾಜ್ಯದ ಕೋಟ್ಯಾಂತರ ಜನ ಪಡೆದುಕೊಳ್ಳುತ್ತಿದ್ದಾರೆ, ಅದರಲ್ಲೂ ಎಲ್ಲಾ ಯೋಜನೆಗಳಿಗಿಂತ ಮುಖ್ಯವಾಗಿ ಮಹಿಳೆಯರಿಗೆ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ (Free Bus) ಪ್ರಯಾಣಿಸಬಹುದಾದ ಶಕ್ತಿ ಯೋಜನೆ (Shakti scheme) ಹೆಚ್ಚು ಯಶಸ್ವಿಯಾಗಿದೆ (successful) ಎನ್ನಬಹುದು.

ಈ ಯೋಜನೆ ಆರಂಭವಾಗಿ ಮೂರು ತಿಂಗಳು ಕಳೆದಿದೆ, ಈಗಾಗಲೇ ಮಹಿಳೆಯರು ಉಚಿತವಾಗಿ ಸುಲಭವಾಗಿ ಪ್ರಯಾಣ ಮಾಡುವಂತೆ ಆಗಿದೆ. ಇದರಿಂದ ಪ್ರಯಾಣ (Travel) ಮಾಡುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ; ಸಿಗಲಿದೆ ಉಚಿತ ಹೊಲಿಗೆ ಯಂತ್ರ

ಫ್ರೀ ಬಸ್ ಸೌಲಭ್ಯ, ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ! ಸರ್ಕಾರದಿಂದ ಮಹತ್ವದ ನಿರ್ಧಾರ - Kannada News

ಆರಂಭದಲ್ಲಿ ಶಕ್ತಿ ಯೋಜನೆಯಿಂದ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿದ್ದವು. ಮಹಿಳೆಯರಿಂದ ಇತರ ಪ್ರಯಾಣಿಕರಿಗೂ ತೊಂದರೆಯಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ, ಈ ರೀತಿಯ ಗೊಂದಲಗಳು ಆಗಿದ್ದು ಹೌದು, ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಈ ಸಮಸ್ಯೆ ಪರಿಹಾರವಾಗಿದೆ

ಇನ್ನು ಈ ಯೋಜನೆಯನ್ನು ಇನ್ನಷ್ಟು ಸಕ್ಸಸ್ ಫುಲ್ ಮಾಡಲು ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ, ಇದರಿಂದ ಮಹಿಳೆಯರಿಗೆ ಇನ್ನಷ್ಟು ಸಹಾಯಕವಾಗಲಿದೆ.

ಹೊಸ ಬಸ್ ಗಳ ಖರೀದಿಗೆ ಮುಂದಾದ ಸರ್ಕಾರ

ಕರ್ನಾಟಕ ರಾಜ್ಯ ಸಾರಿಗೆ ವ್ಯವಸ್ಥೆ (KSRTC) ಅತ್ಯುತ್ತಮವಾಗಿದೆ ಎಂದು ಇತ್ತೀಚಿಗೆ ಪ್ರಶಸ್ತಿ (Awards) ಪುರಸ್ಕಾರಗಳು ಕೂಡ ಸಂದಾಯವಾಗಿವೆ. ಈ ನಿಟ್ಟಿನಲ್ಲಿ ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸುವ ಸಲುವಾಗಿ ಹೊಸ ಬಸ್ (New buses) ಗಳನ್ನು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರ ಭೂಸಾರಿಗೆ ನಿರ್ದೇಶನಾಲಯದ ನೆರವಿನಿಂದ ಗೋಕುಲ ರಸ್ತೆ ಬಸ್ ನಿಲ್ದಾಣ (Gokul Road Bus Stand) ವನ್ನು 23.48 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗುವುದು.

ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ 50 ಹೊಸ ಬಸ್ಗಳಿಗೆ ಚಾಲನೆ ನೀಡಿದ ಅವರು ಸಾರಿಗೆ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ

ಸಾರಿಗೆ ಇಲಾಖೆಯ ಹೊಸ ವ್ಯವಸ್ಥೆ:

another Update on Shakti Yojana Free bus facility*ಧಾರವಾಡ ಬಸ್ ನಿಲ್ದಾಣವನ್ನು ಮರು ನಿರ್ಮಾಣ ಮಾಡುವುದು- ಇದಕ್ಕೆ ಡಲ್ಟ್ ನೆರವು – ತಗಲುವ ವೆಚ್ಚ 13 ಕೋಟಿ ರೂಪಾಯಿಗಳು.
* ಹುಬ್ಬಳ್ಳಿ ಧಾರವಾಡ ಮಾರ್ಗಕ್ಕೆ ಹತ್ತು ಸಾಮಾನ್ಯ ಹೊಸಗಳ ಬಿಡುಗಡೆ
*ಹುಬ್ಬಳ್ಳಿ ಧಾರವಾಡ ಮಾರ್ಗಕ್ಕೆ ನಾಲ್ಕು ಎಕ್ಸೆಲ್ ಐಷಾರಾಮಿ ಬಸ್ ಗಳ ಬಿಡುಗಡೆ
*ಹುಬ್ಬಳ್ಳಿ ಧಾರವಾಡಕ್ಕೆ 20 ನಾನ್ ಎಸಿ ಬಸ್ಗಳ (non AC bus) ಬಿಡುಗಡೆ
*ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲು 15 ಕೋಟಿ ರೂಪಾಯಿಗಳನ್ನು ಮೀಸಲು ಇಡುವುದು.
ಈ ಹೊಸ ಯೋಜನೆಗಳನ್ನು ಹಾಕಿಕೊಂಡಿರುವ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದ್ದಾರೆ.

ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

ಹೊಸ ಬಸ್ ಖರೀದಿ ಜೊತೆಗೆ ಉದ್ಯೋಗ ಸೃಷ್ಟಿ:

2018 ರಿಂದ ಕರ್ನಾಟಕ ಸಾರಿಗೆ ಹೊಸ ಬಸ್ ಗಳು ಬಂದಿಲ್ಲ. ಅಲ್ಲದೆ 2017ರಿಂದ ಹೊಸ ಸಿಬ್ಬಂದಿಗಳ ನೇಮಕಾತಿ ಕೂಡ ಆಗಿಲ್ಲ. ಏಳು ವರ್ಷಗಳಲ್ಲಿ ಎಂಟರಿಂದ ಹತ್ತು ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಗಳು ನಿವೃತ್ತಿ ಹೊಂದಿದ್ದಾರೆ.

ಹಾಗಾಗಿ ಈ ವರ್ಷ ಹೊಸ ಬಸ್ಸುಗಳ ಖರೀದಿಯ ಜೊತೆಗೆ 1300 ಹೊಸ ಸಿಬ್ಬಂದಿಗಳ ನೇಮಕಾತಿ (new post) ಕೂಡ ಮಾಡಿಕೊಳ್ಳಲಾಗುವುದು ಎನ್ನುವ ಗುಡ್ ನ್ಯೂಸ್ ನೀಡಿದ್ದಾರೆ ಸಚಿವ ರಾಮಲಿಂಗ ರೆಡ್ಡಿ.

ಈ ತಪ್ಪು ಮಾಡಿದ್ರೆ ಗೃಹಲಕ್ಷ್ಮಿ ಯೋಜನೆ ₹2,000 ಬರೋದಿರಲಿ, ನಿಮ್ಮ ಮೇಲೆಯೇ ಬೀಳುತ್ತೆ ದಂಡ

ಶಕ್ತಿ ಯೋಜನೆಯ ಯಶಸ್ವಿ:

ಇನ್ನು ಶಕ್ತಿ ಯೋಜನೆಯ ಬಗ್ಗೆ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಯಾವುದೇ ನಷ್ಟ ಆಗಿಲ್ಲ ಸರ್ಕಾರ ಕಾಲಕ್ಕೆ ಹಣ ಬಿಡುಗಡೆ ಮಾಡುತ್ತಿರುವುದರಿಂದ ಸಿಬ್ಬಂದಿಗಳಿಗೂ ತೊಂದರೆ ಆಗಿಲ್ಲ. ಈಗ ಹೊಸ ಬಸ್ಸುಗಳನ್ನು ಕೂಡ ಖರೀದಿ ಮಾಡಿ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ಕೃಷ್ಟ ಮಟ್ಟಕ್ಕೆ ಏರಿಸಲಾಗುವುದು ಎಂದು ತಿಳಿಸಿದ್ದಾರೆ.

another Update on Shakti Yojana Free bus facility

Follow us On

FaceBook Google News

another Update on Shakti Yojana Free bus facility