ಗೃಹಜ್ಯೋತಿ! ಯಾರಿಗೆ ಇನ್ನೂ ಜೀರೋ ಬಿಲ್ ಬಂದಿಲ್ವೋ ಅಂತವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ

200 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತಿದ್ದರೂ ಜೀರೋ ಬಿಲ್ ಸಿಗುತ್ತಿಲ್ಲ, ಅವರು ವಿದ್ಯುತ್ ಬಿಲ್ ಕಟ್ಟಬೇಕಾಗಿದೆ. ಇಂತಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಇದಕ್ಕೆ ಇಲ್ಲಿದೆ ಉತ್ತಮ ಪರಿಹಾರ.

ಇತ್ತೀಚಿನ ದಿನಗಳಲ್ಲಿ ಹಣದುಬ್ಬರದಿಂದ ಜನ ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್ (petrol – Diesel Price) ಡೀಸೆಲ್ ಬೆಲೆ ಜಾಸ್ತಿ, ಆಹಾರ ಪದಾರ್ಥಗಳ (food price increase) ಬೆಲೆ ಜಾಸ್ತಿ, ಬ್ಯಾಂಕ್ ಲೋನ್ (Bank Loan) ಇಂದ ಹಿಡಿದು ಟ್ಯಾಕ್ಸ್ ವರೆಗೂ ದರ ಏರಿಕೆ ಆಗಿದೆ.

ಇಷ್ಟೇ ಅಲ್ಲ ನಾವು ನಿತ್ಯವೂ ಬಳಸಲೇಬೇಕಾದ ವಿದ್ಯುತ್ ಯೂನಿಟ್ (electricity) ದರ ಕೂಡ ದುಬಾರಿಯಾಗಿದೆ. ಅದೆಷ್ಟೋ ಮನೆಗಳಲ್ಲಿ ಸಾವಿರ ಎರಡು ಸಾವಿರ ರೂಪಾಯಿಗಳಷ್ಟು ಪ್ರತಿ ತಿಂಗಳು ವಿದ್ಯುತ್ ಬಿಲ್ (Electricity Bill) ಕಟ್ಟಬೇಕು.

ಫ್ರೀ ಬಸ್ ಸೌಲಭ್ಯ, ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ! ಸರ್ಕಾರದಿಂದ ಮಹತ್ವದ ನಿರ್ಧಾರ

ಗೃಹಜ್ಯೋತಿ! ಯಾರಿಗೆ ಇನ್ನೂ ಜೀರೋ ಬಿಲ್ ಬಂದಿಲ್ವೋ ಅಂತವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ - Kannada News

ಗೃಹಜ್ಯೋತಿ ಯೋಜನೆ (Gruha Jyothi Yojana) ಆರಂಭ

ವಿದ್ಯುತ್ ಬಿಲ್ ಬರಿಸಲು ಸಾಧ್ಯವಿಲ್ಲ ಎಂದು ಜನ ಬೇಸರಗೊಳ್ಳುತ್ತಿರುವ ಸಮಯಕ್ಕೆ ಸರಿಯಾಗಿ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಅನೌನ್ಸ್ ಮಾಡಿತ್ತು. ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ (200 unit) ವಿದ್ಯುತ್ ಗಿಂತಲೂ ಕಡಿಮೆ ವಿದ್ಯುತ್ ಬಳಸುವವರಿಗೆ ಸಂಪೂರ್ಣ ಉಚಿತ ವಿದ್ಯುತ್ ಲಭ್ಯವಾಗಲಿದೆ.

ಹೌದು ರಾಜ್ಯ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಮನೆಯ ದೀಪಗಳು ಉಚಿತವಾಗಿ ಬೆಳಗುತ್ತಿವೆ ಎನ್ನಬಹುದು. ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ಗಿಂತಲೂ ವಿದ್ಯುತ್ ಕಡಿಮೆ ಬಳಸಿದರೆ ಅಂಥವರ ಮನೆಗಳಿಗೆ ವಿದ್ಯುತ್ ಝೀರೋ ಆಗಿರುತ್ತದೆ.

ಇದಕ್ಕಾಗಿ ಒಂದು ವರ್ಷದ ಆವರೇಜ್ ಬಿಲ್ (Average bill) ಪರಿಶೀಲನೆ ಮಾಡಿ, 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸಿರುವವರಿಗೆ ಈ ಸೌಲಭ್ಯ ಸಿಕ್ಕಿದೆ.

ಉದಾಹರಣೆಗೆ ನಿಮ್ಮ ಮನೆಯ ಆವರೇಜ್ ಯೂನಿಟ್ 160 ಎಂದಿಟ್ಟುಕೊಳ್ಳಿ. ಇದಕ್ಕೆ 10 ಯೂನಿಟ್ ಹೆಚ್ಚುರಿಯಾಗಿ ಸೇರಿಸಿ 170 ಯೂನಿಟ್ ವಿದ್ಯುತ್ ವರೆಗೆ ನೀವು ಬಳಸಬಹುದು. ಒಟ್ಟಿನಲ್ಲಿ 200 ಯೂನಿಟ್ ಗಿಂತಲೂ ವಿದ್ಯುತ್ ಬಳಕೆ ಕಡಿಮೆ ಇರಬೇಕು.

ಬಾಡಿಗೆ ಮನೆ ನಿಯಮಗಳಲ್ಲಿ ಭಾರೀ ಬದಲಾವಣೆ; ಕೇಂದ್ರ ಸರ್ಕಾರದ ಹೊಸ ರೂಲ್ಸ್ ತಿಳಿಯಿರಿ

ಬಾಡಿಗೆದಾರರಿಗೆ ಹೆಚ್ಚು ಅನುಕೂಲ;

Gruha jyothi schemeಗೃಹ ಜ್ಯೋತಿ ಯೋಜನೆ ಕೇವಲ ಮನೆಯ ಓನರ್ ಗಳಿಗೆ ಮಾತ್ರ ಲಭ್ಯವಿದ್ದರೆ ಸಮಸ್ಯೆ ಆಗುತ್ತಿತ್ತು. ಆದರೆ ಬಾಡಿಗೆದಾರರು ಕೂಡ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿದೆ.

ಇನ್ನು ಈ ಯೋಜನೆ ಆರಂಭವಾಗಿ ಮೂರು ತಿಂಗಳು ಕಳೆದಿದೆ. ಇತ್ತೀಚಿನ ದಿನಗಳಲ್ಲಿ ಹಲವರ ಪ್ರಶ್ನೆ ಅಂದರೆ ಹಲವರು 200 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತಿದ್ದರೂ ಜೀರೋ ಬಿಲ್ ಸಿಗುತ್ತಿಲ್ಲ, ಅವರು ವಿದ್ಯುತ್ ಬಿಲ್ ಕಟ್ಟಬೇಕಾಗಿದೆ. ಇಂತಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಇದಕ್ಕೆ ಇಲ್ಲಿದೆ ಉತ್ತಮ ಪರಿಹಾರ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ; ಸಿಗಲಿದೆ ಉಚಿತ ಹೊಲಿಗೆ ಯಂತ್ರ

ಇಲ್ಲಿಗೆ ದೂರು ಸಲ್ಲಿಸಿ;

ಎಸ್ಕಾಂನ ಉಪ ವಿಭಾಗೀಯ ಕಚೇರಿ ಅಥವಾ ನಿಮ್ಮ ತಾಲೂಕಿನಲ್ಲಿ ಇರುವ ವಿದ್ಯುತ್ ಕಚೇರಿಗೆ ಹೋಗಿ ನಿಮ್ಮ ದೂರನ್ನು ಸಲ್ಲಿಸಿ, ಇದಕ್ಕೆ ನೀವು ನಿಮ್ಮ ಆವರೇಜ್ ವಿದ್ಯುತ್ ಬಿಲ್ ಈಗ ಬರುತ್ತಿರುವ ವಿದ್ಯುತ್ ಬಿಲ್ ಹಾಗೂ ಒಂದು ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಕೊಡಬೇಕಾಗುತ್ತದೆ.

ನಿಮ್ಮ ವಿದ್ಯುತ್ ಮೀಟರ್ ಸಂಖ್ಯೆಯನ್ನು ಹೇಳಿದರೆ ಅವರು ಪರಿಶೀಲನೆ ಮಾಡುತ್ತಾರೆ. ಇದರಿಂದಾಗಿ ನಿಮಗೆ ಉಚಿತ ವಿದ್ಯುತ್ ಬರುವ ಎಲ್ಲಾ ಅರ್ಹತೆ ಇದ್ದರೂ ಕೂಡ ವಿದ್ಯುತ್ ಬಿಲ್ ಕಟ್ಟಬೇಕಾಗಿ ಬಂದರೆ ಅದನ್ನು ಕಡಿತ ಮಾಡಲಾಗುವುದು.

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ

ಮತ್ತೆ ಅರ್ಜಿ ಸಲ್ಲಿಸಬಹುದೇ

ಗೃಹ ಜ್ಯೋತಿ ಯೋಜನೆಗೆ ಆನ್ಲೈನ್ ಹಾಗೂ ಆಫ್ಲೈನ್ ನಲ್ಲಿ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿತ್ತು, ಸದ್ಯ ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ಇತರ ಯೋಜನೆಗಳ ಹಣ ಬಿಡುಗಡೆಯಲ್ಲಿ ಸಕ್ರಿಯವಾಗಿರುವ ಸರ್ಕಾರ ಸದ್ಯದಲ್ಲಿಯೇ ಮತ್ತೆ ಗೃಹ ಜ್ಯೋತಿ ಯೋಜನೆಯ ಅಪ್ಲಿಕೇಶನ್ ತೆಗೆದುಕೊಳ್ಳುವ ಸಾಧ್ಯತೆ ಇದೆ, ಇದರಿಂದ ಈಗ ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಜನರು ಮತ್ತೆ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು.

Update to those who have not received zero Electricity bill yet for Gruha Jyothi Scheme

Follow us On

FaceBook Google News

Update to those who have not received zero Electricity bill yet for Gruha Jyothi Scheme