ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ (Aadhaar card) ಅನ್ನುವುದು ಎಷ್ಟು ಮುಖ್ಯವೋ ಅಷ್ಟೇ ರೇಷನ್ ಕಾರ್ಡ್ (Ration card) ಕೂಡ ಮುಖ್ಯವಾಗಿರುವ ದಾಖಲೆಯಾಗಿದೆ. ಒಂದು ವೇಳೆ ಸರ್ಕಾರದ ಯಾವುದೇ ರೀತಿಯ ಯೋಜನೆಗಳ ಪ್ರಯೋಜನ ಸಿಗಬೇಕು ಅಂದ್ರೆ ರೇಷನ್ ಕಾರ್ಡ್ ಹೊಂದಿರಬೇಕು
ಅದು ಎಪಿಎಲ್ (APL card) ಆಗಿರಬಹುದು ಅಥವಾ ಬಿಪಿಎಲ್ (BPL card) ಆಗಿರಬಹುದು. ಆದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಎಪಿ ಎಲ್ ಕಾರ್ಡ್ ಹೊಂದಿರುವವರಿಗಿಂತ ಹೆಚ್ಚಿನ ಲಾಭ ಸಿಗುತ್ತದೆ.
ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿನವರಿಗೆ (low poverty line) ಕೊಡಲಾಗುತ್ತೆ ಆದರೆ ಅದೆಷ್ಟೋ ಜನ ಅನುಕೂಲಸ್ಥರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವುದು ನಿಜಕ್ಕೂ ದುರದೃಷ್ಟಕರ. ಯಾಕಂದ್ರೆ ಸಾಕಷ್ಟು ಜನರಿಗೆ ಇದರ ಪ್ರಯೋಜನ ಸಿಗುವುದಿಲ್ಲ.
ಗೃಹಜ್ಯೋತಿ! ಯಾರಿಗೆ ಇನ್ನೂ ಜೀರೋ ಬಿಲ್ ಬಂದಿಲ್ವೋ ಅಂತವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಕೇಂದ್ರ ಸರ್ಕಾರ ರೂಪಿಸಿದ ಹೊಸ ನಿಯಮ;
ಬಿಪಿಎಲ್ ಕಾರ್ಡ್ ಯಾರಿಗೆ ತಲುಪಬೇಕು ಅವರಿಗೆ ತಲುಪಬೇಕು, ಅನಗತ್ಯವಾಗಿ ಎಲ್ಲಾ ಸೌಕರ್ಯ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಸರ್ಕಾರದ ಪ್ರಯೋಜನಗಳನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೂ ಬಂದಿದೆ. ರೇಷನ್ ಕಾರ್ಡ್ ಮರು ಮೌಲ್ಯಮಾಪನ ಆರಂಭವಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹೇಳುವುದೇನು?
ದೇಶದಲ್ಲಿ ಇರುವವರಿಗೆ ಬಿಪಿಎಲ್ ಕಾರ್ಡ್ ನೀಡುವ ಮೂಲಕ ಪೌಷ್ಟಿಕ ಆಹಾರಗಳು ಕೂಡ ಸಿಗಬೇಕು ಎನ್ನುವುದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಮೂಲ ಉದ್ದೇಶವಾಗಿದೆ.
ಈ ಕಾರಣಕ್ಕಾಗಿ ಪಡಿತರ ಚೀಟಿ ಮರು ಮೌಲ್ಯಮಾಪನ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ದೇಶದ ಅತಿ ದೊಡ್ಡ ಸಬ್ಸಿಡಿ ಯೋಜನೆಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹಾಗೂ ಎಲ್ ಪಿ ಜಿ ಮೇಲಿನ ಸಬ್ಸಿಡಿ ಕುರಿತು ಈಗ ಮರು ಮೌಲ್ಯಮಾಪನ ಮಾಡಲು ಸರ್ಕಾರ ನಿರ್ಧರಿಸಿದೆ.
ಇದಕ್ಕಾಗಿ 4 ಲಕ್ಷ ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ, ಇದು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಬಹಳ ಹೊರೆ ಆಗುವುದಂತೂ ನಿಜ ಆದರೂ ಲ್‌ಪಿಜಿಯಲ್ಲಿ ನೀಡುತ್ತಿರುವ ಸಬ್ಸಿಡಿ ಹಾಗೂ ಸೀಮೆಎಣ್ಣೆ ತುಲನೆಯಲ್ಲಿ ಬಳಕೆ ಕೂಡ 12.3% ನಷ್ಟು ಏರಿಕೆಯಾಗಿದೆ.
ಜನರಿಗೆ ಉಚಿತ ಪಡಿತರ ನೀಡುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು, ಇದಕ್ಕಾಗಿ ಸರ್ಕಾರ ಯೋಜನೆಗಳನ್ನು ಮರು ಮೌಲ್ಯಮಾಪನ ಮಾಡುವುದರ ಮೂಲಕ ಎಲ್ಲಿಯೂ ಸೋರಿಕೆ (leak) ಆಗದಂತೆ ಎಚ್ಚರ ವಹಿಸುತ್ತಿದೆ.
ಫ್ರೀ ಬಸ್ ಸೌಲಭ್ಯ, ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ! ಸರ್ಕಾರದಿಂದ ಮಹತ್ವದ ನಿರ್ಧಾರ
ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್;
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ; ಸಿಗಲಿದೆ ಉಚಿತ ಹೊಲಿಗೆ ಯಂತ್ರ
ಸರ್ಕಾರ ಈಗಾಗಲೇ ಮರು ಮೌಲ್ಯಮಾಪನ ಶುರು ಮಾಡಿದ್ದು ಸುಳ್ಳು ದಾಖಲೆಗಳನ್ನು ನೀಡಿ, ಫೇಕ್ ರೇಷನ್ ಕಾರ್ಡ್ ಮಾಡಿಸಿಕೊಂಡು ಸರ್ಕಾರದ ಬೆನಿಫಿಟ್ ಪಡೆದುಕೊಳ್ಳುವವರಿಗೆ ಹಾಗೂ ಒಂದು ವೇಳೆ ಈ ರೀತಿ ವಂಚನೆ ಮಾಡಿ ಎಲ್ಪಿಜಿ ಸಬ್ಸಿಡಿ (LPG subsidy) ಪಡೆದುಕೊಳ್ಳುವುದು ಹಾಗೂ ಉಚಿತ ಪಡಿತರ ಪಡೆದುಕೊಳ್ಳುವುದನ್ನು ಮಾಡುವುದು ಸರ್ಕಾರದ ಗಮನಕ್ಕೆ ಬಂದರೆ ತಕ್ಷಣವೇ ಅಂತವರ ರೇಷನ್ ಕಾರ್ಡ್ ರದ್ದತಿ ಕೂಡ ಆಗುತ್ತೆ.
ಇದೀಗ ರೇಷನ್ ಕಾರ್ಡ್ ಎನ್ನುವುದು ಕೇವಲ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದು ಮಾತ್ರವಲ್ಲದೇ ದೇಶಾದ್ಯಂತ ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಅಕ್ಕಿ ಪಡೆದುಕೊಳ್ಳಬೇಕು ಅಂದರೂ ಬೇಕಾಗುತ್ತದೆ.
ಈಗ ಯಾರ ಬಳಿ ರೇಷನ್ ಕಾರ್ಡ್ ಇದೆಯೋ ಅಂತವರ ರೇಷನ್ ಕಾರ್ಡ್ ಮರುಮೌಲ್ಯಮಾಪನ ಕೂಡ ಮಾಡಲಾಗುವುದು ಹಾಗಾಗಿ ಅರ್ಹತೆ ಇರುವವರಿಗೆ ಇನ್ನು ಮುಂದೆ ಬಿಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾಡು ಪಡೆದುಕೊಳ್ಳಲು ಅರ್ಹತೆ ಇಲ್ಲದವರು ಎಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು.
ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ
The ration card of such people will be canceled in a few days
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.