ಜೀರೋ ಬಿಲ್ ಪಡೆದಿದ್ದರೂ ಇಂತಹವರು ಈ ತಿಂಗಳ ಬಿಲ್ ಕಟ್ಟಲೇಬೇಕು! ಸರ್ಕಾರದ ಹೊಸ ಆದೇಶ
ಈ ಹಿಂದೆ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡದೆ ಹಾಗೆ ಬಾಕಿ ಉಳಿಸಿಕೊಂಡಿದ್ದಾರೋ ಅಂತವರ ವಿದ್ಯುತ್ ಬಿಲ್ ಪಾವತಿ ಆಗದೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ಗೃಹಜ್ಯೋತಿ ಯೋಜನೆ ಕಾಂಗ್ರೆಸ್ ಸರ್ಕಾರದ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಜನ ಉಚಿತ ವಿದ್ಯುತ್ ಸೌಲಭ್ಯ (Free Electricity Facility) ಪಡೆದುಕೊಳ್ಳುತ್ತಿದ್ದಾರೆ. 200 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ ಯಾರು ಬಳಸುತ್ತಿದ್ದಾರೋ ಅಂತವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದವರಲ್ಲಿ ಅರ್ಧಕರ್ಧದಷ್ಟು ಜನ ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. 2022 ಮಾರ್ಚ್ ತಿಂಗಳಿನಿಂದ 2023 ಏಪ್ರಿಲ್ ತಿಂಗಳವರೆಗೆ ಒಂದು ವರ್ಷದ ವಿದ್ಯುತ್ ಬಳಕೆಯ ಆವರೇಜ್ (average electricity usage) ಲೆಕ್ಕಾಚಾರ ತೆಗೆದು, ಮೀರದೆ ಇದ್ದಲ್ಲಿ ಅಂದವರಿಗೆ ಜೀರೋ ವಿದ್ಯುತ್ ಬಿಲ್ (zero electricity bill) ಬರುತ್ತದೆ.
ಎಲ್ಲಾ ದಾಖಲೆ ಸರಿ ಇದ್ರೂ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ನಿಮ್ಮ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ?
ಆದರೆ ಆವರೇಜ್ ಲೆಕ್ಕಾಚಾರದಲ್ಲಿ 200 ಯೂನಿಟ್ ಮೀರಿದರೆ ಅಂಥವರಿಗೆ ಒಂದು ರೂಪಾಯಿಗಳ ಸೌಲಭ್ಯ ಕೂಡ ಸಿಗುವುದಿಲ್ಲ, ಅಂದರೆ ಸಂಪೂರ್ಣ ಬಿಲ್ ಪಾವತಿ ಮಾಡಬೇಕು.
ಯೋಜನೆಯ ಮತ್ತೊಂದು ಮುಖ್ಯ ಬೆನಿಫಿಟ್ ಅಂದ್ರೆ ಇದು ಕೇವಲ ಸ್ವಂತ ಮನೆ (Own House) ಹೊಂದಿರುವವರಿಗೆ ಮಾತ್ರವಲ್ಲ ಬಾಡಿಗೆ ಮನೆಯಲ್ಲಿ (rented house) ವಾಸಿಸುವವರಿಗೂ ಕೂಡ ಪ್ರಯೋಜನವಾಗಿದೆ. ಇನ್ನು ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಇಂಥವರಿಗೆ ಸಿಗುವುದಿಲ್ಲ… ಯಾರಿಗೆ ಗೊತ್ತೇ
ಹಿಂದಿನ ಬಾಕಿ ಪಾವತಿ ಮಾಡಿಲ್ಲವೇ
ಸರ್ಕಾರ ಜನರಿಗೆ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ, ಯಾರೆಲ್ಲಾ ಈ ಹಿಂದೆ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡದೆ ಹಾಗೆ ಬಾಕಿ ಉಳಿಸಿಕೊಂಡಿದ್ದಾರೋ ಅಂತವರ ವಿದ್ಯುತ್ ಬಿಲ್ ಪಾವತಿ ಆಗದೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ಅಂದರೆ ಬೆಸ್ಕಾಂನಲ್ಲಿ (BESCOM) ನಿಮ್ಮ ಹೆಸರಿನಲ್ಲಿ ಯಾವುದೇ ವಿದ್ಯುತ್ ಬಿಲ್ ಬಾಕಿ ಇರಬಾರದು, ಹಾಗೇನಾದರೂ ಬಾಕಿ ಉಳಿದಲ್ಲಿ ನಿಮಗೆ ಯಾವ ಪ್ರಯೋಜನ ಕೂಡ ಸಿಗುವುದಿಲ್ಲ. ಉಚಿತ ವಿದ್ಯುತ್ ಬದಲಿಗೆ ಎಷ್ಟು ಯೂನಿಟ್ ಖರ್ಚು ಮಾಡಿದ್ದಿರೋ ಅಷ್ಟು ಬಿಲ್ಲನ್ನು ಪಾವತಿ ಮಾಡಬೇಕಾಗುತ್ತದೆ.
ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಹಣವೂ ಇಲ್ಲ, ಅಕ್ಕಿಯೂ ಇಲ್ಲ! ಮತ್ತೇನು ಸಿಗಲಿದೆ ಗೊತ್ತಾ?
ಈ ಹಿಂದೆ ಹಳೆಯ ಬಾಕಿ ಇದ್ದವರಿಗು ಕೂಡ ಗೃಹ ಜ್ಯೋತಿಯ ಯೋಜನೆಯ ಪ್ರಯೋಜನ ಸಿಗುತ್ತದೆ ಎನ್ನುವ ಮಾತು ಕೇಳಿ ಬಂದಿತ್ತು. ಸರ್ಕಾರ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು ನೀವು ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದರೆ ಅಂತವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಸ್ಥಗಿತ
ಸದ್ಯ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ವರ್ಷದ ಕೊನೆಯಲ್ಲಿ ಅಂದರೆ ಬಹುಶಹ ಡಿಸೆಂಬರ್ ತಿಂಗಳಿನಿಂದ ಮತ್ತೆ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬಹುದು ಸರ್ಕಾರ.
ಫ್ರೀ ಕರೆಂಟ್; ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂದಿದ್ರು ಇಂಥವರಿಗೆ ನೋಟಿಸ್! ಯಾಕೆ ಗೊತ್ತಾ?
ಈ ಬಗ್ಗೆ ಯಾವುದೇ ಹೊಸ ಮಾಹಿತಿಯನ್ನು ಕೂಡ ಸರ್ಕಾರ ನೀಡಿಲ್ಲ, ಆದರೆ ಯಾರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುತ್ತಾರೋ ಅಂತವರು ಮಾತ್ರ ಮುಂದೆಯೂ ವಿದ್ಯುತ್ ಬಿಲ್ ಪಾವತಿ ಮಾಡಲೇಬೇಕು ಎನ್ನುವ ನಿರ್ಧಾರ ಸರ್ಕಾರ ಕೈಗೊಳ್ಳಲಿದೆ.
Even if they get zero bill, such people have to pay this month Electricity bill
Follow us On
Google News |