ಎಲ್ಲಾ ದಾಖಲೆ ಸರಿ ಇದ್ರೂ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ನಿಮ್ಮ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ?
ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಅಡಿಯಲ್ಲಿ 2,000ಗಳನ್ನು ಉಚಿತವಾಗಿ ಪಡೆದುಕೊಳ್ಳಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು
ರಾಜ್ಯ ಸರ್ಕಾರ ಕಳೆದ ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಅಡಿಯಲ್ಲಿ 2000 ಗಳನ್ನು ಪ್ರತಿ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಜಮಾ ಮಾಡುತ್ತಿದೆ.
ಈಗಾಗಲೇ ಹಲವರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ, ಆದರೆ ಇನ್ನಷ್ಟು ಫಲಾನುಭವಿಗಳು ಮೊದಲ ಕಂತಿನ ಹಣ (first installment) ಒಂದು ತಿಂಗಳು ಕಳೆದರೂ ತಮ್ಮ ಖಾತೆಗೆ ಬಂದಿಲ್ಲ ನಮ್ಮ ಬಳಿ ಇರುವ ದಾಖಲೆಗಳು (documents) ಸರಿಯಾಗಿಯೇ ಇದೆ ಆದರೂ ಹಣ ಬಂದಿಲ್ಲ ಯಾಕೆ ಎನ್ನುವ ಚಿಂತೆಯಲ್ಲಿ ಇದ್ದಾರೆ. ಸದ್ಯ ಈ ನಿಮ್ಮ ಪ್ರಶ್ನೆಗೆ ಉತ್ತರಿಸಲು ನಾವು ಪ್ರಯತ್ನಿಸುತ್ತೇವೆ.
ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಹಣವೂ ಇಲ್ಲ, ಅಕ್ಕಿಯೂ ಇಲ್ಲ! ಮತ್ತೇನು ಸಿಗಲಿದೆ ಗೊತ್ತಾ?
ಎಲ್ಲ ದಾಖಲೆ ಸರಿ ಇದ್ರೂ ಹಣ ಬರುತ್ತಿಲ್ಲ ಯಾಕೆ?
ಈಗಾಗಲೇ ರಾಜ್ಯ ಸರ್ಕಾರ ಎರಡನೇ ಕಂತಿನ 2,000ಗಳನ್ನು ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡುವ (Money Deposit) ಪ್ರಕ್ರಿಯೆ ಆರಂಭಿಸಿದೆ. ಆದರೆ ಸಾಕಷ್ಟು ಮಹಿಳೆಯರಿಗೆ ಇನ್ನು ಮೊದಲ ಕಂತಿನ ಹಣವೇ ಬಂದಿಲ್ಲ.
ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಅಡಿಯಲ್ಲಿ 2,000ಗಳನ್ನು ಉಚಿತವಾಗಿ ಪಡೆದುಕೊಳ್ಳಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಮೊಟ್ಟ ಮೊದಲನೆಯದಾಗಿ ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರೇ ಮೊದಲಿನ ಸ್ಥಾನದಲ್ಲಿ ಇರಬೇಕು ಅಂದರೆ ಮನೆಯ ಯಜಮಾನಿಯ ಹೆಸರಿನಲ್ಲಿ ರೇಷನ್ ಕಾರ್ಡ್ ಇರಬೇಕು.
ಫ್ರೀ ಕರೆಂಟ್; ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂದಿದ್ರು ಇಂಥವರಿಗೆ ನೋಟಿಸ್! ಯಾಕೆ ಗೊತ್ತಾ?
ಎರಡನೆಯದಾಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು. ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಈಕೆವೈ ಸಿ ಮಾಡಿಸಿಕೊಂಡಿರಬೇಕು. ಅದೇ ರೀತಿ ಫಲಾನುಭವಿ ಮಹಿಳೆಯರ ಹೆಸರು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಒಂದೇ ತರನಾಗಿ ಇರಬೇಕು ಹೆಸರುಗಳು ಒಂದಕ್ಕೊಂದು ಮ್ಯಾಚ್ ಆಗಬೇಕು.
ಈ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದಾಗ ಮಾತ್ರ ನಿಮಗೆ 2000 ಉಚಿತವಾಗಿ ನಿಮ್ಮ ಖಾತೆಗೆ ನೇರ ವರ್ಗಾವಣೆ (Money Transfer) ಆಗುತ್ತದೆ. ಯಾರಿಗೆಲ್ಲ ಎಲ್ಲಾ ದಾಖಲೆಗಳು ಸರಿಯಾಗಿಯೇ ಇದ್ದು ಮೊದಲ ಕಂತಿನ ಹಣ ಬಂದಿಲ್ಲವೋ ಅಂತವರಿಗೆ ಎರಡು ಕಂತಿನ ಹಣವನ್ನು ಸೇರಿಸಿ ಒಟ್ಟಿಗೆ 4000 ಗಳನ್ನು ಜಮಾ ಮಾಡುವುದಾಗಿ ಸರ್ಕಾರ ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆ 2ನೇ ಕಂತು ಯಾವಾಗ ನಿಮ್ಮ ಬ್ಯಾಂಕ್ ಖಾತೆಗೆ ಸೇರಲಿದೆ ಗೊತ್ತ? ಪಕ್ಕಾ ಮಾಹಿತಿ
ಇನ್ನು ನೀವು ನಿಮ್ಮ ಖಾತೆಯಲ್ಲಿ ಅಗತ್ಯ ಇರುವ ಎಲ್ಲಾ ಬದಲಾವಣೆಗಳನ್ನು ಮಾಡಿಸಿಕೊಂಡಿದ್ದರು ಕೂಡ ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದಾಗಿ ಅದು ಅಪ್ಡೇಟ್ ಆಗಿರುವುದಿಲ್ಲ. ಆದ್ದರಿಂದ ನೀವು ಮತ್ತೆ ನಿಮ್ಮ ಬ್ಯಾಂಕ್ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಎಲ್ಲವೂ ಅಪ್ಡೇಟ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಮಹಿಳೆಯರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಬೇಸರಪಟ್ಟಿಕೊಳ್ಳುತ್ತಿದ್ದಾರೆ, ಅಂತವರಿಗೆ ಒಂದು ಗುಡ್ ನ್ಯೂಸ್ ಇದೆ. ನೀವು ನಿಮ್ಮ ಖಾತೆಯ ಎಲ್ಲಾ ವಿವರಗಳನ್ನು ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ತಿಳಿಸಿದರೆ ಅವರು ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಅದಕ್ಕೆ ಪರಿಹಾರ ಹೇಳುತ್ತಾರೆ ಅಥವಾ ನೀವು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಅಲ್ಲಿನ ಸಹಾಯಕಿ ಅಥವಾ ಟೀಚರ್ ಬಳಿ ನಿಮ್ಮ ಸಮಸ್ಯೆಯನ್ನು ಹೇಳಿ ಖಾತೆಯಲ್ಲಿ ಏನಾದರೂ ತೊಂದರೆ ಇದೆ ಎಂಬುದನ್ನು ಪರಿಶೀಲಿಸಿಕೊಳ್ಳಿ.
ಬೆಳ್ಳಂಬೆಳಿಗ್ಗೆ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್! ಸರ್ಕಾರದ ಮಹತ್ವದ ನಿರ್ಧಾರ ಏನು ಗೊತ್ತಾ?
ಸರ್ಕಾರ ಈಗಾಗಲೇ ಕೆಲವು ಫಲಾನುಭವಿಗಳ ಹೆಸರುಗಳು ಇರುವ ಪಟ್ಟಿಯನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಿದ್ದು ಆಯಾ ತಾಲೂಕಿನ ಅಂಗನವಾಡಿ ಸಹಾಯಕಿಯರು ನಿಮ್ಮ ಮನೆಗೆ ಬಂದು 2000 ನಿಮ್ಮ ಖಾತೆಗೂ ಬರುವಂತೆ ಮಾಡಲಿದ್ದಾರೆ.
ಆದ್ದರಿಂದ ಯಾರಿಗೆಲ್ಲ ಇದುವರೆಗೆ 2,000 ಬಂದಿಲ್ಲ ಎನ್ನುವ ಯೋಚನೆ ಇದೆಯೋ ಅವರು ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಮುಂದಿನ ತಿಂಗಳಿನಿಂದ ನಿಮ್ಮ ದಾಖಲೆಗಳು ಸರಿ ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
Why Gruha Lakshmi Yojana Money has not reached your Bank account even though all the documents are correct