Story Highlights
80% ನಷ್ಟು ಫಲಾನುಭವಿ ಮಹಿಳೆಯರು ಮೊದಲ ಕಂತಿನ ಹಣವನ್ನು ಸ್ವೀಕರಿಸಿದ್ದಾರೆ. ಎಲ್ಲರ ಬ್ಯಾಂಕ್ ಖಾತೆಗೆ (Bank Account) ಹಣ ಬಂದು ತಲುಪಿದೆ.
ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಮೊದಲನೆಯ ಕಂತಿನ ಹಣ ಬರೋಬ್ಬರಿ 84 ಲಕ್ಷ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಿದೆ (Money Deposit). ಒಟ್ಟು ಅರ್ಜಿ (Application) ಸಲ್ಲಿಸಿದವರ ಸಂಖ್ಯೆ 1.13 ಕೋಟಿ ಮಹಿಳೆಯರು.
ಹಾಗಾಗಿ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸುಮಾರು 80% ನಷ್ಟು ಫಲಾನುಭವಿ ಮಹಿಳೆಯರು ಮೊದಲ ಕಂತಿನ ಹಣವನ್ನು ಸ್ವೀಕರಿಸಿದ್ದಾರೆ. ಎಲ್ಲರ ಬ್ಯಾಂಕ್ ಖಾತೆಗೆ (Bank Account) ಹಣ ಬಂದು ತಲುಪಿದೆ.
ಎಲ್ಲಾ ದಾಖಲೆ ಸರಿ ಇದ್ರೂ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ನಿಮ್ಮ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ?
ನಿಮಗೆ ಇನ್ನೂ ಹಣ ಬಂದಿಲ್ವಾ?
ಇದು ಹಲವು ಮಹಿಳೆಯರ ಗೋಳು, ನಮ್ಮ ಎಲ್ಲಾ ದಾಖಲೆಗಳು ಸರಿಯಾಗಿಯೇ ಇದೆ.. ಸರ್ಕಾರ ಹೇಳಿರುವ ಎಲ್ಲ ನಿಯಮಗಳನ್ನು ಪಾಲಿಸಿದ್ದೇವೆ. ಆದರೂ ಕೂಡ ನಮ್ಮ ಖಾತೆಗೆ ಹಣ (DBT) ಬಂದಿಲ್ಲ ಅಂತ ಹಲವು ಫಲಾನುಭವಿ ಮಹಿಳೆಯರು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಕೆಲವರು ತಮ್ಮ ಖಾತೆ ಹಾಗೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (ration card correction) ಮಾಡಿಕೊಂಡಿದ್ದರು, ಅದು ಅಪ್ಡೇಟ್ (update) ಆಗದೆ ಇರುವ ಹಿನ್ನೆಲೆಯಲ್ಲಿ ಸರ್ಕಾರದ ಡೇಟಾ ಬೇಸ್ ಮಾಹಿತಿ ಲಭ್ಯವಾಗಿರುವುದಿಲ್ಲ. ಇದರಿಂದಾಗಿ ಹಲವರ ಖಾತೆಗೆ ಹಣ ವರ್ಗಾವಣೆ (Money Transfer) ಆಗಿಲ್ಲ.
ಇನ್ನು ಮೊದಲ ಕಂತಿನ ಹಣ ಬಾರದೆ ಇದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ ಫಲಾನುಭವಿಗಳಿಗೆ ಎರಡನೇ ಕಂತಿನ ಹಣವನ್ನು ಕೂಡ ಒಟ್ಟಿಗೆ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿದೆ. ಹಾಗಾಗಿ ಅಕ್ಟೋಬರ್ 15 ರ ಒಳಗೆ ಫಲಾನುಭವಿಗಳಿಗೆ 4,000 ರೂಪಾಯಿಗಳು ಒಟ್ಟಿಗೆ ಬರಬಹುದು ಹಾಗೂ ಮೊದಲನೇ ಕಂತಿನ ಹಣ ಸ್ವೀಕರಿಸಿದವರಿಗೆ ಎರಡನೇ ಕಂತಿನ ಹಣ ಎರಡು ಸಾವಿರ ರೂಪಾಯಿಗಳು ನೇರವಾಗಿ ಖಾತೆಗೆ ವರ್ಗಾವಣೆ ಆಗಬಹುದು.
ಜೀರೋ ಬಿಲ್ ಪಡೆದಿದ್ದರೂ ಇಂತಹವರು ಈ ತಿಂಗಳ ಬಿಲ್ ಕಟ್ಟಲೇಬೇಕು! ಸರ್ಕಾರದ ಹೊಸ ಆದೇಶ
ಎರಡನೇ ಕಂತಿನ ಹಣ ಬಿಡುಗಡೆ ಯಾವಾಗ
ಸೆಪ್ಟೆಂಬರ್ 30ರಂದೇ ಎರಡನೇ ಕಂತಿನ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಎಲ್ಲರ ಖಾತೆಗೆ ಒಂದೇ ದಿನ ಹಣ ವರ್ಗಾವಣೆ ಆಗಲು ಸಾಧ್ಯವಿಲ್ಲ, ಹಾಗಾಗಿ ಪ್ರತಿದಿನ ಒಂದಷ್ಟು ಜಿಲ್ಲೆಯನ್ನು ಆಯ್ಕೆ ಮಾಡಿ ಆ ಜಿಲ್ಲೆಯ ಮಹಿಳೆಯರಿಗೆ ಮಾತ್ರ ಬಿಡುಗಡೆ ಮಾಡಲಾಗುತ್ತೆ. ಈಗಿರುವ ಮಾಹಿತಿಯ ಪ್ರಕಾರ ಅಕ್ಟೋಬರ್ 15 ರ ಒಳಗೆ ಪ್ರತಿ ಫಲಾನುಭವಿ ಮಹಿಳೆಯರ ಖಾತೆಗೆ ಎರಡು ಕಂತಿನ ಹಣ ಸಂದಾಯವಾಗಲಿದೆ.
ಇಂಥವರ ಖಾತೆಗೆ ಹಣ ಬರುವುದಿಲ್ಲ
ಇನ್ನು ಈಗಾಗಲೇ ರೇಶನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯ ಸಮಯದಲ್ಲಿ ಹಲವರ ರೇಷನ್ ಕಾರ್ಡ್ ಅನ್ನು ಸರ್ಕಾರ ರದ್ದುಪಡಿಸಿದೆ (ration card cancellation). ಹಾಗಾಗಿ ಮೊದಲನೆಯ ಕಂತಿನ ಹಣ ಬಂದಿರುವ ಮಹಿಳೆಯರ ರೇಷನ್ ಕಾರ್ಡ್ ರದ್ದು ಪಡಿ ಆಗಿದ್ದರೆ ಅಂತವರಿಗೆ ಎರಡನೇ ಕಂತಿನ ಹಣ ಬರುವುದಿಲ್ಲ.
ಅದೇ ರೀತಿ ರೇಷನ್ ಕಾರ್ಡ್ (Ration Card) ಮನೆಯ ಮಹಿಳೆಯ ಹೆಸರಿನಲ್ಲಿ ಇರಬೇಕು, ಒಂದು ವೇಳೆ ಮಹಿಳೆಯ ಹೆಸರಿನಲ್ಲಿ ರೇಷನ್ ಕಾರ್ಡ್ ಇರದೇ ಇದ್ದರೆ ಅಂತವರಿಗೂ ಹಣ ಬರುವುದಿಲ್ಲ.
ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಹಣವೂ ಇಲ್ಲ, ಅಕ್ಕಿಯೂ ಇಲ್ಲ! ಮತ್ತೇನು ಸಿಗಲಿದೆ ಗೊತ್ತಾ?
ಜೊತೆಗೆ ಹೊಸ ಅರ್ಜಿ ಸಲ್ಲಿಸಿದವರಿಗೆ ಮೊದಲ ಕಂತಿನ ಹಣ ಬಾರದೆ ಇರಬಹುದು. ಇನ್ನು ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವವರು ಸ್ವಲ್ಪ ಸಮಯ ಕಾಯಬೇಕು. ಮೊದಲ ಕಂತಿನ ಹಣ ಜಮಾ ಮಾಡುವ ಪ್ರಕ್ರಿಯೆ ಸಂಪೂರ್ಣಗೊಂಡ ನಂತರ ಮತ್ತೆ ಹೊಸ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ.
ಹಾಗಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸಿದರೆ ಈಗಾಗಲೇ ಸರ್ಕಾರ ತಿಳಿಸಿರುವಂತೆ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇನ್ನು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2,000ರೂ.ಗಳನ್ನು ಪಡೆದುಕೊಳ್ಳುವಲ್ಲಿ ಫಲಾನುಭವಿಗಳು ವಿಫಲವಾದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಅಂಗನವಾಡಿ ಕೇಂದ್ರದ ಸಹಾಯಕಿಯರನ್ನು ಸಂಪರ್ಕಿಸಬಹುದು ಎಂದು ಸರ್ಕಾರ ತಿಳಿಸಿದೆ.
Gruha Lakshmi Yojana second installment Money will not come to such people Bank Account