ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಚಿತವಾಗಿ (Free rice) 10 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ (BPL Ration card) ಹೊಂದಿರುವವರಿಗೆ ಪ್ರತಿ ತಿಂಗಳು ನೀಡುವುದಾಗಿ ಘೋಷಣೆ ಮಾಡಿತ್ತು.

ಆದರೆ ಕೇಂದ್ರ ಸರ್ಕಾರ (Central government) ಕೊಡುತ್ತಿರುವ 5 ಕೆಜಿ ಉಚಿತ ಅಕ್ಕಿಯನ್ನು ಹೊರತುಪಡಿಸಿ ರಾಜ್ಯ ಸರ್ಕಾರಕ್ಕೆ ಪುನಃ 5KG ಸೇರಿಸಿ ಕೊಡಲು ಅಗತ್ಯ ಇರುವಷ್ಟು ಅಕ್ಕಿ ಹೊಂದಿಸಲು ಸಾಧ್ಯವಾಗಲಿಲ್ಲ.

distribution of new ration card, Also the decision to cancel ration cards

ಹಾಗಾಗಿ ಕಳೆದ ಮೂರು ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಸರ್ಕಾರ ವರ್ಗಾವಣೆ (DBT) ಮಾಡುತ್ತಿದೆ.

ಮಹಿಳೆಯರಿಗೆ ಮಾತ್ರವಲ್ಲ ಯುವಕರಿಗೂ ಸಿಕ್ತು ಗುಡ್ ನ್ಯೂಸ್; ಹೊಸ ಯೋಜನೆ ಬಗ್ಗೆ ಸರ್ಕಾರದ ಅಪ್ಡೇಟ್

ಅಕ್ಕಿಯನ್ನು ಒದಗಿಸಲು ಪ್ರಯತ್ನಿಸುತ್ತೇವೆ

ಇತ್ತೀಚಿಗೆ ವಿಧಾನಸೌಧದಲ್ಲಿ (Vidhana soudha) ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ಅವರು ಅಕ್ಟೋಬರ್ ತಿಂಗಳಿನಿಂದಲೇ ಈ ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ತಿಂಗಳಿನ ಹಣ ಬಿಡುಗಡೆ ಮಾಡುವ ಬದಲು ಅಕ್ಕಿಯನ್ನು ಕೊಡುವ ಬಗ್ಗೆ ಕೊನೆಯ ಹಂತದ ಪ್ರಯತ್ನಗಳು ನಡೆಯುತ್ತಿದೆ. ಆದಷ್ಟು ಹಣದ ಬದಲು ಅಕ್ಕಿಯನ್ನು ಕೊಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಈಗ ಕೆಲವು ಕಡೆ ಬರದ ಪರಿಸ್ಥಿತಿ ಇದ್ದರೂ ಮುಂದೆ ಮಳೆ ಆಗುವ ನಿರೀಕ್ಷೆ ಇದೆ, ಅದರಂತೆ ಬೆಳೆ ಕೂಡ ಚೆನ್ನಾಗಿ ಆಗಬಹುದು. ಕೃಷಿ ಸುಧಾರಿಸುವ ಭರವಸೆ ಇದೆ ಎಂದು ಕೆ.ಹೆಚ್ ಮುನಿಯಪ್ಪ (K.H Muniyappa) ತಿಳಿಸಿದ್ದಾರೆ.

ಗೃಹಲಕ್ಷ್ಮಿ ಮೊದಲ ಕಂತಿನ ಹಣ ಬಂದಿದ್ರೂ ಇಂತಹವರಿಗೆ 2ನೇ ಕಂತಿನ ಹಣ ಬರೋದಿಲ್ಲ! ಕಾರಣ ಕೊಟ್ಟ ಸರ್ಕಾರ

ಕೇಂದ್ರದ ವಿರುದ್ಧ ಕಿಡಿಕಾರದ ಸಿಎಂ ಸಿದ್ದರಾಮಯ್ಯ

Annabhagya Schemeರಾಜ್ಯಕ್ಕೆ ಅಕ್ಕಿ ಯನ್ನು ಕೇಂದ್ರ ಸರ್ಕಾರ ಒದಗಿಸುತ್ತಿಲ್ಲ ಎಂದು ಸಿಎಂ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿಯನ್ನು ಇಟ್ಟುಕೊಂಡು ನಮಗೆ ಅಕ್ಕಿ ಕೊಡುತ್ತಿಲ್ಲ, ನಾವು ಪುಕ್ಸಟ್ಟೆ ಬೇಡ ದುಡ್ಡು ಕೊಡ್ತೀವಿ ಅಂದ್ರು ಅಕ್ಕಿ ಒದಗಿಸುತ್ತಿಲ್ಲ.

ಕೇಂದ್ರ ಸರ್ಕಾರಕ್ಕೆ ಬಡವರ ಯೋಜನೆಗೆ ಅಕ್ಕಿ ಕೊಡುವುದು ಬೇಕಾಗಿಲ್ಲ, ಮೊದಲು ಕೊಡ್ತೇನೆ ಅಂತ ಹೇಳಿ ನಂತರ ಕೇಂದ್ರ ಸರ್ಕಾರ ಕೈ ಎತ್ತಿದೆ. ಬಡವರಿಗೆ ಅಕ್ಕಿ ಕೊಡಲು ಬಿಜೆಪಿಗೆ ಮನಸ್ಸಿಲ್ಲ ಎಂದು ಸಿಎಂ ಗುಡುಗಿದ್ದಾರೆ.

ಸ್ವಂತ ಆಸ್ತಿ ಮನೆ ಜಮೀನು ಹೊಂದಿರುವವರಿಗೆ ಹೊಸ ರೂಲ್ಸ್! ಇದ್ದಕ್ಕಿದ್ದ ಹಾಗೆ ಹೊಸ ಆದೇಶ

ಪೌಷ್ಟಿಕ ಆಹಾರಗಳ ವಿತರಣೆ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಅವರು ಅಕ್ಕಿ ಒದಗಿಸಲು ಸಾಧ್ಯವಾಗಲಿಲ್ಲ ಆದರೆ ಅಕ್ಕಿಯ ಬದಲು ಹಣ ಕೊಡುತ್ತಿದ್ದೇವೆ ಹಣ ಕೊಡುವ ಬದಲು ಐದು ಕೆಜಿ ಅಕ್ಕಿ ಹಾಗೂ ಪೌಷ್ಟಿಕ ಆಹಾರಗಳಾದ ಜೋಳ, ರಾಗಿ, ಕಡಲೆ ಕಾಯಿ ಎಣ್ಣೆ ಮೊದಲದ ವಸ್ತುಗಳನ್ನು ನೀಡಬೇಕು ಎಂದು ಸರ್ಕಾರವನ್ನು ಮನವಿ ಮಾಡಿಕೊಂಡಿದ್ದಾರೆ.

ರೈತರು ಉತ್ಪಾದನೆ ಬಲವರ್ಧನೆಗೆ ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡುವುದರ ಮೂಲಕ ರೈತರ ಆರ್ಥಿಕ ಪರಿಸ್ಥಿತಿಯನ್ನು ಕೂಡ ಸುಧಾರಿಸಬೇಕು. ಬೃಹತ್ ಕಟಾವು ಹಬ್ ಸ್ಥಾಪಿಸಲು ಈ ವರ್ಷ 50 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿದೆ ಎಂದಿದ್ದಾರೆ.

ಜೀರೋ ಬಿಲ್ ಪಡೆದಿದ್ದರೂ ಇಂತಹವರು ಈ ತಿಂಗಳ ಬಿಲ್ ಕಟ್ಟಲೇಬೇಕು! ಸರ್ಕಾರದ ಹೊಸ ಆದೇಶ

ಹಾಗಾಗಿ ಈ ತಿಂಗಳಿನಿಂದ ಅನ್ನ ಭಾಗ್ಯ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ (Money Deposit to Bank Account) ಆಗುತ್ತದೆಯೋ ಅಥವಾ ಹಣದ ಬದಲು ಅಕ್ಕಿ ಹಾಗೂ ಪೌಷ್ಟಿಕ ಆಹಾರಗಳನ್ನು ಸರಕಾರ ನೀಡಲಿದೆಯೋ ಕಾದು ನೋಡಬೇಕು.

Big change in Annabhagya scheme, benefit for ration card Holders