Karnataka NewsBangalore News

ಬದಲಾದ ಗೃಹಜ್ಯೋತಿ ಯೋಜನೆ ನಿಯಮ; ಇನ್ಮುಂದೆ ಇವರಿಗೆ ಸಿಗೋಲ್ಲ ಜೀರೋ ವಿದ್ಯುತ್ ಬಿಲ್!

ಸರ್ಕಾರದ ಪಂಚ ಗ್ಯಾರಂಟಿ (5 guarantee schemes) ಯೋಜನೆಗಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ (Gruha Jyothi scheme) ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಕುಟುಂಬಗಳು ಉಚಿತ ವಿದ್ಯುತ್ (Free electricity) ಸೇವೆ ಪಡೆದುಕೊಳ್ಳುತ್ತಿವೆ.

ಇಂಥವರಿಗೆ ಸರ್ಕಾರ ಮಹತ್ವದ ನಿರ್ಧಾರ ಒಂದನ್ನು ಪ್ರಕಟಿಸಿದ್ದು ಹಲವರಿಗೆ ಜೀರೋ ವಿದ್ಯುತ್ (zero electricity bill) ಇನ್ನು ಮುಂದೆ ಸಿಗುವುದಿಲ್ಲ ಎನ್ನಲಾಗಿದೆ.

After Gruha jyothi free electricity Scheme, another scheme implemented For Farmers

ಗೃಹಲಕ್ಷ್ಮಿ ಆಯ್ತು, ಈಗ ಹಿರಿಯ ನಾಗರಿಕರಿಗೂ ಬರುತ್ತೆ ₹2000 ರೂಪಾಯಿ! ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ವಿದ್ಯುತ್ ಬಿಲ್ ಪಾವತಿ ಮಾಡಿಲ್ವಾ? – Electricity Bill

ಸರ್ಕಾರ ಉಚಿತವಾಗಿ 200 ಯೂನಿಟ್ (Free 200 unit) ವರೆಗೆ ವಿದ್ಯುತ್ ನೀಡುತ್ತಿದೆ. ಇದಕ್ಕೆ ಹೆಚ್ಚಿನ ನಿಯಮಗಳು ಇಲ್ಲದೆ ಇದ್ದರೂ ಕೂಡ, ಯಾರಾದರೂ ವಿದ್ಯುತ್ ಬಿಲ್ ಅನ್ನು ಕಟ್ಟದೆ ಬಾಕಿ ಉಳಿಸಿಕೊಂಡಿದ್ದರೆ ಅಂತವರಿಗೆ 200 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ ಬಳಸಿದರು ಕೂಡ ಉಚಿತ ವಿದ್ಯುತ್ ಸೌಲಭ್ಯ ದೊರೆಯುವುದಿಲ್ಲ.

ಹೌದು ಸರ್ಕಾರ ಈ ನಿಯಮವನ್ನು ಹಿಂದೆಯೇ ತಿಳಿಸಿತ್ತು. ಹಳೆಯ ವಿದ್ಯುತ್ ಬಿಲ್ ಪಾವತಿ ಮಾಡಿ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಪ್ಟೆಂಬರ್ 30ರವರೆಗೆ ಅವಕಾಶ ನೀಡಿತ್ತು. ಆದ್ರೆ ಸೆಪ್ಟೆಂಬರ್ ತಿಂಗಳು ಮುಗಿದು ಅಕ್ಟೋಬರ್ ಆರಂಭವಾಗಿದೆ. ಇನ್ನೇನು ಹೊಸ ಬಿಲ್ ಕೂಡ ಜನರೇಟ್ ಆಗುತ್ತದೆ.

ಸೆಪ್ಟೆಂಬರ್ 30ರವರೆಗೆ ಗಡುವು ನೀಡಿದ್ದರು, ಕೂಡ ಹಳೆಯ ಬಾಕಿ (pending bill payment) ಬಿಲ್ ಪಾವತಿ ಮಾಡದೆ ಉಳಿಸಿಕೊಂಡಿದ್ದವರಿಗೆ ಅಕ್ಟೋಬರ್ ತಿಂಗಳಿನಿಂದ ಉಚಿತ ವಿದ್ಯುತ್ ಸೌಲಭ್ಯ ದೊರೆಯುವುದಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ತಿಳಿಸಿದೆ.

ಕಡೆಗೂ ಬಂದಿಲ್ವಾ ಗೃಹಲಕ್ಷ್ಮಿ ಮೊದಲ ಕಂತಿನ ಹಣ! ಗೃಹಿಣಿಯರೇ ಇಲ್ಲಿದೆ ಹೊಸ ಅಪ್ಡೇಟ್

ಇನ್ನು ಮುಂದೆ ಇಂಥವರಿಗೆ ಸಿಗುವುದಿಲ್ಲ zero Electricity Bill

Gruha Jyothi Schemeಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಗೆ, ಹಾಗೂ ಅನ್ನಭಾಗ್ಯ ಯೋಜನೆಗೆ ಪಡಿತರ ಚೀಟಿ (Ration card) ಕಡ್ಡಾಯವಾಗಿದೆ. ಆದರೆ ಗೃಹ ಜ್ಯೋತಿ ಯೋಜನೆಗೆ ಪಡಿತರ ಚೀಟಿಯ ಅಗತ್ಯವಿಲ್ಲ, ಮನೆಯ ಮಾಲೀಕರು (Own House) ಮಾತ್ರವಲ್ಲದೆ ಬಾಡಿಗೆದಾರರು (Rented House) ಕೂಡ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಉಚಿತ ವಿದ್ಯುತ್ ನೀಡುವ ಯೋಜನೆಯಲ್ಲಿ ಇದ್ದ ಎರಡು ಕಂಡೀಶನ್ (Conditions) ಅಂದ್ರೆ, 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಒಂದು ವರ್ಷಗಳ ಆವರೇಜ್ (average electricity usage) ನಲ್ಲಿ ಬಳಕೆ ಮಾಡಿರಬೇಕು ಹಾಗೂ ಹಳೆಯ ವಿದ್ಯುತ್ bill ಪಾವತಿ ಮಾಡದೆ ಇದ್ದರೆ ಅದನ್ನು ಕಟ್ಟಬೇಕು.

ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ, ರೇಷನ್ ಕಾರ್ಡ್ ಇರೋರಿಗೆ ಬಿಗ್ ಬೆನಿಫಿಟ್

ಆದರೆ ಸಾಕಷ್ಟು ಜನ ಸರ್ಕಾರದ ಈ ನಿಯಮವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಲವರು ಹಿಂದಿನ ಬಿಲ್ ಪಾವತಿ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದಾರೆ.

ಹಾಗಾಗಿ ಇಂಥವರು ಇನ್ನು ಮುಂದೆ ಝೀರೋ ವಿದ್ಯುತ್ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ. 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದರು ಕೂಡ ಹಳೆಯ ಬಿಲ್ ಪಾವತಿ ಮಾಡದೆ ಇರುವುದರಿಂದ ಅಂಥವರಿಗೆ ಇನ್ನು ಮುಂದೆ ಉಚಿತ ವಿದ್ಯುತ್ ಸಿಗುವುದಿಲ್ಲ. ಎಷ್ಟು ವಿದ್ಯುತ್ ಬಳಸಿದ್ದಿರೋ ಅಷ್ಟು ವಿದ್ಯುತ್ ನ ಬಿಲ್ ಅನ್ನು ಪ್ರತಿ ತಿಂಗಳು ಪಾವತಿ ಮಾಡಬೇಕಾಗುತ್ತೆ ಎಂದು ಬೆಸ್ಕಾಂ (BESCOM) ತಿಳಿಸಿದೆ.

Gruha Jyothi Yojana Rules Changed, Such People will not get zero electricity bill

Our Whatsapp Channel is Live Now 👇

Whatsapp Channel

Related Stories