Story Highlights
ಲಕ್ಷ್ಮಿ ಹೆಬ್ಬಾಳ್ಕರ್ ವೇದಿಕೆಯ ಮೇಲೆ ಹಿರಿಯ ನಾಗರಿಕರಿಗೆ ಪಿಂಚಣಿ (senior citizen pension) ಹೆಚ್ಚಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು.
ಇತ್ತೀಚಿಗೆ ನಡೆದ ವಿಶ್ವ ಹಿರಿಯ ನಾಗರಿಕರ ದಿನದ (world senior citizen day) ಆಚರಣೆಯ ಅಂಗವಾಗಿ ಕಾರ್ಯಕ್ರಮ ಒಂದರಲ್ಲಿ ಉಪಸ್ಥಿತರಿದ್ದ ಸಿಎಂ ಸಿದ್ದರಾಮಯ್ಯ (CM siddaramaiah) ಅವರು, ರಾಜ್ಯದ ಹಿರಿಯ ನಾಗರಿಕರಿಗೆ ಬಂಪರ್ ಕೊಡುಗೆ ಒಂದನ್ನು ಘೋಷಣೆ ಮಾಡಿದ್ದಾರೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಮನವಿ ಮಾಡಿದ್ದಕ್ಕೆ ತಕ್ಷಣವೇ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನ ಅಂಗವಾಗಿ ಕಾರ್ಯಕ್ರಮ ಒಂದನ್ನು ಏರ್ಪಡಿಸಲಾಗಿತ್ತು, ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಿಎಂ ಸಿದ್ದರಾಮಯ್ಯ ಮತ್ತು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸಾಕಷ್ಟು ಗಣ್ಯರು ಉಪಸ್ಥಿತರಿದ್ದರು.
ಕಡೆಗೂ ಬಂದಿಲ್ವಾ ಗೃಹಲಕ್ಷ್ಮಿ ಮೊದಲ ಕಂತಿನ ಹಣ! ಗೃಹಿಣಿಯರೇ ಇಲ್ಲಿದೆ ಹೊಸ ಅಪ್ಡೇಟ್
ಈ ಸಂದರ್ಭದಲ್ಲಿ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ವೇದಿಕೆಯ ಮೇಲೆ ಹಿರಿಯ ನಾಗರಿಕರಿಗೆ ಪಿಂಚಣಿ (senior citizen pension) ಹೆಚ್ಚಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು.
” ನನ್ನ ಬಳಿ ಸಾಕಷ್ಟು ಹಿರಿಯರು, ಮಹಿಳೆಯರಿಗೆ 2000 ರೂಪಾಯಿ ಕೊಡುತ್ತೀರಿ ಅದೇ ರೀತಿ ನಮಗೂ ಪಿಂಚಣಿ ಹಣವನ್ನು 1200 ರೂಪಾಯಿಗಳಿಂದ 2000 ಕ್ಕೆ ಹೆಚ್ಚಳ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ ಎಂದರು.
ನಮ್ಮಲ್ಲಿ 49 ಲಕ್ಷ ಹಿರಿಯ ನಾಗರಿಕರಿಗೆ 1200 ಪಿಂಚಣಿ (Monthly Pension) ನೀಡಲಾಗುತ್ತಿದೆ. ವಿಶ್ವದಲ್ಲಿ ನಾವು ಹಿರಿಯ ನಾಗರಿಕರಿಗೆ ಹೆಚ್ಚು ಗೌರವ ನೀಡುತ್ತೇವೆ ಅವರ ಅನುಭವ ತಿಳಿದುಕೊಳ್ಳಲು ನಾವು ಇಂದು ಇಲ್ಲಿ ಸೇರಿದ್ದೇವೆ. ನೀವು ಕೂಡ ಹಿರಿಯರಿದ್ದೀರಿ ಹಿರಿಯ ನಾಗರಿಕರ ಈ ಮನವಿಯನ್ನು ತೆಗೆದುಕೊಂಡು ಅವರಿಗೂ ಪಿಂಚಣಿ ಹಣ 2000 ಬರುವಂತೆ ಮಾಡಬೇಕು” ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸಿಎಂ ಅವರ ಬಳಿ ವಿನಂತಿಸಿಕೊಂಡಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ, ರೇಷನ್ ಕಾರ್ಡ್ ಇರೋರಿಗೆ ಬಿಗ್ ಬೆನಿಫಿಟ್
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನವಿಯನ್ನು ಸ್ಥಳದಲ್ಲಿಯೇ ಒಪ್ಪಿ ಗ್ರೀನ್ ಸಿಗ್ನಲ್ (Green signal) ನೀಡಿದ್ದಾರೆ. 1200 ಪಿಂಚಣಿ ಬರುತ್ತಿದ್ದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇದೇ ಬರುವ ಫೆಬ್ರುವರಿಯಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಆ ಸಂದರ್ಭದಲ್ಲಿ ಹಿರಿಯ ನಾಗರಿಕರ ಪಿಂಚಣಿಯನ್ನು ಹೆಚ್ಚಿಸುತ್ತೇನೆ ಎಷ್ಟು ಎಂದು ಈಗಲೇ ಹೇಳುವುದಿಲ್ಲ ಆದರೆ ಈಗ ಎಷ್ಟು ಸಿಗುತ್ತಿದೆಯೋ ಅದಕ್ಕಿಂತ ಜಾಸ್ತಿ ಪಿಂಚಣಿ (Pension) ಬರುವ ಹಾಗೆ ಬಜೆಟ್ ನಲ್ಲಿ ಮಂಡಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಮೊದಲ ಕಂತಿನ ಹಣ ಬಂದಿದ್ರೂ ಇಂತಹವರಿಗೆ 2ನೇ ಕಂತಿನ ಹಣ ಬರೋದಿಲ್ಲ! ಕಾರಣ ಕೊಟ್ಟ ಸರ್ಕಾರ
ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಸಾಧನೆಗೈದ ಹಲವು ಹಿರಿಯರಿಗೆ ಸರ್ಕಾರದ ಕಡೆಯಿಂದ ಗೌರವ ಸಂದಾಯವಾಗಿದೆ. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳದ ಬಗ್ಗೆ ಸರ್ಕಾರ ಗಮನ ಹರಿಸಿರುವ ವಿಷಯ ಹಿರಿಯ ನಾಗರಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
Karnataka senior citizens Pension hikes update