ಇಂಥವರಿಗೆ ರೇಷನ್ ಕಾರ್ಡ್ ಸಿಗೋದಿಲ್ಲ, ಇರೋ ರೇಷನ್ ಕಾರ್ಡ್ ಕೂಡ ರದ್ದಾಗುತ್ತೆ; ರಾತ್ರೋರಾತ್ರಿ ಆದೇಶ
ಸರ್ಕಾರದಿಂದ ಸಿಗುವ ಪಡಿತರ ಚೀಟಿಯ (Ration Card) ಯಾವುದೇ ಪ್ರಯೋಜನ ಪಡೆದುಕೊಳ್ಳುತ್ತಿದ್ದರು ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗುವುದು ಕಡ್ಡಾಯ.
ರಾಜ್ಯ ಸರ್ಕಾರದ (State Government) ಯಾವುದೇ ಯೋಜನೆಯ ಬೆನಿಫಿಟ್ (Benefit) ಪಡೆದುಕೊಳ್ಳಬೇಕು ಅಂದ್ರೆ ರೇಷನ್ ಕಾರ್ಡ್ (Ration card) ಎಷ್ಟು ಮುಖ್ಯವಾಗಿರುತ್ತೆ ಅನ್ನುವುದು ಈಗಾಗಲೇ ರಾಜ್ಯದ ಜನತೆಗೆ ಅರ್ಥವಾಗಿದೆ
ಹಾಗಾಗಿಯೇ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಜನ ಮುಗಿಬಿದ್ದಿದ್ದಾರೆ.
ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಿ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ!
ರೇಷನ್ ಕಾರ್ಡ್ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಕೇಂದ್ರ ಸರ್ಕಾರ!
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಪ್ರಯೋಜನ ಪಡೆದುಕೊಳ್ಳಲು ಈಗಾಗಲೇ ತಿದ್ದುಪಡಿ ಮಾಡಿಕೊಳ್ಳಲು ಹೋದ ಅದೆಷ್ಟು ಜನ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದಿದೆ.
ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸುಮಾರು ಮೂರು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ತಿದ್ದುಪಡಿಗೆ (ration Card correction) ಸಲ್ಲಿಕೆ ಆಗಿತ್ತು. ಅವುಗಳಲ್ಲಿ ಸುಮಾರು ಒಂದು ಲಕ್ಷದಷ್ಟು ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು 93,000ಕ್ಕೂ ಅಧಿಕ ರೇಷನ್ ಕಾರ್ಡ್ ಅನ್ನು ನೇರವಾಗಿ ರದ್ದುಪಡಿಸಲಾಗಿದೆ.
1 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ತಿರಸ್ಕಾರ; ಇಂತಹವರಿಗೆ ಗೃಹಲಕ್ಷ್ಮಿ ಹಣ ಇನ್ನು ಸಿಗುವುದಿಲ್ಲ
ಈ ಮಾನದಂಡಗಳ ಒಳಗೆ ನೀವು ಬರದೇ ಇದ್ದರೆ ಅರ್ಜಿ ಸಲ್ಲಿಸಲೇಬೇಡಿ
ಸರ್ಕಾರ 6 ಮಾನದಂಡಗಳನ್ನು ಘೋಷಣೆ ಮಾಡಿದ್ದು ಅದರ ಅಡಿಯಲ್ಲಿ ಬರುವವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ (BPL Card) ಲಭ್ಯವಾಗುತ್ತದೆ.
• ಬಡತನ ರೇಖೆಗಿಂತ ಕೆಳಗಿನವರು ಮಾತ್ರ BPL card ಪಡೆಯಲು ಅರ್ಹರು.
• 1,20,000 ಕಿಂತ ಅಧಿಕ ವಾರ್ಷಿಕ ಆದಾಯ ಇರಬಾರದು.
• ವೈಟ್ ಬೋರ್ಡ್ ಕಾರು ಅಥವಾ ಮತ್ತಿತರ ನಾಲ್ಕು ಚಕ್ರದ ವಾಹನ ಹೊಂದಿರಬಾರದು.
• ಕುಟುಂಬದ ಯಾವ ಸದಸ್ಯರು ಸರ್ಕಾರಿ ನೌಕರಿ (Government Job) ಯಲ್ಲಿ ಇರಬಾರದು.
• ಜಿ ಎಸ್ ಟಿ ಇನ್ಕಮ್ ಟ್ಯಾಕ್ಸ್ (Tax) ಪಾವತಿ ಮಾಡುವವರು ಆಗಿರಬಾರದು.
• 5 ಎಕರೆಗಿಂತ ಜಾಸ್ತಿ ಜಮೀನು ಇರಬಾರದು, ನಗರ ಪ್ರದೇಶದಲ್ಲಿ 1000 ಸ್ಕ್ವಾರ್ ಮಿ. ಗಿಂತ ದೊಡ್ದ ಮನೆ ಇರುವಹಾಗಿಲ್ಲ.
ಗೃಹಜ್ಯೋತಿ ಫ್ರೀ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ರೂಲ್ಸ್; ಈ ನಿಯಮ ಪಾಲಿಸಲೇಬೇಕು
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್: (Ration Card Aadhaar Link)
ಸರ್ಕಾರದಿಂದ ಸಿಗುವ ಪಡಿತರ ಚೀಟಿಯ (Ration Card) ಯಾವುದೇ ಪ್ರಯೋಜನ ಪಡೆದುಕೊಳ್ಳುತ್ತಿದ್ದರು ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗುವುದು ಕಡ್ಡಾಯ. ಹೀಗೆ ಲಿಂಕ್ ಮಾಡಿಕೊಳ್ಳದೆ ಇದ್ದಲ್ಲಿ ಬಡತನ ರೇಖೆಗಿಂತ ಕೆಳಗೆ ಇದ್ದರು ಅದರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ಇಂಥವರ ರೇಷನ್ ಕಾರ್ಡ್ ರದ್ದಾಗುತ್ತೆ
ಬಿಪಿಎಲ್ ಕಾರ್ಡ್ ಇರಬಹುದು ಅಥವಾ ಅಂತ್ಯೋದಯ ಕಾರ್ಡ್ ಇರಬಹುದು, ಯಾರು ಮೋಸ, ವಂಚನೆ ಮಾಡಿ ಪಡೆದುಕೊಂಡಿರುತ್ತಾರೋ ಅಂತವರ ರೇಷನ್ ಕಾರ್ಡ್ ರದ್ದತಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ಈಗಾಗಲೇ ಸಾಕಷ್ಟು ತಿದ್ದುಪಡಿ ಮಾಡಲು ಬಂದ, ವಂಚನೆಯಿಂದ ಪಡೆದುಕೊಂಡ ರೇಷನ್ ಕಾರ್ಡ್ ಕ್ಯಾನ್ಸಲ್ (Ration card Cancellation) ಮಾಡಿದೆ. ಇದರ ಜೊತೆಗೆ ಸಾಕಷ್ಟು ಹೊಸ ಅರ್ಜಿಗಳು ಕೂಡ ಬಂದಿವೆ. ಅವುಗಳ ಪರಿಶೀಲನೆ ಕೂಡ ಮಾಡಲಾಗುತ್ತಿದ್ದು, ಅನರ್ಹರಿಗೆ ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ ವಿತರಣೆ ಮಾಡುವುದಿಲ್ಲ ಎಂದು ತಿಳಿಸಿದೆ.
ಗೃಹಲಕ್ಷ್ಮಿ ಫಲಾನುಭವಿಗಳ ಹೊಸ ಲಿಸ್ಟ್ ಪ್ರಕಟ! ಮುಂದಿನ ಕಂತಿನ ಹಣ ಯಾರಿಗೆಲ್ಲಾ ಸಿಗಲಿದೆ ಗೊತ್ತಾ?
ಹಾಗಾಗಿಯೇ ರಾಜ್ಯದಲ್ಲಿ ಈಗಾಗಲೇ ಬಂದಿರುವ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವಿತರಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಒಟ್ಟಿನಲ್ಲಿ ಹಲವರಿಗೆ ಹೊಸ ಬಿಪಿಎಲ್ ಕಾರ್ಡ್ ಸಿಗುವುದು ಖುಷಿಯ ವಿಚಾರವಾಗಿದ್ದರೆ, ಇನ್ನೊಂದಿಷ್ಟು ಜನರಿಗೆ ಕಾರ್ಡ್ ರದ್ದಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
Such people will not get Ration Card, Ration card will be cancelled