ಜನರ ಬಳಿ ಇರುವ ಈ ಕಾರ್ಡ್ ತಕ್ಷಣವೇ ರದ್ದು ಮಾಡಲು ಸರ್ಕಾರದ ಆದೇಶ! ಹೊಸ ನಿಯಮ ಜಾರಿ

ಕೇಂದ್ರ ಸರ್ಕಾರ (central government) ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೂ ಆರ್ಥಿಕವಾಗಿ ಸಹಾಯವಾಗಲು ಹಾಗೂ ಸುಲಭವಾಗಿ ಜೀವನ ನಡೆಸಲು ಸಹಾಯಕವಾಗುವಂತೆ ಕೆಲವು ಯೋಜನೆಗಳನ್ನು ಪರಿಚಯಿಸಲಾಗಿದೆ.
ಕಾರ್ಮಿಕರ (labour) ಬಗ್ಗೆಯೂ ಕೂಡ ಗಮನ ಹರಿಸುವಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ. ಸರ್ಕಾರ ಕಾರ್ಮಿಕರಿಗಾಗಿ ಕಾರ್ಮಿಕ ಕಾರ್ಡು (labour Card) ವಿತರಣೆ ಮಾಡಿದೆ ಇದರಿಂದ ಕಾರ್ಮಿಕ ಮಕ್ಕಳು ಸ್ಕಾಲರ್ಶಿಪ್ (Education scholarship) ಪಡೆದುಕೊಳ್ಳುವುದರಿಂದ ಹಿಡಿದು ಸರ್ಕಾರದಿಂದ ಬರುವ ಹಲವು ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಆದರೆ ಈಗ ಸರ್ಕಾರ ಈ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಹೊಸದೊಂದು ಆದೇಶ ಹೊರಡಿಸಿದೆ.
ರೇಷನ್ ಕಾರ್ಡ್ ರದ್ದತಿ ವಿಚಾರ ಏಕಾಏಕಿ ಹೊಸ ಆದೇಶ ಹೊರಡಿಸಿದ ಸರ್ಕಾರ! ಹೊಸ ನಿಯಮ
ರದ್ದಾಗುತ್ತೆ ಇಂತಹ ಕಾರ್ಡ್
ಕಾರ್ಮಿಕರು, ಅಂದರೆ ಆರ್ಥಿಕವಾಗಿ ಬಹಳ ಹಿಂದುಳಿದವರು ಎಂದು ಅರ್ಥ ಅಂತವರಿಗಾಗಿ ನೀಡಿದ ಲೇಬರ್ ಕಾರ್ಡ್ (labour card) ಕೂಡ ನಕಲಿ ಬಳಕೆ ಆಗುತ್ತದೆ. ಸಾಕಷ್ಟು ನಕಲಿ ಕಾರ್ಡ್ (duplicate labour card) ಗಳನ್ನು ಜನ ಬಳಸುತ್ತಿದ್ದು ಇದರ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ನಕಲಿ ಕಾರ್ಡ್ ಗಳ ರದ್ಧತಿ

ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ (Santosh lad) ವಿಚಾರದ ಬಗ್ಗೆ ಮಾತನಾಡಿ, ಯಾರು ನಕಲಿ ಕಾರ್ಡ್ ಹೊಂದಿದ್ದು ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸುತ್ತಾರೋ ಅಂತಹ ಕಾರ್ಡ್ ಅನ್ನು ಪರಿಶೀಲಿಸಿ ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಬಾರದವರಿಗೆ ಸರ್ಕಾರವೇ ಸೂಚಿಸಿದೆ ಪರಿಹಾರ! ಹೊಸ ಲಿಸ್ಟ್ ಪ್ರಕಟ
ಕಟ್ಟಡ ಮತ್ತು ಕಾರ್ಮಿಕ ಇಲಾಖೆಯ ಅಡಿಯಲ್ಲಿ ನೋಂದಾವಣೆ ಮಾಡಿಸಿಕೊಂಡವರಿಗೆ ಮಾತ್ರ ಲೇಬರ್ ಕಾರ್ಡ್ ಸಿಗುತ್ತದೆ. ಆದರೆ ನೋಂದಾವಣೆ ಮಾಡಿಕೊಳ್ಳದೆ ನಕಲಿ ಕಾರ್ಡ್ ಹೊಂದಿರುವವರ ಬಗ್ಗೆ ಕಾರ್ಮಿಕ ಇಲಾಖೆ ಜಾಗರೂಕವಾಗಿದ್ದು ಅಂತವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇಂತಹ ನಕಲಿ ಕಾರ್ಡ್ ರದ್ದುಪಡಿಗೆ ಕಾರ್ಮಿಕ ಇಲಾಖೆ ಮುಂದಾಗಿದೆ.
ಸುಲಭವಾಗಿ ಸಿಗಬೇಕು ಸೌಲಭ್ಯ:
ಇನ್ನು ನಿಜವಾಗಿ ಅರ್ಹತೆ ಉಳ್ಳ ಕಾರ್ಮಿಕರು ಲೇಬರ್ ಕಾರ್ಡ್ ಹೊಂದಿದ್ದರು, ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳಲು ಬೇರೆ ಬೇರೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇದಕ್ಕಾಗಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಮಿಕ ಇಲಾಖೆಯ ಕಚೇರಿಗಳನ್ನು ನಿರ್ಮಿಸಲು ಮನವಿ ಮಾಡಲಾಗಿತ್ತು.
ಈ ಬಗ್ಗೆಯೂ ಗಮನಹರಿಸಿರುವ ಸರ್ಕಾರ ತಾಲೂಕು ಮಟ್ಟದಲ್ಲಿ ಕಾರ್ಮಿಕ ಇಲಾಖೆಯ ಕಚೇರಿಗಳನ್ನು ತೆರೆದು ಆ ಮೂಲಕ ಅರ್ಹ ಕಾರ್ಮಿಕರಿಗೆ ಉಪಯುಕ್ತ ಮಾಹಿತಿ (information) ನೀಡಲು ಮುಂದಾಗಿದೆ
ಸರ್ಕಾರದ ಹೊಸ ಅಪ್ಡೇಟ್; ಗೃಹಜ್ಯೋತಿ ಫ್ರೀ ಕರೆಂಟ್ ಸೌಲಭ್ಯ ಸಿಗದೇ ಇದ್ದವರಿಗೆ ಸಿಹಿ ಸುದ್ದಿ
ಜೊತೆಗೆ ಕಾರ್ಮಿಕರು ತಮ್ಮ ಕಾರ್ಡ್ ನಿಂದ ಇಲ್ಲಿಯೇ ಸರ್ಕಾರದಿಂದ ಬಿಡುಗಡೆಯಾಗುವ ಯಾವುದೇ ಸಹಾಯಧನವನ್ನು ಕೂಡ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಅರ್ಹರಿಗೆ ಲೇಬರ್ ಕಾರ್ಡ್ (labour card) ಅಡಿಯಲ್ಲಿ ಪ್ರಯೋಜನ ಸಿಗಬೇಕು ಹಾಗೂ ಅನರ್ಹರು ಈ ಕಾರ್ಡ್ ಬಳಕೆ ಮಾಡುವಂತೆ ಇರಬಾರದು ಎಂಬುದು ಸರ್ಕಾರದ ಉದ್ದೇಶ
Government order to cancel Duplicate Labour card immediately, Implementation of new rules



