ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸೈಟ್! ಈ ಜಿಲ್ಲೆಯ ಜನತೆಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

Story Highlights

ಕೆಲವರು ಸ್ವಂತ ಮನೆ (own house) ಮಾಡಿಕೊಳ್ಳಲು ಹೋಂ ಲೋನ್ (Home Loan) ಮೂಲಕ ಮನೆಕಟ್ಟಿಕೊಂಡರೆ ಕೆಲವರಿಗೆ ಅದೂ ಸಾಧ್ಯವಿಲ್ಲ.

ನಾವು ವಾಸಿಸಲು ಯೋಗ್ಯವಾದ ಒಂದು ಮನೆ ನಿರ್ಮಾಣ (own house) ಮಾಡಿಕೊಳ್ಳುವ ಕನಸು ಹಲವರಲ್ಲಿ ಇರುತ್ತದೆ. ಮನೆ ಕಟ್ಟುವ ಕನಸನ್ನು ಬಡವನು ಕಾಣುತ್ತಾನೆ ಶ್ರೀಮಂತನೂ ಕಾಣುತ್ತಾರೆ ಆದರೆ ಎಲ್ಲರಿಗೂ ಈ ಕನಸು (Dream) ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರು ಸ್ವಂತ ಮನೆ (own house) ಮಾಡಿಕೊಳ್ಳಲು ಹೋಂ ಲೋನ್ (Home Loan) ಮೂಲಕ ಮನೆಕಟ್ಟಿಕೊಂಡರೆ ಕೆಲವರಿಗೆ ಅದೂ ಸಾಧ್ಯವಿಲ್ಲ.

ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ (Middle class) ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಮೂಲಕ ತಮ್ಮ ಕನಸು ನನಸಾಗಿಸಿಕೊಳ್ಳಲು ಸಾಧ್ಯವಿದೆ.

ಅನ್ನಭಾಗ್ಯ ಯೋಜನೆ ಹಣ ಯಾರಿಗೂ ಸಿಗೋದಿಲ್ವಾ? ಇದೇನಿದು ಸರ್ಕಾರದ ಹೊಸ ಅಪ್ಡೇಟ್

ಈಗಾಗಲೇ ರಾಜೀವ್ ಗಾಂಧಿ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ(Pradhan mantri awas Yojana) (Rajiv Gandhi vasati Yojana) ಮೊದಲಾದವುಗಳ ಮೂಲಕ ಹಲವರು ತಮ್ಮ ಮನೆ ನಿರ್ಮಾಣದ ಕನಸನ್ನು ಈಡೇರಿಸಿಕೊಂಡಿದ್ದಾರೆ

ಈಗ ರಾಜ್ಯ ಸರ್ಕಾರ ಬಹು ಅಂತಸ್ತಿನ ಕಟ್ಟಡ ನಮ್ಮ ಮನೆ ಮೊದಲಾದ ಯೋಜನೆಗಳ ಮೂಲಕ ಬಡವರ್ಗದವರು ಹಾಗೂ ಮಾಧ್ಯಮ ವರ್ಗದವರು ಕೂಡ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ.

ರಾಜ್ಯದ 7 ಜಿಲ್ಲೆಗಳಿಗೆ ಸಿಗಲಿದೆ ವಿಶೇಷ ಸೌಲಭ್ಯ;

ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಯ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಜನ ಸ್ವಂತ ಸೂರು ನಿರ್ಮಾಣ ಮಾಡಿಕೊಂಡಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಜನರ ಬಳಿ ಇರುವ ಈ ಕಾರ್ಡ್ ತಕ್ಷಣವೇ ರದ್ದು ಮಾಡಲು ಸರ್ಕಾರದ ಆದೇಶ! ಹೊಸ ನಿಯಮ ಜಾರಿ

ಟ್ವೀಟ್ ಮೂಲಕ ಮಾಹಿತಿ ನೀಡಿದ ಮುಖ್ಯಮಂತ್ರಿಗಳು;

ಇತ್ತೀಚಿಗೆ ಮನೆ ನಿರ್ಮಾಣದ ಬಗ್ಗೆ ಟ್ವಿಟ್ಟರ್ (Twitter) ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರು ಮಾಹಿತಿ ನೀಡಿದ್ದಾರೆ. ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿ ಮನೆ ಹಂಚಿಕೆ ಮಾಡಲು ರಾಜ್ಯದ 7 ಜಿಲ್ಲೆಗಳಿಗೆ ಅನುಮತಿ ನೀಡಲಾಗಿದೆ, ಅಷ್ಟು ಮಾತ್ರವಲ್ಲದೆ ಅತಿ ಕಡಿಮೆ ದರದಲ್ಲಿ ಸರ್ಕಾರಿ ಸೈಟ್ (Government site) ಗಳನ್ನು ಕೂಡ ಖರೀದಿ ಮಾಡಬಹುದಾಗಿದೆ.

ರೇಷನ್ ಕಾರ್ಡ್ ರದ್ದತಿ ವಿಚಾರ ಏಕಾಏಕಿ ಹೊಸ ಆದೇಶ ಹೊರಡಿಸಿದ ಸರ್ಕಾರ! ಹೊಸ ನಿಯಮ

ವಸತಿ ಬಡಾವಣೆ ಯೋಜನೆ

Home Loan Subsidyಹೌದು ರಾಜ್ಯ ಸರ್ಕಾರ ಹಲವರ ಮನೆ ನಿರ್ಮಾಣದ ಕನಸನ್ನು ಈಡೇರಿಸಲು ಮುಂದಾಗಿದೆ, ಇದಕ್ಕಾಗಿ ವಸತಿ ಬಡಾವಣೆ ಯೋಜನೆಯ ಅಡಿಯಲ್ಲಿ ರಾಜ್ಯದ 7 ಜಿಲ್ಲೆಗಳಿಗೆ ಅತಿ ಕಡಿಮೆ ದರದಲ್ಲಿ ಸೈಟ್ ಹಾಗೂ ಮನೆ ಕಟ್ಟಿಕೊಳ್ಳುವುದಕ್ಕೆ ಸಬ್ಸಿಡಿ ದರದಲ್ಲಿ ಸಾಲ (subsidy loan) ಸೌಲಭ್ಯವನ್ನು ಕೂಡ ನೀಡುತ್ತಿದೆ.

ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕಲಬುರಗಿ, ಮಂಗಳೂರು ಮತ್ತು ಬೆಳಗಾವಿಯಲ್ಲಿ ವಸತಿ ಬಡಾವಣೆ ಯೋಜನೆ ಜಾರಿಯಲ್ಲಿದ್ದು, ರಾಜ್ಯ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೊಸೈಟಿ ಬಡಾವಣೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ನಿವೇಶನ ನೀಡಲು ಸರ್ಕಾರ ಮುಂದಾಗಿದೆ. ಸದ್ಯದಲ್ಲಿಯೇ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಕೂಡ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗೃಹಲಕ್ಷ್ಮಿ ಯೋಜನೆ ಹಣ ಬಾರದವರಿಗೆ ಸರ್ಕಾರವೇ ಸೂಚಿಸಿದೆ ಪರಿಹಾರ! ಹೊಸ ಲಿಸ್ಟ್ ಪ್ರಕಟ

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ;

ಕೃಷಿ, ತೋಟಗಾರಿಕಾ ಉತ್ಪನ್ನಗಳ ಮೌಲ್ಯ ವರ್ಧನೆ ಮೂಲಕ ಕೃಷಿಗೆ ಉತ್ತೇಜನ ನೀಡುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಮುಂದಿರುವ ಗುರಿ.

ಇದಕ್ಕಾಗಿ ಸರ್ಕಾರ ಕೃಷಿ ಸಂಸ್ಕರಣ ಉದ್ಯಮಕ್ಕೆ ಬೆಂಬಲ ನೀಡುತ್ತಿದೆ, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ರೈತರ ಆರ್ಥಿಕ ಸ್ಥಿತಿಯು ಕೂಡ ಉತ್ತಮವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಬಡವರು ತಮ್ಮ ಸ್ವಂತ ಮನೆ ನಿರ್ಮಾಣಕ್ಕೆ ಅವಕಾಶ ನೀಡುವುದರ ಜೊತೆಗೆ ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎನ್ನಬಹುದು.

The government gives the site for house construction and subsidy loan

Related Stories