ಗೃಹಲಕ್ಷ್ಮಿ 2ನೇ ಕಂತಿನ ಹಣ ಎಲ್ಲರಿಗೂ ಸಿಗೋಲ್ಲ; ಯಾವುದಕ್ಕೂ ಒಮ್ಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಸರ್ಕಾರ ಜಾರಿಗೆ ತಂದ ಬಳಿಕ ಲಕ್ಷಾಂತರ ಜನರ ಖಾತೆಗೆ (Bank Account) 2,000 ಜಮಾ ಆಗಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಕೋಟ್ಯಾಂತರ ಅರ್ಜಿ ಸಲ್ಲಿಕೆ ಆಗಿತ್ತು.
ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಸರ್ಕಾರ ಜಾರಿಗೆ ತಂದ ಬಳಿಕ ಲಕ್ಷಾಂತರ ಜನರ ಖಾತೆಗೆ (Bank Account) 2,000 ಜಮಾ ಆಗಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಕೋಟ್ಯಾಂತರ ಅರ್ಜಿ ಸಲ್ಲಿಕೆ ಆಗಿತ್ತು.
ಸುಮಾರು 70% ನಷ್ಟು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ (dbt) ಆಗಿದೆ ಆದರೆ ಸುಮಾರು 30% ಮಹಿಳೆಯರ ಖಾತೆಗೆ ಇನ್ನೂ ಮೊದಲ ಕಂತಿನ ಹಣ ವರ್ಗಾವಣೆ ಆಗಿಲ್ಲ (Money Transfer). ಇದಕ್ಕೆ ಸರ್ಕಾರ ಈಗಾಗ್ಲೇ ಸ್ಪಷ್ಟನೆಯನ್ನು ಸಹ ನೀಡಿದೆ.
ಹಳೆಯ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ಆದೇಶ
ಮೊದಲ ಕಂತಿನ ಹಣ ಜಮಾ ಆಗಿಲ್ಲ
ಹಲವು ಗೃಹಿಣಿಯರ ಖಾತೆಗೆ ಮೊದಲ ಕಂತಿನ ಹಣ (first installment) ಜಮಾ ಆಗಿಲ್ಲ, ಇದಕ್ಕೆ ರೇಷನ್ ಕಾರ್ಡ್(ration card) ಬ್ಯಾಂಕ್ ಖಾತೆ (bank account) ಆಧಾರ್ ಕಾರ್ಡ್ (Aadhaar card) ನಲ್ಲಿ ಇರುವ ಲೋಪ ದೋಷಗಳು ಮುಖ್ಯ ಕಾರಣ.
ಇದರ ಜೊತೆಗೆ ಸರ್ವರ್ ಸಮಸ್ಯೆಯಿಂದಾಗಿ ಕೂಡ ಗೃಹಿಣಿಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಸರ್ಕಾರವೇನೋ 2ನೇ ಕಂತಿನ ಹಣದ ಜೊತೆಗೆ ಮೊದಲ ಕಂತಿನ ಹಣವು ಸಿಗುತ್ತದೆ ಎಂದು ಹೇಳಿದೆ ಆದರೆ ಇದು ಕೇವಲ ಭರವಸೆ ಆಗಿಯೇ ಉಳಿದುಕೊಳ್ಳುವ ಸಾಧ್ಯತೆ ಇದೆ.
ಯಾಕೆಂದರೆ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಮೊದಲ ಕಂತಿನ ಹಣ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿತ್ತು ಆದರೆ ಇದು ಸಾಧ್ಯವಾಗಿಲ್ಲ.
ಇನ್ನು ಎರಡನೇ ಕಂತಿನ ಹಣವನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಫಲಾನುಭವಿಗಳಿಗೆ ತಲುಪಿಸಲು ನಿರ್ಧರಿಸಲಾಗಿದೆ ಎಂದು ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈಗ ಎರಡನೇ ಕಂತಿನ ಹಣ, ಮೊದಲ ಕಂತಿನ ಹಣ ಜಮಾ ಆಗಿರುವ ಮಹಿಳೆಯರಿಗೆ ಮಾತ್ರ ಸಂದಾಯವಾಗುತ್ತದೆಯೋ ಅಥವಾ ಎಲ್ಲರಿಗೂ ಸಿಗುತ್ತದೆಯೋ ಎನ್ನುವುದರ ಬಗ್ಗೆ ಇನ್ನೂ ಗೊಂದಲ ಇದೆ.
ಒಂದಕ್ಕಿಂತ ಹೆಚ್ಚು ಕಡೆ ಮನೆ, ಆಸ್ತಿ ಹೊಂದಿರುವವರಿಗೆ ಹೊಸ ನಿಯಮ ಘೋಷಿಸಿದ ಸರ್ಕಾರ
ಇಂಥವರಿಗೆ ಎರಡನೇ ಕಂತಿನ ಹಣ ಸಿಗುವುದಿಲ್ಲ:
ಮೊದಲನೇ ಕಂತಿನ ಹಣ ಬಂದಿದ್ದರೂ, ಅಂಥವರ ರೇಷನ್ ಕಾರ್ಡ್ ರದ್ದುಪಡಿ ಆಗಿದ್ದರೆ ಎರಡನೇ ಕಂತಿನ ಹಣ ಬರುವುದಿಲ್ಲ. ಅದೇ ರೀತಿ ಯಾವೆಲ್ಲ ಮಹಿಳೆಯರ ಖಾತೆಯಲ್ಲಿ ಇನ್ನೂ ಸಮಸ್ಯೆ ಇದೆಯೋ ಅಂತವರ ಖಾತೆಗೂ ಹಣ ಸಂದಾಯವಾಗುವುದಿಲ್ಲ.
ಹಾಗಾಗಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ಮುಗಿಯಲಿಲ್ಲ ತಮ್ಮ ಖಾತೆಯಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಕೂಡ ಪರೀಕ್ಷಿಸಿಕೊಳ್ಳಬೇಕು. ಅದಕ್ಕಾಗಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯರ ಅಥವಾ ಶಿಕ್ಷಕಿಯರ ಸಹಾಯ ಪಡೆದುಕೊಳ್ಳಬಹುದು.
ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸೈಟ್! ಈ ಜಿಲ್ಲೆಯ ಜನತೆಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ರೇಷನ್ ಕಾರ್ಡ್ ತಿದ್ದುಪಡಿ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರ ಖಾತೆಗೆ ಹಣ ಬರಬೇಕು ಅಂದ್ರೆ ಅವರ ಹೆಸರಿನಲ್ಲಿಯೇ ರೇಷನ್ ಕಾರ್ಡ್ ಇರಬೇಕಾಗಿರುವುದು ಕಡ್ಡಾಯ. ಹಾಗಾಗಿ ಪುರುಷರ ಹೆಸರಿನಲ್ಲಿ ಇರುವ ರೇಷನ್ ಕಾರ್ಡ್ ಅನ್ನು ಅವರ ಪತ್ನಿಯರ ಹೆಸರಿಗೆ ವರ್ಗಾಯಿಸಿಕೊಳ್ಳಲು ಈಗ ಸರ್ಕಾರ ಮತ್ತೆ ಅವಕಾಶ ನೀಡಿದ್ದು, ಅಕ್ಟೋಬರ್ 13ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ನೀವು ಈ ಬಾರಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡರೆ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬಹುದು.
ಅನ್ನಭಾಗ್ಯ ಯೋಜನೆ ಹಣ ಯಾರಿಗೂ ಸಿಗೋದಿಲ್ವಾ? ಇದೇನಿದು ಸರ್ಕಾರದ ಹೊಸ ಅಪ್ಡೇಟ್
ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಮೊದಲ ಕಂತಿನ ಹಣ ಜಮಾ ಆಗಿದ್ದರೆ ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ಹೇಗೆ ಚೆಕ್ ಮಾಡುತ್ತಿರೋ ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ ಆಗಿರುವ ಬಗ್ಗೆ ಸ್ಟೇಟಸ್ ಚೆಕ್ ಮಾಡಬಹುದು.
ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗಿದೆ ಎಂದಾದರೆ ಅಂಥವರಿಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರುತ್ತದೆ. ಒಂದು ವೇಳೆ ನಿಮಗೆ ಸ್ಟೇಟಸ್ ಚೆಕ್ (status check) ಮಾಡಲು ಬಾರದೇ ಇದ್ದಲ್ಲಿ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಮಾಹಿತಿ ಪಡೆದುಕೊಳ್ಳಿ.
Gruha Lakshmi Yojana 2nd Installment money not available to everyone, Anyway check the status once