Story Highlights
ಸರ್ಕಾರದ ವೆಬ್ಸೈಟ್ https://www.karnataka.gov.in ಗೆ ಭೇಟಿ ನೀಡಿ, ನಂತರ DBT status ಚೆಕ್ ಮಾಡಬಹುದು. ನಿಮ್ಮ ಆರ್ ಸಿ ನಂಬರ್ (Ration Card Number) , ತಿಂಗಳು ಆಯ್ಕೆ ಮಾಡಿ ಕ್ಯಾಪ್ಚಾ ನಂಬರ್ ನಮೂದಿಸಿ
ಕಳೆದ ಎರಡು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಕುಟುಂಬಕ್ಕೆ ಸರ್ಕಾರ ನೇರವಾಗಿ ಜಮಾ ಮಾಡುತ್ತಿದೆ.
ಹಾಗಾಗಿ ಈ ತಿಂಗಳಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ. ಇದಕ್ಕೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ಫಲಾನುವಿಗಳ ಖಾತೆಗೆ (Bank Account) ಹಣ ಹಾಕುವ ಬಗ್ಗೆ ಅಪ್ಡೇಟ್ (update) ನೀಡಿದೆ.
ಗೃಹಲಕ್ಷ್ಮಿ ಹಣ 4 ಸಾವಿರ ನಿಜಕ್ಕೂ ಒಟ್ಟಿಗೆ ಸಿಗುತ್ತಾ? ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಹೊಸ ಅಪ್ಡೇಟ್
ಸರ್ಕಾರ ನೀಡಿದೆ ಗುಡ್ ನ್ಯೂಸ್
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ನಮ್ಮ ರಾಜ್ಯದಲ್ಲಿ ಕೋಟ್ಯಂತರ ಜನ ಇದ್ದಾರೆ, ಅದರಲ್ಲಿ ಸುಮಾರು 22 ಲಕ್ಷ ಫಲಾನುಭವಿಗಳ ಖಾತೆಗೆ ಇನ್ನೂ ನೇರವಾಗಿ ಹಣ ವರ್ಗಾವಣೆ (Money Transfer) ಆಗಿಲ್ಲ, ಇದಕ್ಕೆ ಮುಖ್ಯ ಕಾರಣ ಅಂತವರು ತಮ್ಮ ಬ್ಯಾಂಕ್ ಖಾತೆಯನ್ನು (No bank account) ಹೊಂದಿಲ್ಲ.
ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆಯ ಜೊತೆಗೆ ಆಧಾರ್ ಸೀಡಿಂಗ್ (Aadhaar seeding) ಹಾಗೂ ಇತರ ಲೋಪದೋಷಗಳನ್ನು ಸರಿಪಡಿಸಿಕೊಂಡು ನಂತರ ಹಣ ವರ್ಗಾವಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah)ಅವರು ತಿಳಿಸಿದ್ದಾರೆ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಒಂದು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ ಬಿಪಿಎಲ್ ಕಾರ್ಡ್
ಮೂರನೇ ಕಂತಿನ ಹಣ ಬಿಡುಗಡೆ
ಸೆಪ್ಟೆಂಬರ್ ತಿಂಗಳಿನ ಅನ್ನಭಾಗ್ಯ ಯೋಜನೆಯ (Annabhagya scheme) ಹಣ ಇನ್ನೂ ಬಿಡುಗಡೆ ಆಗಿಲ್ಲ, ಸದ್ಯದಲ್ಲಿಯೇ ಫಲಾನುಭವಿಗಳ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗಲಿದೆ ಎಂದು ಸರ್ಕಾರದಿಂದ ಮಾಹಿತಿ ಲಭ್ಯವಾಗಿದೆ.
ಇದರ ಬೆನ್ನಲ್ಲೇ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು ಮುಂದಿನ ತಿಂಗಳಿನಿಂದ ಅಕ್ಕಿಯ ಬದಲು ಹಣವನ್ನ ಜಮಾ ಮಾಡುವ ಪ್ರಕ್ರಿಯೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗುವುದು
ಅಂದರೆ ಅಕ್ಕಿ ಒಂದು ಸಲ ಸಾಧ್ಯವಾಗದೆ ಇದ್ದರೆ ಐದು ಕೆಜಿ ಅಕ್ಕಿ ಅಥವಾ ಹಣದ ಬದಲಾಗಿ ಪೌಷ್ಟಿಕ ಆಹಾರ ನೀಡುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಸಪ್ಟೆಂಬರ್ ತಿಂಗಳನ್ನು ಹೊರತುಪಡಿಸಿ ಅಗಸ್ಟ್ ತಿಂಗಳಿನ ಹಣ ವರ್ಗಾವಣೆಯ ಬಗ್ಗೆ ಸರ್ಕಾರ ತನ್ನ ಹೊಸ ನಿರ್ಧಾರವನ್ನು ತಿಳಿಸಲಿದೆ.
ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಮುಗಿಬಿದ್ದ ಜನ; ರಾತ್ರೋ ರಾತ್ರಿ ಹೊಸ ಆದೇಶ
ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆಯೋ ಇಲ್ಲವೋ ಚೆಕ್ ಮಾಡಿ
ಸರ್ಕಾರದ ವೆಬ್ಸೈಟ್ https://www.karnataka.gov.in ಗೆ ಭೇಟಿ ನೀಡಿ, ನಂತರ DBT status ಚೆಕ್ ಮಾಡಬಹುದು. ನಿಮ್ಮ ಆರ್ ಸಿ ನಂಬರ್ (Ration Card Number) , ತಿಂಗಳು ಆಯ್ಕೆ ಮಾಡಿ ಕ್ಯಾಪ್ಚಾ ನಂಬರ್ ನಮೂದಿಸಿ
ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಅಥವಾ ಆಫ ಲೈನ್ ನಲ್ಲಿ ಮಾಹಿತಿ ತಿಳಿದುಕೊಳ್ಳಲು ಇನ್ನು ಸರ್ಕಾರದ ಸಹಾಯವಾಣಿ 1800-425-5889 ಈ ಸಂಖ್ಯೆಗೆ ಕರೆ ಮಾಡಿ.
ಗೃಹಲಕ್ಷ್ಮಿಯರಿಗೆ ಬಿಗ್ ರಿಲೀಫ್! ಈ ದಿನಾಂಕ ಎಲ್ಲರ ಖಾತೆಗೂ ಹಣ ಜಮಾ ಆಗುತ್ತೆ; ಸಿಎಂ ಸಿದ್ದರಾಮಯ್ಯ
ಸದ್ಯದಲ್ಲಿ ಮೂರನೇ ಕಂತಿನ ಹಣ ಬಿಡುಗಡೆ ಆಗಲಿದೆ, ಕಳೆದ ತಿಂಗಳು ಹಣ ಜಮಾ ಆಗದೆ ಇರುವವರು ಈ ಬಾರಿ ಖಾತೆಯಲ್ಲಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಸರಿಪಡಿಸಿಕೊಂಡಿದ್ದರೆ ಅಂತವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
Check Annabhagya Yojana money deposited or Not to Your Bank account