ಕೇವಲ ಎರಡು ಸಾವಿರ ರೂಪಾಯಿಗಳಿಗಾಗಿ ಇಷ್ಟೆಲ್ಲ ಕಷ್ಟ ಪಡಬೇಕಾ ಅಂತ ಹಲವರಿಗೆ ಅನ್ನಿಸಬಹುದು. ಆದರೆ ಪ್ರತಿ ತಿಂಗಳು ಉಚಿತವಾಗಿ ಸಿಗುವ ಈ ಎರಡು ಸಾವಿರ ರೂಪಾಯಿಗಳು ಹಲವು ಗೃಹಿಣಿಯರಿಗೆ ಆರ್ಥಿಕವಾಗಿ (Financial support) ಬಹಳ ಅನುಕೂಲ ಮಾಡಿಕೊಡಲಿದೆ.

ಹಾಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮೊದಲ ಕಂತಿನ ಹಣ (First installment) ಬಿಡುಗಡೆ ಆದವರಿಗೆ ಎರಡನೇ ಕಂತಿನ ಹಣ ಯಾವಾಗ ಬರುತ್ತೆ ಎನ್ನುವ ಪ್ರಶ್ನೆ ಕಾಡುತ್ತಿದ್ದರೆ ಇನ್ನೂ ಹಲವು ಮಹಿಳೆಯರು ಅರ್ಜಿ ಸಲ್ಲಿಸಿದರು ತಮಗೆ 2,000 ಬಂದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Gruha Lakshmi money will not be missed for any reason henceforth

ಇಂಥವರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ.

ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಒಂದು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡ್ರಾ?

ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮದಾಗಿಸಿಕೊಳ್ಳಲು ಈ ಕೆಲಸ ಮಾಡಿಕೊಳ್ಳುವುದು ಬಹಳ ಮುಖ್ಯ. ರೇಷನ್ ಕಾರ್ಡ್ (Ration card) ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಒಂದೇ ರೀತಿಯ ಹೆಸರು ಇರಬೇಕು. ಅದೇ ರೀತಿ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿಯೇ ಇರಬೇಕು.

ಈ ಪ್ರಮುಖ ತಿದ್ದುಪಡಿಗಳನ್ನು ನೀವು ಮಾಡಿಕೊಂಡು ಅದು ಸರ್ಕಾರಿ ವೆಬ್ಸೈಟ್ನಲ್ಲಿ ಅಪ್ಡೇಟ್ (update) ಆಗಿದ್ದರೆ ಖಂಡಿತವಾಗಿಯೂ 2,000ಗಳನ್ನು ನೀವು ಪಡೆದುಕೊಳ್ಳಬಹುದು.

ಈಗ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದು ಅಕ್ಟೋಬರ್ 13ರ ವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ನಿಮ್ಮ ಜಿಲ್ಲೆಗೆ ಯಾವ ದಿನಾಂಕ ಫಿಕ್ಸ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಂಡು ಕೂಡಲೇ ತಿದ್ದುಪಡಿ ಮಾಡಿಕೊಳ್ಳಿ. ತಿದ್ದುಪಡಿ ಮಾಡಿಕೊಂಡ ನಂತರ ಸೇವಾ ಸಿಂಧು ಆಪ್ / ವೆಬ್ಸೈಟ್ ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಮುಗಿಬಿದ್ದ ಜನ; ರಾತ್ರೋ ರಾತ್ರಿ ಹೊಸ ಆದೇಶ

ಮೊದಲ ಕಂತಿನ ಹಣ ಯಾಕೆ ಬಂದಿಲ್ಲ ಗೊತ್ತಾ?

Gruha Lakshmi Yojaneಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 1.29 ಕೋಟಿ ಸಲ್ಲಿಕೆಯಾದ ಅರ್ಜಿಗಳಲ್ಲಿ 1.10 ಕೋಟಿ ಮಹಿಳೆಯರ ಖಾತೆಗೆ ಸಾವಿರ ರೂಪಾಯಿ ಜಮಾ ಆಗಿದೆ.

ಕೇವಲ 30% ನಷ್ಟು ಮಹಿಳೆಯರಿಗೆ ಮಾತ್ರ ಮೊದಲ ಕಂತಿನ ಬಿಡುಗಡೆ ಆಗಿಲ್ಲ. ಇದಕ್ಕೆ ಸರ್ವರ್ ಸಮಸ್ಯೆ ಒಂದು ಕಾರಣವಾಗಿದೆ ಜೊತೆಗೆ ಹಲವು ಮಹಿಳೆಯರ ಬ್ಯಾಂಕ್ ಖಾತೆ (Bank Account) ಸಕ್ರಿಯವಾಗಿ ಇಲ್ಲ

ಜೊತೆಗೆ ರೇಷನ್ ಕಾರ್ಡ್ (Ration Card) ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಸೀಡಿಂಗ್ (Aadhaar seeding) ಕೂಡ ಆಗಿಲ್ಲ. ಹಾಗಾಗಿ ಎಲ್ಲ ಸಮಸ್ಯೆಗಳ ಪರಿಹಾರವಾದ ನಂತರ ಎರಡು ಕಂತಿನ ಹಣವನ್ನು (Gruha Lakshmi Scheme Money) ಒಟ್ಟಿಗೆ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹಲಕ್ಷ್ಮಿಯರಿಗೆ ಬಿಗ್ ರಿಲೀಫ್! ಈ ದಿನಾಂಕ ಎಲ್ಲರ ಖಾತೆಗೂ ಹಣ ಜಮಾ ಆಗುತ್ತೆ; ಸಿಎಂ ಸಿದ್ದರಾಮಯ್ಯ

ಎರಡನೇ ಕಂತಿನ ಹಣ ಯಾವಾಗ ಬಿಡುಗಡೆ?

ಇನ್ನು ಎರಡನೆಯ ಕಂತಿನ ಹಣ ಬಹುಶ: ಮಹಿಳೆಯರಿಗೆ ನವರಾತ್ರಿ ಗಿಫ್ಟ್ ಆಗಿ ಸರ್ಕಾರ ನೀಡಲಿದೆ ಎನ್ನಬಹುದು. ಅಕ್ಟೋಬರ್ 15ರ ಬಳಿಕ ಎರಡನೇ ಕಂತಿನ ಹಣವನ್ನು ಖಾತೆಗೆ ಜಮಾ ಮಾಡುವ ನಿರೀಕ್ಷೆ ಇದೆ. ಇಷ್ಟರಲ್ಲಿ ಯಾವೆಲ್ಲ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆಯೋ ಅವರು ಅದನ್ನು ಪರಿಹರಿಸಿಕೊಂಡರೆ ನಾಲ್ಕು ಸಾವಿರ ರೂಪಾಯಿಗಳು ಒಟ್ಟಿಗೆ ಸಿಗುವ ಸಾಧ್ಯತೆ ಇದೆ.

Will you get Gruha Lakshmi Scheme money 4 thousand at a time