ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದ್ಯಾ? ಕೂಡಲೇ ಚೆಕ್ ಮಾಡಿ
ನಿಮ್ಮ ಖಾತೆಗೆ (Bank Account) ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಜಮಾ ಆಗಿದಿಯಾ ಎಂಬುದನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದು.
ಈಗಾಗಲೇ ಒಟ್ಟು ಮೂರು ಕಂತಿನ ಹಣ ಬಿಡುಗಡೆ ಆಗಿದೆ. ಸೆಪ್ಟೆಂಬರ್ ತಿಂಗಳಿನ ಹಣವನ್ನು ಕೂಡ ಸರ್ಕಾರ (Government) ಬಿಡುಗಡೆ ಮಾಡಿದ್ದು, ನಿಮ್ಮ ಖಾತೆಗೆ (Bank Account) ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಜಮಾ ಆಗಿದಿಯಾ ಎಂಬುದನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದು.
ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ ಬೆನಿಫಿಟ್ ಅನ್ನು ಲಕ್ಷಾಂತರ ಜನ ಪಡೆಯುತ್ತಿದ್ದಾರೆ. 34 ರೂಪಾಯಿ ಅಂದರೆ ಒಂದು ಮನೆಯಲ್ಲಿ ಇಬ್ಬರು ಸದಸ್ಯ ಇದ್ದರೆ 340ಗಳು ಸಿಗುತ್ತವೆ.
ಮನೆಯಲ್ಲಿ ಹೆಚ್ಚು ಸದಸ್ಯರಿದ್ದರೆ ಸಿಗುವ ಮೊತ್ತವು ಜಾಸ್ತಿಯಾಗುತ್ತದೆ. ಅಂದರೆ ಕಳೆದ ಎರಡು ಮೂರು ತಿಂಗಳುಗಳಲ್ಲಿ ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ.
ಇದೀಗ ಸೆಪ್ಟೆಂಬರ್ ತಿಂಗಳಿನ ಹಣವನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ನಿಮ್ಮ ಖಾತೆಗೆ ಹಣ ಸಂದಾಯವಾಗಿದೆಯೋ ಎಲ್ಲವೂ ಎಂಬುದನ್ನು ತಿಳಿದುಕೊಳ್ಳಿ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಕೇವಲ 2 ನಿಮಿಷದಲ್ಲಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
ಅನ್ನಭಾಗ್ಯ ಯೋಜನೆ ಯ ಡಿ ಬಿ ಡಿ ಸ್ಟೇಟಸ್ ಚೆಕ್ (DBT status check) ಮಾಡುವುದು ಹೇಗೆ?
* ಮೊದಲನೆಯದಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://ahara.kar.nic.in/Home/EServices ಅನ್ನು ಓಪನ್ ಮಾಡಿ.
*ಮೇಲ್ಭಾಗದಲ್ಲಿ ಈ ಸರ್ವಿಸ್ (E service) ಅಥವಾ ಈ ಸೇವೆಗಳು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ಮೂರನೆಯದಾಗಿ ಎಡ ಭಾಗದಲ್ಲಿ ಈ ಸ್ಥಿತಿ ( E-status)ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಡಿಬಿಟಿ ಸ್ಟೇಟಸ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
* ಈಗ ಜಿಲ್ಲಾ ವಾರು ಬೇರೆ ಬೇರೆ ಲಿಂಕ್ ಗಳನ್ನು ಕಾಣಬಹುದು ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಆ ಲಿಂಕ್ (link) ಮೇಲೆ ಕ್ಲಿಕ್ ಮಾಡಿ.
*ಈಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ ಅದರ ಕೊನೆಯ ಭಾಗದಲ್ಲಿ ಡಿ ಬಿ ಟಿ ಸ್ಟೇಟಸ್ ಚೆಕ್ ಅಥವಾ ನಗದು ನೇರ ವರ್ಗಾವಣೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಅತ್ತೆ ಒಂದು, ಸೊಸೆ ಒಂದು ರೇಷನ್ ಕಾರ್ಡ್ ಮಾಡಿಸುವಂತಿಲ್ಲ! ಬೇರೆ ಬೇರೆ ಕಾರ್ಡ್ ಇದ್ದವರಿಗೆ ಹೊಸ ಆದೇಶ
* ಈಗ ಡಿ ಬಿ ಡಿ ಸ್ಟೇಟಸ್ನ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ವರ್ಷ, ತಿಂಗಳು, ಆರ್ ಸಿ ನಂಬರ್ (Ration card number) ನಮೂದಿಸಿ ನಂತರ ಕ್ಯಾಪ್ಚ ಕೋಡ್ (captcha code) ಹಾಕಿದರೆ ಅನ್ನಭಾಗ್ಯ ಯೋಜನೆಯ ನೇರ ಹಣ ವರ್ಗಾವಣೆಯ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.
*ನಿಮ್ಮ ಬ್ಯಾಂಕ್ ವಿವರ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ ಈಗ ಡಿ ಬಿ ಟಿ ಸ್ಟೇಟಸ್ ಯಾವ ಸ್ಥಿತಿಯಲ್ಲಿ ಇದೆ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳಬಹುದು.
ಒಂದು ವೇಳೆ ಪಾವತಿ ಪ್ರಗತಿಯಲ್ಲಿದೆ ಎನ್ನುವ ಸಂದೇಶ ನೋಡಿದರೆ ನಿಮಗೆ ಸದ್ಯದಲ್ಲಿದೆ ಹಣ ಜಮಾ ಆಗುತ್ತದೆ ಎಂದು ಅರ್ಥ. ಒಂದು ವೇಳೆ ಎಂ ಪಿ ಸಿ ಐ (NPCI) ಅಥವಾ ಆಧಾರ್ ಸೀಡಿಂಗ್ (Aadhaar seeding) ಸರಿಯಾಗಿಲ್ಲ ಎಂದು ಬಂದರೆ ತಕ್ಷಣವೇ ನೀವು ಸಂಬಂಧ ಪಟ್ಟ ಕಚೇರಿಯಲ್ಲಿ ಈ ಕೆಲಸ ಮಾಡಿಸಿಕೊಳ್ಳಬೇಕು. ನಂತರ ನಿಮ್ಮ ಖಾತೆಗೂ (Bank Account) ಹಣ ಜಮಾ ಆಗುತ್ತದೆ.
ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಸುಮಾರು ಜನಕ್ಕೆ ಸಿಕ್ಕಿಲ್ಲ! ನಿಮ್ಮ ಖಾತೆಗೆ ಜಮಾ ಆಗಿದ್ಯಾ? ಚೆಕ್ ಮಾಡಿ
Annabhagya Yojana DBT status check Online for September