ನವರಾತ್ರಿ ಹಬ್ಬಕ್ಕೆ ಗೃಹಲಕ್ಷ್ಮಿ 2ನೇ ಕಂತು ಬಿಡುಗಡೆ! ಇನ್ನೂ ಹಣ ಬರದವರಿಗೆ ಸಿಗುತ್ತೆ ಎರಡೂ ಕಂತು

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರದ (State Government) ಪರಿಚಯಿಸಿರುವ 2000 ಉಚಿತವಾಗಿ ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆ (Gruha lakshmi Scheme) ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ.
ಬಹುತೇಕ 70% ಗಿಂತಲೂ ಹೆಚ್ಚಿನ ಜನರಿಗೆ ಈಗಾಗಲೇ ಮೊದಲ ಕಂತಿನ ಹಣ ಜಮಾ (Money Deposit) ಆಗಿದೆ, ಆದರೆ ಅರ್ಜಿ ಸಲ್ಲಿಸಿರುವವರ ಪೈಕಿ 9,44,155 ಅರ್ಜಿದಾರರಿಗೆ ಮಾತ್ರ ಹಣ ಜಮಾ ಆಗಿಲ್ಲ, ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಗೃಹಲಕ್ಷ್ಮಿ 2ನೇ ಕಂತಿನ ಹಣ ಮೊದಲು ಈ ಜಿಲ್ಲೆಗಳಿಗೆ ಮಾತ್ರ ಬಿಡುಗಡೆ! ಇಲ್ಲಿದೆ ಜಿಲ್ಲಾವಾರು ಪಟ್ಟಿ
ಯಾವಾಗ ತಲುಪುತ್ತೆ ಹಣ!
ರಾಜ್ಯ ಸರ್ಕಾರ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಲ್ಲಿ ಯುವ ನೀಧಿ ಯೋಜನೆ (Yuva nidhi Scheme) ಒಂದು ಜಾರಿಗೆ ಬರುವುದು ಬಾಕಿ ಇದೆ ಉಳಿದಂತೆ ನಾಲ್ಕು ಯೋಜನೆಗಳು ಈಗಾಗಲೇ ಜಾರಿಗೆ ಬಂದಿದ್ದು ಅದರ ಪ್ರಯೋಜನ ಜನರ ಕೈ ತಲುಪಿದೆ.
ಇನ್ನು ಅನ್ನಭಾಗ್ಯ ಯೋಜನೆಯ ನೇರ ಹಣ ವರ್ಗಾವಣೆ (Money Transfer) ಫಲಾನುಭವಿಗಳ ಖಾತೆಗೆ ಮಾಡಲಾಗುತ್ತಿದೆ. ಇದೇ ರೀತಿ ಮನೆಯ ಕುಟುಂಬದ ಯಜಮಾನಿಗೆ 2000ರೂ.ಗಳನ್ನು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ. ಮೊದಲ ಕಂತಿನ ಹಣ ಜಮಾ ಆಗಿದ್ದು ಎರಡನೇ ಕಂತಿನ ಹಣ್ಣು ಇನ್ನೇನು ಬಿಡುಗಡೆ ಆಗಲಿದೆ.
ಹಸು ಕುರಿ ಮೇಕೆ ಸಾಕಣಿಕೆಗೆ ಸಿಗುತ್ತೆ 3 ಲಕ್ಷ ಸಾಲ! ಅತಿ ಕಡಿಮೆ ಬಡ್ಡಿಯಲ್ಲಿ ಸರ್ಕಾರದಿಂದ ಸಬ್ಸಿಡಿ
ಇಂಥವರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಕೇವಲ 2 ನಿಮಿಷದಲ್ಲಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
• 3082 ಅರ್ಜಿದಾರರು ಮರಣ ಹೊಂದಿದ್ದು ಅಂತವರಿಗೆ ಹಣ ವರ್ಗಾವಣೆ.
• 1,59,356 ಅರ್ಜಿಗಳ ಡೆಮೋ ದೃಢೀಕರಣ ವಿಫಲ. ಅಂದರೆ ಆಧಾರ್ ಮತ್ತು ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸ ಇದೆ.
• 5,96,268 ಅರ್ಜಿದಾರರ ಖಾತೆಗೆ ಆಧಾರ್ ಲಿಂಕ್ (Aadhaar Link) ಆಗಿಲ್ಲ.
• 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಲಿಂಕ್ ಆಗಿದೆ. ಆದರೂ ಹಣ ಸಂದಾಯವಾಗದೆ ಇರುವುದಕ್ಕೆ ಸಿಡಿಪಿಓ ಗೆ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ಕೈಕೊಳ್ಳಲಾಗಿದೆ.
• 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸ.
ಈ ಕಾರಣಗಳಿಂದಾಗಿ 9 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ ಹಣ ಜಮೆ ಆಗಿಲ್ಲ.
ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದ್ರೆ ಮಾತ್ರ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತೆ! ಸ್ಟೇಟಸ್ ಚೆಕ್ ಮಾಡಿ
ಬಿಡುಗಡೆಯಾದ ಹಣ
1.8 ಕೋಟಿ ಅರ್ಹ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಲ್ಲಿ 2169 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. 5.5 ಲಕ್ಷ ಫಲಾನುಭವಿಗಳ ಖಾತೆಯಲ್ಲಿ ಡಿ ಬಿ ಟಿ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಹಬ್ಬಕ್ಕೆ ಗಿಫ್ಟ್ ನೀಡಲಿದ್ದಾರೆ ಸಿಎಂ ಸಿದ್ದರಾಮಯ್ಯ
ಇನ್ನು ಎರಡನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವುದು ಹಲವು ಮಹಿಳೆಯರಿಗೆ ಇರುವ ನೀರಿಕ್ಷೆ ಆಗಿದೆ. ಇದಕ್ಕೆ ಉತ್ತರ ನೀಡಿರುವ ಸರ್ಕಾರ ಅಕ್ಟೋಬರ್ 13ರ ವರೆಗೆ ಅಗತ್ಯ ಇರುವ ಎಲ್ಲಾ ತಿದ್ದುಪಡಿ ಮಾಡಿಕೊಂಡರೆ ನವರಾತ್ರಿ ಹಬ್ಬಕ್ಕೆ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿಗಳ ಎರಡನೇ ಕಂತಿನ ಹಣ ಕೂಡ ಜಮಾ ಆಗಲಿದೆ.
ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದ್ಯಾ? ಕೂಡಲೇ ಚೆಕ್ ಮಾಡಿ
ಇನ್ನೊಂದು ಗುಡ್ ನ್ಯೂಸ್ ಅಂದ್ರೆ ಎಲ್ಲಾ ವಿವರಗಳನ್ನು ಸರಿ ಮಾಡಿಕೊಂಡಿದ್ದರೆ ಮೊದಲನೇ ಕಂತಿನ ಹಣ ಯಾರಿಗೆ ಬಂದಿಲ್ಲವೋ ಅಂತವರಿಗೆ ಎರಡನೇ ಕಂತಿನ ಹಣವು ಸೇರಿಸಿ ಒಟ್ಟು 4,000 ರೂಪಾಯಿ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
Those who do not get Gruha Lakshmi Yojana money will get both installments for Navratri festival




