ಪಟಾಕಿ ಹೊಡೆಯೋದಕ್ಕೂ ಬಂತು ಹೊಸ ರೂಲ್ಸ್! ಇನ್ಮುಂದೆ ಈ ಜಾಗದಲ್ಲಿ ಪಟಾಕಿ ಸಿಡಿಸುವಂತಿಲ್ಲ
ನವರಾತ್ರಿ ದೀಪಾವಳಿ (Diwali 2023) ಮೊದಲಾದ ಹಬ್ಬಗಳು ಬರುತ್ತಿವೆ, ಈ ಸಂದರ್ಭದಲ್ಲಿ ಪಟಾಕಿ (Fire Crackers) ಸಿಡಿಸಿ ಸಂಭ್ರಮಿಸುವವರು ಸಾಕಷ್ಟು ಜನ
Bengaluru : ಇನ್ನೇನು ನವರಾತ್ರಿ ದೀಪಾವಳಿ (Diwali 2023) ಮೊದಲಾದ ಹಬ್ಬಗಳು ಬರುತ್ತಿವೆ, ಈ ಸಂದರ್ಭದಲ್ಲಿ ಪಟಾಕಿ (Fire Crackers) ಸಿಡಿಸಿ ಸಂಭ್ರಮಿಸುವವರು ಸಾಕಷ್ಟು ಜನ. ಆದ್ರೆ ಪಟಾಕಿ ಸಿಡಿಸುವಾಗ ಆಗುವ ಅನಾಹುತಗಳ ಬಗ್ಗೆ ಪ್ರತಿವರ್ಷ ಸರ್ಕಾರ ಎಚ್ಚರಿಕೆ ಕೊಡುತ್ತದೆ
ಆದರೆ ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಜನ ಪಟಾಕಿ ಸಿಡಿಸಲು ಹೋಗಿ ಅಪಾಯ ತಂದುಕೊಳ್ಳುತ್ತಾರೆ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಪದೇ ಪದೇ ಪಟಾಕಿ ದುರಂತ ನಡೆಯುತ್ತಲೇ ಇರುತ್ತವೆ.
ಇತ್ತೀಚಿಗೆ ಅತ್ತಿಬೆಲೆಯ (attibele) ಬಳಿ ಬಾಲಾಜಿ ಟ್ರೇಡರ್ಸ್ ಪಟಾಕಿ ಅಂಗಡಿಯಲ್ಲಿ (Fire Crackers) ನಡೆದ ಪಟಾಕಿ ದುರಂತ ನಿಮಗೆಲ್ಲಾ ನೆನಪಿರಬಹುದು. ಈ ದುರಂತಕ್ಕೆ 14 ಮಂದಿ ಬಲಿ ಆಗಿದ್ದರು. ಯಾವುದೇ ಸುರಕ್ಷಾ ನಿಯಮವನ್ನು ಅನುಸರಿಸದೇ ಇರುವ ಕಾರಣ ಇಂತಹ ದೊಡ್ಡ ಅಪಘಾತ ಸಂಭವಿಸಿತು. ಇದನ್ನ ಮನಗಂಡ ರಾಜ್ಯ ಸರ್ಕಾರ ಇದೀಗ ಹೊಸ ರೂಲ್ಸ್ (New Rules) ಜಾರಿಗೆ ತಂದಿದೆ.
ಇಂತಹವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಮಹತ್ವದ ಆದೇಶ
ಲೈಸೆನ್ಸ್ ದಾರರ ಸ್ಥಳ ಪರಿಶೀಲನೆ:
ಅತ್ತಿಬೆಲೆಯಲ್ಲಿ ನಡೆದ ದುರಂತದ ಬಳಿಕ ರಾಜ್ಯ ಸರ್ಕಾರ ಪಟಾಕಿ ವಿಚಾರದಲ್ಲಿ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ, ಇದೇ ಕಾರಣಕ್ಕೆ ಪಟಾಕಿ ಲೈಸೆನ್ಸ್ (cracker licence) ಹೊಂದಿರುವವರ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸಲು ಮುಂದಾಗಿದೆ.
ದೀಪಾವಳಿ (Diwali 2023) ಹಬ್ಬಕ್ಕೆ ಹಸಿರು ಪಟಾಕಿ (green crackers) ಸಿಡಿಸಿ;
ಗೃಹಲಕ್ಷ್ಮಿ ಹಣ ಯಾಕಿನ್ನೂ ಹಲವರ ಖಾತೆಗೆ ಜಮೆ ಆಗಿಲ್ಲ; ಪಕ್ಕಾ ಕಾರಣ ತಿಳಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಸುಪ್ರೀಂ ಕೋರ್ಟ್ ಆದೇಶ
ಸುಪ್ರೀಂ ಕೋರ್ಟ್ (supreme court) ಆದೇಶದಂತೆ ಕೇವಲ ಹಸಿರು ಪಟಾಕಿಯನ್ನು ಮಾತ್ರ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಿಡಿಸಬಹುದು. ರಾಜಕೀಯ ಕಾರ್ಯಕ್ರಮ (political program) ಮದುವೆ ಸಮಾರಂಭ (marriage) ಹಾಗೂ ಹಬ್ಬಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ
ಒಂದು ವೇಳೆ ಹೀಗೆ ಪಟಾಕಿ ಸಿಡಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಆದೇಶ ನೀಡಿದ್ದಾರೆ. ಹಾಗಾಗಿ ಅನಗತ್ಯ ಪಟಾಕಿ ಸಿಡಿಸಿ ತಮಗೂ ಹಾನಿ ಮಾಡಿಕೊಂಡು ಬೇರೆಯವರಿಗೂ ತೊಂದರೆ ಕೊಡುವ ಬದಲು ಪ್ರಕೃತಿಗೆ ತೊಂದರೆ ಆಗದ ರೀತಿಯಲ್ಲಿ ಹಬ್ಬ ಆಚರಿಸಿ ಎನ್ನುವುದು ಸರ್ಕಾರದ ಉದ್ದೇಶ.
New rules for fireworks, firecrackers cannot be burst in this place
Follow us On
Google News |