Bengaluru : ಜಿಲ್ಲಾ ಆಹಾರ ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಅನ್ನಭಾಗ್ಯ ಯೋಜನೆ (Annabhagya Yojana) ಗೆ ಸಂಬಂಧಪಟ್ಟಹಾಗೆ ಹೊಸ ಮಾಹಿತಿ ಒಂದನ್ನು ನೀಡಿದ್ದಾರೆ. ಇದರಿಂದ ವಿಶೇಷವಾಗಿ ರೇಷನ್ ಕಾರ್ಡ್ (Ration Card ಹೊಂದಿರುವವರಿಗೆ ಹೆಚ್ಚಿನ ಬೆನಿಫಿಟ್ ಸಿಗಲಿದೆ ಎನ್ನಬಹುದು.
ನಿಮ್ಮ ಈ ತಪ್ಪುಗಳನ್ನ ಸರಿ ಮಾಡಿಕೊಂಡ್ರೆ ಗೃಹಲಕ್ಷ್ಮಿ ಯೋಜನೆ ಹಣ ನಾಳೆಯೇ ನಿಮ್ಮ ಕೈ ಸೇರುತ್ತೆ
ರಾಜ್ಯದಿಂದ ಸಿಗುತ್ತದೆ ಅಕ್ಕಿಯ ಜೊತೆಗೆ ಈ ಧಾನ್ಯ;
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಗ್ಯಾರಂಟಿ ಯೋಜನೆಯ (Guarantee schemes) ಬಗ್ಗೆ ಜನರು ಅದರ ಪ್ರಯೋಜನ ಪಡೆದುಕೊಳ್ಳಲು ಹೆಚ್ಚು ಪ್ರಯತ್ನಿಸುತ್ತಿದ್ದಾರೆ, ಯಾಕೆಂದರೆ ಈ ಎಲ್ಲ ಯೋಜನೆಗಳಿಗೆ ಮುಖ್ಯವಾಗಿ ಬೇಕಾಗಿರುವುದು ರೇಷನ್ ಕಾರ್ಡ್ (Ration Card), ಇದೇ ಕಾರಣಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲು ಕೂಡ ಜನ ಮುಂದಾಗಿದ್ದಾರೆ.
ಆದ್ರೆ ಸದ್ಯ ಹೊಸ ಪಡಿತರ ಚೀಟಿಯನ್ನು ಅಂತೂ ಕೊಡುತ್ತಿಲ್ಲ, ಬದಲಿಗೆ ಈಗಾಗಲೇ ಯಾರ ಬಳಿ ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ್ದಾರೋ ಅಂತವರಿಗೆ ಸರ್ಕಾರದ ಕಡೆಯಿಂದ ಮಹತ್ವದ ಮಾಹಿತಿ ಒಂದನ್ನು ನೀಡಲಾಗಿದೆ.
ಪಟಾಕಿ ಹೊಡೆಯೋದಕ್ಕೂ ಬಂತು ಹೊಸ ರೂಲ್ಸ್! ಇನ್ಮುಂದೆ ಈ ಜಾಗದಲ್ಲಿ ಪಟಾಕಿ ಸಿಡಿಸುವಂತಿಲ್ಲ
ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಕ್ಕೆ ತಲಾ 21 kg ಅಕ್ಕಿ, ಹಾಗೂ 14kg ರಾಗಿ ನೀಡುವುದು. ಹಾಗೆ BPL ಕಾರ್ಡ್ ಹೊಂದಿರುವ ಕುಟುಂಬಕ್ಕೆ 5 ಕೆ.ಜಿ ಅಕ್ಕಿ ಬದಲು 3kg ಅಕ್ಕಿ ಹಾಗೂ 2 kg ರಾಗಿ ನೀಡುವುದು. ಅಷ್ಟೇ ಅಲ್ಲ, APL ಏಕ ಸದಸ್ಯರ ಕಾರ್ಡ್ ಗಳಿಗೆ 5 kgಅಕ್ಕಿ ಹಾಗೂ ಎರಡರಿಂದ ಮೂರು ಸದಸ್ಯರಿದ್ದರೆ 10 kg ಅಕ್ಕಿಯನ್ನು ಒದಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಅಕ್ಕಿ ಬದಲು ಹಣವಲ್ಲ ಧಾನ್ಯ ಸಿಗುತ್ತೆ!
ಕೇಂದ್ರ ಸರ್ಕಾರ (central government) ರಾಜ್ಯದ ಜನತೆಗೆ ಉಚಿತವಾಗಿ ಕೊಡುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ತಾನು ಕೂಡ 5 ಕೆಜಿ ಅಕ್ಕಿಯನ್ನು ಸೇರಿಸಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ನೀಡಿತು
ಆದರೆ ಅಗತ್ಯ ಇರುವ ಅಕ್ಕಿಯನ್ನು ಹೊಂದಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ, ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆ (Annabhagya Yojana) ಅಡಿಯಲ್ಲಿ ಫಲಾನುಭವಿಗಳು ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.
ಆದರೆ ಇನ್ನು ಮುಂದೆ ಅಕ್ಕಿಯ ಬದಲು ಹಣವಲ್ಲ ಅದರ ಬದಲು ಸ್ವಲ್ಪ ಅಕ್ಕಿ ಹಾಗೂ ಸ್ವಲ್ಪ ರಾಗಿ ಧಾನ್ಯವನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಇಂತಹವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಮಹತ್ವದ ಆದೇಶ
ಪೌಷ್ಟಿಕ ಆಹಾರ ಸಿಗಬೇಕು:
ಇತ್ತೀಚಿನ ದಿನಗಳಲ್ಲಿ ಸಚಿವರಾದ ಚೆಲುವರಾಯಸ್ವಾಮಿ ಅವರು ವಿಧಾನಸೌಧದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದರು. ಸರ್ಕಾರಕ್ಕೆ ಅಕ್ಕಿ ಕೊಡಲು ಸಾಧ್ಯವಾಗದೇ ಇದ್ದಲ್ಲಿ ಜನರಿಗೆ ಅಗತ್ಯವಾದ ಹಾಗೂ ಪೌಷ್ಟಿಕ ಆಹಾರಗಳನ್ನು ನೀಡಿದರೆ ಒಳ್ಳೆಯದು ಎಂದು ಸಲಹೆ ಕೊಟ್ಟಿದ್ದರು, ಇದನ್ನು ಪರಿಗಣಿಸಿರುವ ಸರ್ಕಾರ ಈಗ 2 ಕೆಜಿ ಅಕ್ಕಿ ಹಾಗೂ 3 ಕೆಜಿ ರಾಗಿ ನೀಡಲು ಮುಂದಾಗಿದೆ.
ಈ ತಿಂಗಳು ಅಂದರೆ ಸಪ್ಟೆಂಬರ್ ತಿಂಗಳಿನ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಹಣವನ್ನು ನೇರವಾಗಿ ರೈತರ ಖಾತೆಗೆ (Bank Account) ವರ್ಗಾವಣೆ ಮಾಡಲಾಗುವುದು ಆದರೆ ಮುಂದಿನ ತಿಂಗಳಿನಿಂದ ಅಂದ್ರೆ ಅಕ್ಟೋಬರ್ ತಿಂಗಳಿನಿಂದ ಹಣ ಬದಲು ಅಕ್ಕಿ ಹಾಗು ಧಾನ್ಯ ನೀಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.
BPL ration card holders will get more benefits
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.