ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ? ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಿ

ಅನ್ನಭಾಗ್ಯ ಯೋಜನೆಯ (Aannahagya scheme) ಅಡಿಯಲ್ಲಿ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಹಣವನ್ನು ಸರ್ಕಾರ ವರ್ಗಾವಣೆ ಮಾಡುತ್ತಿದೆ. ಜುಲೈ ತಿಂಗಳಿನಿಂದಲೇ ಈ ಪ್ರಕ್ರಿಯೆ ಆರಂಭವಾಗಿದ್ದು ಸೆಪ್ಟೆಂಬರ್ ತಿಂಗಳಿನ ಹಣ ಕೂಡ ಬಿಡುಗಡೆ ಆಗಿದೆ, ಆದರೆ ಇನ್ನೂ ಹಲವರ ಖಾತೆಗೆ ವರ್ಗಾವಣೆ (Money Deposit) ಆಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮನೆಯಲ್ಲಿ ಹಸು ಮೇಕೆ ಜಾನುವಾರು ಸಾಕುವವರಿಗೆ ಸರ್ಕಾರದಿಂದ ಸಿಗುತ್ತೆ ಈ ಬೆನಿಫಿಟ್; ಅರ್ಜಿ ಸಲ್ಲಿಸಿ
ಈ ಕಾರಣಕ್ಕೆ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ!
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆ ಸಾಕಷ್ಟು ಜನರಿಗೆ ಬೆನಿಫಿಟ್ ನೀಡಿದೆ, ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ತಾವು ಇನ್ನು ಐದು ಕೆಜಿ ಅಕ್ಕಿಯನ್ನು ಸೇರಿಸಿ ಒಟ್ಟು ಕೆಜಿಯನ್ನು ಉಚಿತವಾಗಿ ರೈತರಿಗೆ ಅಥವಾ ಬಿಪಿಎಲ್ (BPL card) ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು.
ಅಕ್ಕಿಯ ಕೊರತೆ ಉಂಟಾಗಿ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಒದಗಿಸಲು ಸಾಧ್ಯವಾಗಿಲ್ಲ, ಇದೇ ಕಾರಣಕ್ಕೆ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಹಣವನ್ನ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ (DBT) ಮಾಡಲಾಗುತ್ತಿದೆ.
ಈಗಾಗಲೇ ಮೂರು ಕಂತಿನ ಹಣ ಬಿಡುಗಡೆಯಾಗಿದೆ, ಕೆಲವರ ಬ್ಯಾಂಕ್ ಖಾತೆಗೆ (bank account) ಹಣ ಬಂದಿದ್ದರು ಹಲವಾರು ಜನರು ಆ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಮುಖ್ಯ ಕಾರಣ ಈ ಕೆ ವೈ ಸಿ (ekyc) ಮಾಡಿಸಿಕೊಳ್ಳದೆ ಇರುವುದು.
ಶಕ್ತಿ ಯೋಜನೆ ಅಪ್ಡೇಟ್! ಇನ್ಮುಂದೆ ರಾಜ್ಯದ ಈ ಬಸ್ಸುಗಳಲ್ಲಿ ಗೃಹಿಣಿಯರಿಗೆ ಉಚಿತ ಪ್ರಯಾಣ ಇಲ್ಲ
ತಕ್ಷಣ ಈ ಕೆಲಸ ಮಾಡಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ:
ಯಾವುದೇ ವ್ಯಕ್ತಿ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಅದಕ್ಕೆ ಕೆವೈಸಿ (KYC) ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ, ಒಂದು ವೇಳೆ ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ (Aadhaar Link) ಆಗದೆ ಇದ್ದಲ್ಲಿ ಆ ಬ್ಯಾಂಕ್ ಖಾತೆಯ ಮೂಲಕ ಯಾವುದೇ ವ್ಯವಹಾರ ಮಾಡಲು ಸಾಧ್ಯವಿಲ್ಲ
ಅದೇ ರೀತಿ ಅನ್ನ ಭಾಗ್ಯ ಫಲಾನುಭವಿಗಳು ಕೂಡ ತಮ್ಮ ಖಾತೆಗೆ ಈ ಕೆ ವೈ ಸಿ ಆಗಿದ್ಯೋ, ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ, ಒಂದು ವೇಳೆ ಆಗದೆ ಇದ್ದಲ್ಲಿ ತಕ್ಷಣವೇ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಯ ಸಂಖ್ಯೆಯನ್ನು ಕೊಟ್ಟು ಅದಕ್ಕೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ. ಆನ್ಲೈನ್ ಮೂಲಕವೂ ಕೆವೈಸಿ ಮಾಡಿಸಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ
ನಿಮ್ಮ ಖಾತೆಗೆ ಹಣ ಜಮಾ ಆಗಿರಬಹುದು ಚೆಕ್ ಮಾಡಿದ್ದೀರಾ?

*ಬಳಿಕ ಎಡ ಭಾಗದಲ್ಲಿ ಈ ಸ್ಥಿತಿ (E-status)ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಡಿ ಬಿ ಟಿ ಸ್ಥಿತಿ (dbt status) ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ಹೊಸ ಪುಟ ತೆರೆದುಕೊಳ್ಳುತ್ತದೆ.
*ಅಲ್ಲಿ ಮೂರು ಲಿಂಕುಗಳು ಕಾಣಿಸುತ್ತವೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲ್ಭಾಗದಲ್ಲಿ ಇರುವ ಲಿಂಕ್ ಕ್ಲಿಕ್ ಮಾಡಿ.
*ನಂತರ ನೀವು ತಿಂಗಳು ನಿಮ್ಮ ಆರ್ಸಿ ನಂಬರ್ (ration card number) ಹಾಗೂ ಕ್ಯಾಪ್ಚ ಸಂಖ್ಯೆಯನ್ನು (captcha number) ನಮೂದಿಸಿದರೆ ನಿಮ್ಮ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ, ಆಗಿದ್ದರೆ ಎಷ್ಟು ಹಣ ಜಮಾ ಆಗಿದೆ.. ಇದರ ಎಲ್ಲಾ ವಿವರಗಳು ಸಿಗುತ್ತವೆ.
ಒಂದು ವೇಳೆ ಪಾವತಿ ಪ್ರಗತಿಯಲ್ಲಿದೆ (payment in process) ಎನ್ನುವ ಸಂದೇಶ ಬಂದರೆ ನಿಮ್ಮ ಖಾತೆಗೆ ಸದ್ಯದಲ್ಲಿಯೇ ಮೂರನೇ ಕಂತಿನ ಹಣ ಜಮಾ ಆಗಲಿದೆ ಎಂದು ಅರ್ಥ.
Check Annabhagya Yojana money of last month been deposited in your Bank account







