ಶಕ್ತಿ ಯೋಜನೆ ಅಪ್ಡೇಟ್! ಇನ್ಮುಂದೆ ರಾಜ್ಯದ ಈ ಬಸ್ಸುಗಳಲ್ಲಿ ಗೃಹಿಣಿಯರಿಗೆ ಉಚಿತ ಪ್ರಯಾಣ ಇಲ್ಲ
ರಾಜ್ಯಾದ್ಯಂತ ಶಕ್ತಿ ಯೋಜನೆಯಡಿ (Shakti scheme) ಯಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಕರ್ನಾಟಕ ರಾಜ್ಯ ಸಾರಿಗೆ (Karnataka State transport) ಯಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಗಿರುವುದಂತೂ ಸತ್ಯ.
ಹೊರ ರಾಜ್ಯಗಳಿಗೆ ಹೋಗುವ ಕರ್ನಾಟಕ ರಾಜ್ಯ ಸಾರಿಗೆಯನ್ನು ಹೊರತುಪಡಿಸಿ ರಾಜ್ಯದ ಒಳಭಾಗದಲ್ಲಿ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿಯೂ (Govt Bus) ಕೂಡ ಸುಲಭವಾಗಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು.
ಈ ಕಾರ್ಡ್ ಇದ್ದವರಿಗೆ ವರ್ಷಕ್ಕೆ ಉಚಿತವಾಗಿ ಸಿಗಲಿದೆ 5 ಲಕ್ಷ; ಸರ್ಕಾರದಿಂದ ಮತ್ತೊಂದು ಯೋಜನೆ
ಹೌದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಶಕ್ತಿ ಯೋಜನೆ (Shakti Yojana) , ಬಹುತೇಕ ಯಶಸ್ವಿಯಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಟ್ಟಿರುವುದರಿಂದ ಮಹಿಳಾ ಸಬಲೀಕರಣಕ್ಕೂ ಕೂಡ ಸರ್ಕಾರ ಮಹತ್ವ ನೀಡಿದಂತಾಗಿದೆ.
ಅವಲಂಬನೆಯ ಜೀವನ ಕಟ್ಟಿಕೊಳ್ಳಲು ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಸ್ ವೆಚ್ಚ ಉಳಿತಾಯವಾಗಿದೆ ಎನ್ನಬಹುದು.
ರಾಜ್ಯಕ್ಕೆ ಬಂತು ಪಲ್ಲಕ್ಕಿ ಬಸ್!
ಸಚಿವ ರಾಮಲಿಂಗಾರೆಡ್ಡಿ ಇತ್ತೀಚಿಗೆ ಕರ್ನಾಟಕ ರಾಜ್ಯಕ್ಕೆ ಹೊಸ ಬಸ್ಗಳ ಸೇರ್ಪಡೆ ಮಾಡಿದ್ದು ಆ ಬಸ್ಗಳ ಉದ್ಘಾಟನೆ ನೆರವೇರಿಸಿದ್ದಾರೆ. ರಾಜ್ಯ ಸರ್ಕಾರ ಒಟ್ಟು 148 ಹೊಸ ಬಸ್ಗಳಿಗೆ ಅನುಮೋದನೆ ನೀಡಿದ್ದು ಇವುಗಳನ್ನು ಪಲ್ಲಕ್ಕಿ ಬಸ್ (pallaki bus) ಎಂದು ಬ್ರಾಂಡಿಂಗ್ (branding) ಮಾಡಲಾಗಿದೆ
ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸಾರಿಗೆ ಬ್ರಾಂಡಿಂಗ್ ನೀಡಲಾಗಿದೆ, ಇನ್ನು ಈ ಪಲ್ಲಕ್ಕಿ ಬಸ್ ನಲ್ಲಿ 40 ನಾನ್ ಎಸಿ ಬಸ್ (non AC bus) ಗಳು ಹಾಗೂ 100 ನಗರ ಸಾರಿಗೆ ಬಸ್ಗಳಾಗಿವೆ.
ಹೊಸ ಬಸ್ಗಳಲ್ಲಿ ನಾಲ್ಕು ಬಸ್ ಶಕ್ತಿ ಯೋಜನೆಯಡಿಯಲ್ಲಿ ಬರುವುದಿಲ್ಲ, ಹಾಗಾಗಿ ಅಂತಹ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಒಟ್ಟು ನೂರು ಬಸ್ಗಳಲ್ಲಿ ಮಾತ್ರ ಮಹಿಳೆಯರು ಶಕ್ತಿ ಯೋಜನೆಯಡಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ
ಐಷಾರಾಮಿ ಪಲ್ಲಕ್ಕಿ ಬಸ್;
ಹೊಸದಾಗಿ ರಾಜ್ಯ ಸಾರಿಗೆ ಸೇರ್ಪಡೆಗೊಂಡಿರುವ ಪಲ್ಲಕ್ಕಿ ಬಸ್ ಸುಧಾರಿತ ತಂತ್ರಜ್ಞಾನಗಳನ್ನು (technology) ಅಳವಡಿಸಿಕೊಂಡು ತಯಾರಿಸಿದ್ದಾಗಿದೆ ಇದರಲ್ಲಿ BS 6 ಇಂಜಿನ್ (Engine) ಅಳವಡಿಸಲಾಗಿದೆ.
ಪ್ರತೀ ಸೀಟ್ ನಲ್ಲಿಯೂ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು (Electronic Gadget) ಚಾರ್ಜ್ ಮಾಡಬಹುದಾದ ಚಾರ್ಜರ್ ಪಾಯಿಂಟ್ (charging facility) ಕೊಡಲಾಗಿದೆ. ಸೆಟ್ ನಂಬರ್ ಗಳಿಗೆ ಎಲ್ಇಡಿ ಲೈಟ್ (LED light) ಅಳವಡಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಸಿಗಲಿದೆ ₹4000 ರೂಪಾಯಿ ಹಬ್ಬದ ಗಿಫ್ಟ್!
ಮೆಟ್ರೋ ಮಾದರಿಯಲ್ಲಿ ಸ್ಪೀಕರ್ ಗಳ ಮೂಲಕ ಬಸ್ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಒಟ್ಟು 40 ನಾನ್ ಎಸಿ ಬಸ್ಗಳಲ್ಲಿ 30 ರಾಜ್ಯದ ಒಳಗೆ ಹಾಗೂ ಹತ್ತು ಬಸ್ಸುಗಳು ರಾಜ್ಯದ ಹೊರಗೆ ಸಂಚರಿಸಲಿವೆ. ಒಟ್ಟಿನಲ್ಲಿ ಸಕ್ಕತ್ ಹೈಟೆಕ್ (Hi-Tech) ಹಾಗೂ ಐಷಾರಾಮಿ (luxurious) ಆಗಿರುವ ಪಲ್ಲಕ್ಕಿ ಬಸ್ ರಾಜ್ಯದ ಸಾರಿಗೆ ಬೊಕ್ಕಸಕ್ಕೆ ಹೆಚ್ಚಿನ ಲಾಭ ತಂದು ಕೊಡಲಿದೆಯಾ ಕಾದು ನೋಡಬೇಕು.
There is no free travel for Women in these buses of the state By Shakti Yojana