ಸಿಹಿಸುದ್ದಿ! ಗೃಹಜ್ಯೋತಿ ಉಚಿತ ವಿದ್ಯುತ್ ಬೆನ್ನಲ್ಲೇ ಸರ್ಕಾರದ ಮತ್ತೊಂದು ಯೋಜನೆ ಜಾರಿಗೆ

ಗೃಹಜ್ಯೋತಿ ಯೋಜನೆಯ (Gruha Jyothi scheme) ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (Free Electricity) ಅನ್ನು ಸರ್ಕಾರ ಒದಗಿಸಿಕೊಡುತ್ತಿದೆ ಆದರೆ ಈ ಉಚಿತ ವಿದ್ಯುತ್ ನಿಂದಾಗಿ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಕೂಡ ತಲೆದೂರಿದೆ.

ನಿಮಗೆಲ್ಲಾ ಗೊತ್ತಿರುವ ಹಾಗೆ ಯಾವಾಗ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು (Gruha Jyothi scheme) ಜಾರಿಗೆ ತಂದಿದೆಯೋ ಅಲ್ಲಿಂದ ಲಕ್ಷಾಂತರ ಮನೆ ಉಚಿತ ವಿದ್ಯುತ್ (free electricity) ನಿಂದ ಬೆಳಗುತ್ತಿದೆ.

ರಾಜ್ಯ ಸರ್ಕಾರದ ಈ ಎಲ್ಲಾ ಯೋಜನೆಗಳು ಜನರಲ್ಲಿ ಭರವಸೆ ಮೂಡಿಸಿದೆ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು (guarantee Scheme) 100% ನಷ್ಟು ಸಕ್ಸಸ್ ಕಂಡಿವೆ ಎಂದು ಹೇಳಲಾಗುತ್ತಿಲ್ಲ, ಯಾಕಂದ್ರೆ ಪ್ರತಿಯೊಂದು ಯೋಜನೆಯಲ್ಲಿಯೂ ಒಂದಲ್ಲ ಒಂದು ಲೋಪದೋಷಗಳು ಕಂಡು ಬರುತ್ತಿವೆ.

10ನೇ ಕ್ಲಾಸ್ ಪಾಸ್ ಆದವರಿಗೆ ಉದ್ಯೋಗಾವಕಾಶ, 52 ಸಾವಿರ ಸಂಬಳ! ಈಗಲೇ ಅಪ್ಲೈ ಮಾಡಿ

After Gruha jyothi free electricity Scheme, another scheme implemented For Farmers

ವಿದ್ಯುತ್ ಅಭಾವ ಎದುರಿಸುತ್ತಿರುವ ರಾಜ್ಯ ಜನತೆ!

ರಾಜ್ಯದ ಜನತೆಗೆ ಗೃಹಜ್ಯೋತಿ ಯೋಜನೆಯ (Gruha Jyothi scheme) ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (Free Electricity) ಅನ್ನು ಸರ್ಕಾರ ಒದಗಿಸಿಕೊಡುತ್ತಿದೆ ಆದರೆ ಈ ಉಚಿತ ವಿದ್ಯುತ್ ನಿಂದಾಗಿ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಕೂಡ ತಲೆದೂರಿದೆ.

ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 20% ಹೆಚ್ಚುವರಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ (power supply) ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ.

ಹೌದು ಬೇಡಿಕೆಗೆ ತಕ್ಕಂತೆ ರಾಜ್ಯ ಸರ್ಕಾರಕ್ಕೆ ವಿದ್ಯುತ್ ಒದಗಿಸಲು ಸಾಧ್ಯವಾಗುತ್ತಿಲ್ಲ, ಈ ಬಾರಿ ಮಳೆಯ ಅಭಾವದಿಂದಾಗಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯುತ್ ಕೊರತೆ ಅನುಭವಿಸುವಂತೆ ಆಗಿದೆ. ಆದರೆ ಇದರ ನೇರ ಪರಿಣಾಮ ಬೀರುತ್ತಿರುವುದು ಮಾತ್ರ ಕೃಷಿಕರ ಮೇಲೆ.

ಮೊದಲೇ ಮಳೆ ಇಲ್ಲದೆ ಉತ್ತಮ ಫಸಲು ಕಾಣಲು ಸಾಧ್ಯವಾಗದೆ ಕಂಗಾಲಾಗಿರುವ ರೈತರು (Farmers) ವಿದ್ಯುತ್ ಕಡಿತದಿಂದ ತಮ್ಮ ಜಮೀನಿಗೆ ಅಗತ್ಯವಿರುವ ನೀರಾವರಿ ಸೌಲಭ್ಯವನ್ನು ಒದಗಿಸಲು ಕೂಡ ಸಾಧ್ಯವಾಗುತ್ತಿಲ್ಲ.

ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗೋಲ್ಲ, ಹಣವೂ ಸಿಗೋಲ್ಲ! ಅಷ್ಟಕ್ಕೂ ಏನಾಯ್ತು ಗೊತ್ತಾ?

ಪವರ್ ಕಟ್ ಸಮಸ್ಯೆ! (Power cut problem)

Free Electricity For Farmersರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೂರುತ್ತಿದ್ದಂತೆ ಲೋಡ್ ಶೆಡ್ಡಿಂಗ್ (load shedding) ಆರಂಭಿಸಲಾಗಿದೆ. ಅದರಲ್ಲೂ ಹಳ್ಳಿ ಪ್ರದೇಶದಲ್ಲಿ ಹೆಚ್ಚು ಸಮಯ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.

ಇದರಿಂದಾಗಿ ರೈತರು ವಿದ್ಯುತ್ ಬಳಸಿ ತಮ್ಮ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಳೆಯ ಅಭಾವದ ಜೊತೆಗೆ ವಿದ್ಯುತ್ ಕಡಿತ ಕೂಡ ಸಂಭವಿಸಿದರೆ ರೈತರು ಈ ವರ್ಷ ಅರ್ಧದಷ್ಟು ಬೆಳೆ ಕೂಡ ಪಡೆಯಲು ಸಾಧ್ಯವಿಲ್ಲ, ಇದನ್ನು ಗಮನಿಸಿರುವ ರಾಜ್ಯ ಸರ್ಕಾರ ಮತ್ತೊಂದು ಉಪಕ್ರಮ (initiative) ತೆಗೆದುಕೊಂಡಿದೆ.

ಯುವಕರಿಗೆ ದೀಪಾವಳಿ ಗಿಫ್ಟ್ ಕೊಡಲು ಮುಂದಾದ ಸರ್ಕಾರ! ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್

5 ಗಂಟೆ ನಿರಂತರ ವಿದ್ಯುತ್!

ರೈತರ ಜಮೀನಿಗೆ ವಿದ್ಯುತ್ ಮೂಲಕ ಪಂಪ್ಸೆಟ್ (pump set) ಬಳಸಿ ನೀರು ಹಾಯಿಸಲು ಅಗತ್ಯ ಇರುವ ವಿದ್ಯುತ್ ಅನ್ನು ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ರೈತರ ಜಮೀನಿಗೆ ಯಾವುದೇ ಅಡಚಣೆ ಇಲ್ಲದೆ ದಿನದಲ್ಲಿ ಐದು ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಒದಗಿಸಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ದಿನದ ಐದು ಗಂಟೆಗಳ ಕಾಲ ರೈತರು ತಮ್ಮ ಜಮೀನಿಗೆ ನೀರುಣಿಸಬಹುದು.

ಅಷ್ಟೇ ಅಲ್ಲದೆ ರಾಜ್ಯದಲ್ಲಿ ಇರುವ ವಿದ್ಯುತ್ ಕೊರತೆ ನಿವಾರಣೆಗಾಗಿ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ ಈ ಕಾರಣಕ್ಕೆ ಯಾವೆಲ್ಲ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಸದ್ಯದಲ್ಲೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಇಂತಹ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ರೂಪಾಯಿ, ಇನ್ನು 2 ಸಾವಿರ ಬಂದಿಲ್ಲ ಅನ್ನೋ ಚಿಂತೆ ಬೇಡ

After Gruha jyothi free electricity Scheme, another scheme implemented For Farmers

Related Stories