ಯುವಕರಿಗೆ ದೀಪಾವಳಿ ಗಿಫ್ಟ್ ಕೊಡಲು ಮುಂದಾದ ಸರ್ಕಾರ! ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್
20223ನೇ ಸಾಲಿನಲ್ಲಿ ಉತ್ತೀರ್ಣರಾದ ಪದವಿ (graduate) ವಿದ್ಯಾರ್ಥಿಗಳು ಆರು ತಿಂಗಳಾದರೂ ಉದ್ಯೋಗ ಗಳಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ ಅಂತವರಿಗೆ ಪ್ರತಿ ತಿಂಗಳು 3000 ರೂ.ಗಳನ್ನು ಅವರ ಖಾತೆಗೆ (Bank Account) ಜಮಾ ಮಾಡಲಾಗುವುದು.
ಸರ್ಕಾರ ಜಾರಿಗೆ ತಂದಿರುವ ನಾಲ್ಕು ಗ್ಯಾರಂಟಿ ಯೋಜನೆಗಳ (Karnataka government guarantee schemes) ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿವೆ. ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಗಳ ಪ್ರಯೋಜನ ಸಿಗದೇ ಇದ್ದರು ಬಹುತೇಕ ಫಲಾನುಭವಿಗಳು ನಾಲ್ಕು ಯೋಜನೆಗಳ ಸೌಲಭ್ಯ ಪಡೆದುಕೊಂಡಿದ್ದಾರೆ.
ಯೋಜನೆಗಳ ಯಶಸ್ಸಿನ ಬೆನ್ನಲ್ಲೇ ಐದನೇ ಗ್ಯಾರಂಟಿ ಯೋಜನೆ ಯಾವಾಗ ಬಿಡುಗಡೆ ಆಗುತ್ತದೆ ಎಂದು ಹಲವು ಯುವಕರು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದರು, ಈಗ ಇದಕ್ಕೆ ಉತ್ತರ ಸಿಕ್ಕಿದೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ 80,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ
ಯುವ ನಿಧಿ ಯೋಜನೆ (Yuva Nidhi Yojana)
ಈಗ ರಾಜ್ಯ ಸರ್ಕಾರ ವಿಧಾನಸಭೆ ಚುನಾವಣೆಗೂ (Vidhan sabha election) ಮುನ್ನ ಹೊರಡಿಸಿದ ಪ್ರಣಾಳಿಕೆಯಲ್ಲಿ ಐದನೇ ಯೋಜನೆಯಾಗಿ ಯುವ ನಿಧಿ ಯೋಜನೆಯನ್ನು ಘೋಷಣೆ ಮಾಡಿತ್ತು.
20223ನೇ ಸಾಲಿನಲ್ಲಿ ಉತ್ತೀರ್ಣರಾದ ಪದವಿ (graduate) ವಿದ್ಯಾರ್ಥಿಗಳು ಆರು ತಿಂಗಳಾದರೂ ಉದ್ಯೋಗ ಗಳಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ ಅಂತವರಿಗೆ ಪ್ರತಿ ತಿಂಗಳು 3000 ರೂ.ಗಳನ್ನು ಅವರ ಖಾತೆಗೆ (Bank Account) ಜಮಾ ಮಾಡಲಾಗುವುದು.
ಡಿಪ್ಲೋಮಾ (Diploma); ಕೋರ್ಸ್ ಮುಗಿಸಿ ಆರು ತಿಂಗಳವರೆಗೆ ಉದ್ಯೋಗ (job) ದೊರಕದೆ ಇದ್ದಲ್ಲಿ ಅಂತಹ ಯುವಕ ಯುವತಿಯರ ಖಾತೆಗೆ 1500 ರೂ. ಪ್ರತಿ ತಿಂಗಳು ಸರ್ಕಾರ ಜಮಾ ಮಾಡಲಿದೆ.
ಎರಡು ವರ್ಷಗಳವರೆಗೆ ಸರ್ಕಾರದಿಂದ ಸಿಗುವ ಈ ಉಚಿತ ಹಣವನ್ನು ಪಡೆದುಕೊಳ್ಳಬಹುದು, ಆದರೆ ಎರಡು ವರ್ಷದ ಒಳಗೆ ಉದ್ಯೋಗ ಸಂಪಾದಿಸಿಕೊಳ್ಳುವುದು ಯುವಕ ಯುವತಿಯರ ಜವಾಬ್ದಾರಿ. ಒಂದು ವೇಳೆ ಎರಡು ವರ್ಷ ಕಳೆದರೂ ಉದ್ಯೋಗ ಸಿಗದೇ ಇದ್ದರೆ ಆಗಲು ಯುವನಿಧಿ ಯೋಜನೆ ಮುಂದುವರೆಯುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಸರ್ಕಾರ ಇನ್ನು ಸ್ಪಷ್ಟವಾದ ಮಾಹಿತಿ ನೀಡಿಲ್ಲ.
ಇಂತಹ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ರೂಪಾಯಿ, ಇನ್ನು 2 ಸಾವಿರ ಬಂದಿಲ್ಲ ಅನ್ನೋ ಚಿಂತೆ ಬೇಡ
ಯುವನಿಧಿ ಯೋಜನೆಯಲ್ಲೂ ಆಗಬಹುದು ವಂಚನೆ!
ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) 2000 ಗಳನ್ನು ಪಡೆದುಕೊಳ್ಳಲು ಸಾಕಷ್ಟು ಜನ ರೇಷನ್ ಕಾರ್ಡ್ ನಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ರೇಷನ್ ಕಾರ್ಡ್ (Ration Card) ಅನ್ನು ಸರ್ಕಾರ ರದ್ದು ಪಡಿಸಲು ಮುಂದಾಗಿದೆ. ಯುವ ನಿಧಿ ಯೋಜನೆಯ ಹಣ ಪಡೆದುಕೊಳ್ಳುವ ಸಲುವಾಗಿ, ಯುವಕ ಯುವತಿಯರು ತಪ್ಪಾದ ಮಾಹಿತಿಯನ್ನು ಕೊಟ್ಟರೆ, ಭಾರಿ ಪ್ರಮಾಣದ ದಂಡ (penalty) ತೆರಬೇಕಾಗುತ್ತದೆ.
ಈ ಯೋಜನೆ ಆರಂಭವಾದ ನಂತರ ಎರಡು ವರ್ಷದ ಒಳಗೆ ಯಾವುದೇ ಸಮಯದಲ್ಲಿ ಉದ್ಯೋಗ ಪಡೆದುಕೊಂಡರು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಉದ್ಯೋಗ ಪಡೆದ ಕ್ಷಣದಿಂದ ಯುವನಿಧಿ ಯೋಜನೆಯ ಹಣ ವರ್ಗಾವಣೆ ಆಗುವ ಪ್ರಕ್ರಿಯೆ ನಿಲ್ಲುತ್ತದೆ.
ಉದ್ಯೋಗ ಸಿಕ್ಕರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರೆ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಸರ್ಕಾರ ಈಗಾಗಲೇ ತಿಳಿಸಿದೆ.
ಹೊಸ ರೇಷನ್ ಕಾರ್ಡ್ ಪಡೆಯೋಕೆ ಹೀಗೆ ಮಾಡಿ; ಹೊರಬಿತ್ತು ಸರ್ಕಾರದ ಅಧಿಕೃತ ಆದೇಶ
ಯಾವಾಗಿನಿಂದ ಆರಂಭ ಯುವ ನಿಧಿ ಯೋಜನೆ!
ಯುವನಿಧಿ ಯೋಜನೆಯ ಅಡಿಯಲ್ಲಿ ನಿರುದ್ಯೋಗಿ (unemployed) ಯುವಕ ಯುವತಿಯರಿಗೆ ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಡಿಸೆಂಬರ್ ತಿಂಗಳಿನಿಂದ ಆರಂಭಿಸುವುದಾಗಿ ಸಚಿವ ಶರಣಪ್ರಕಾಶ್ ಆರ್ ಪಾಟೀಲ್ (sharana Prakash R Patil) ತಿಳಿಸಿದ್ದಾರೆ.
ಸರಿಯಾದ ದಾಖಲೆಗಳನ್ನು ನೀಡಿ ಯುವ ನಿಧಿ ಯೋಜನೆಗೆ ಅರ್ಹ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಯಾವೆಲ್ಲಾ ದಾಖಲೆಗಳು ಬೇಕು ಹಾಗೂ ಯಾವೆಲ್ಲ ಷರತ್ತುಗಳನ್ನು ಪಾಲಿಸಬೇಕು ಮೊದಲಾದ ಮಾಹಿತಿಯ ಬಗ್ಗೆ ಸರ್ಕಾರ ಸದ್ಯದಲ್ಲೇ ಸುತ್ತೋಲೆ ಹೊರಡಿಸಲಿದೆ.
ಹಸು ಕುರಿ ಮೇಕೆ ಸಾಕುವವರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ
Diwali gifts to the youth of the state, Big update on Yuva Nidhi Yojana