ಹೊಸ ರೇಷನ್ ಕಾರ್ಡ್ ಪಡೆಯೋಕೆ ಹೀಗೆ ಮಾಡಿ; ಹೊರಬಿತ್ತು ಸರ್ಕಾರದ ಅಧಿಕೃತ ಆದೇಶ
ವಂಚನೆಯ ರೇಷನ್ ಕಾರ್ಡ್ (Ration Card) ಅನ್ನು ಮೊದಲು ರದ್ದು ಪಡಿಸಲಾಗುವುದು ಎಂದು ಕೆ.ಹೆಚ್ ಮುನಿಯಪ್ಪ (K.H Muniyappa) ತಿಳಿಸಿದ್ದಾರೆ
ಕೇಂದ್ರ ಸರ್ಕಾರ ( Central government) ಒಂದು ರಾಜ್ಯಕ್ಕೆ ಇಷ್ಟು ಬಿಪಿಎಲ್ ಕಾರ್ಡ್ ( BPL card) ಅಥವಾ ಎಪಿಎಲ್ ಕಾರ್ಡ್ (APL Card) ವಿತರಣೆ ಮಾಡಬೇಕು ಎಂಬ ನಿಯಮ ಮಾಡಿರುತ್ತದೆ
ಈಗಾಗಲೇ ರಾಜ್ಯ ಸರ್ಕಾರದಲ್ಲಿ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಬಿಪಿಎಲ್ ಕಾರ್ಡ್ ವಿತರಣೆ (BPL Ration Card) ಮಾಡಿದ್ದು ಆಗಿದೆ. ಆದರೆ ಈಗಲೂ ಸಾಕಷ್ಟು ಜನ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
ಈ ಹಿನ್ನೆಲೆಯಲ್ಲಿ ಎರಡುವರೆ ವರ್ಷಗಳ ಹಿಂದೆ ಅರ್ಜಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಪರಿಶೀಲಿಸಿ ಅಂತವರಿಗೆ ರೇಷನ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ.
ಹಸು ಕುರಿ ಮೇಕೆ ಸಾಕುವವರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ
ರೇಷನ್ ಕಾರ್ಡ್ ಬಹಳ ಪ್ರಮುಖವಾಗಿರುವಂತಹ ಒಂದು ದಾಖಲೆಯಾಗಿದೆ, ಕೇವಲ ಪಡಿತರ ವಸ್ತುಗಳನ್ನು ಖರೀದಿ ಮಾಡಲು ಮಾತ್ರವಲ್ಲದೆ ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕೂಡ ಸಹಾಯಕವಾಗಿದೆ
ಆದರೆ ರೇಷನ್ ಕಾರ್ಡ್ ಮಹತ್ವವನ್ನು ಮರೆತ ಜನ ಈ ವಿಚಾರದಲ್ಲಿ ಸಾಕಷ್ಟು ವಂಚನೆ (fraud cases) ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಈ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿ ವಿತರಣೆ ಮಾಡುವುದಕ್ಕಿಂತಲೂ ಇಂತಹ ವಂಚನೆಯ ರೇಷನ್ ಕಾರ್ಡ್ (Ration Card) ಅನ್ನು ಮೊದಲು ರದ್ದು ಪಡಿಸಲಾಗುವುದು ಎಂದು ಕೆ.ಹೆಚ್ ಮುನಿಯಪ್ಪ (K.H Muniyappa) ತಿಳಿಸಿದ್ದಾರೆ.
ಇಂತಹವರಿಗೆ ಸಿಗಲಿದೆ ಉಚಿತ ಮನೆ, ಸರ್ಕಾರದಿಂದ ಆರನೇ ಗ್ಯಾರಂಟಿ ಯೋಜನೆ ಘೋಷಣೆ
ಸಚಿವರೇ ರೇಷನ್ ಕಾರ್ಡ್ ವಿತರಣೆಯ ಬಗ್ಗೆ ನೀಡಿದ ಸ್ಪಷ್ಟನೆ!
ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ, ರೇಷನ್ ಕಾರ್ಡ್ ವಿತರಣೆಯ ಬಗ್ಗೆ ಇರುವ ಗೊಂದಲವನ್ನು ತೊಡೆದು ಹಾಕಲು ಪ್ರಯತ್ನಿಸಿದ್ದಾರೆ.
ಬಿಜೆಪಿ ಸರ್ಕಾರ (BJP government) ಅಧಿಕಾರದಲ್ಲಿ ಇರುವಾಗ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ನಿಲ್ಲಿಸಿತ್ತು, ಹಾಗಾಗಿ ಆಹಾರ ಇಲಾಖೆಯ ಬಳಿ 2.96 ಲಕ್ಷ ರೇಷನ್ ಕಾರ್ಡ್ ಅರ್ಜಿಗಳು ಇವೆ. ಇವುಗಳನ್ನು ಪರಿಶೀಲನೆ ಮಾಡಿ ಫಲಾನುಭವಿಗಳಿಗೆ ಸದ್ಯದಲ್ಲಿಯೇ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಆದರೆ ಪಡಿತರ ವಸ್ತುಗಳನ್ನ ಪಡೆದುಕೊಳ್ಳದೆ ಕೇವಲ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥವಾ ಸರ್ಕಾರದ ಇನ್ನಿತರ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬಿಪಿಎಲ್ ಕಾರ್ಡ್ ವಿತರಣೆ ಮಾಡುವುದು ಬಡತನ ರೇಖೆಗಿಂತ ಕೆಳಗಿನವರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು, ಅವರಿಗೆ ಅಗತ್ಯವಾದ ಅಕ್ಕಿ ಮತ್ತು ಇತರ ಧಾನ್ಯಗಳನ್ನು ನೀಡುವುದು ಪ್ರಮುಖ ಉದ್ದೇಶವಾಗಿದೆ.
ಆದರೆ ಇಂದು ರಾಜ್ಯದಲ್ಲಿ ಮೂರು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಹೊಂದಿರುವವರು ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುವನ್ನೇ ಪಡೆದುಕೊಂಡಿಲ್ಲ, ಹಾಗಾಗಿ ಅಂತವರ ರೇಷನ್ ಕಾರ್ಡ್ ತಕ್ಷಣವೇ ರದ್ದಾಗಲಿದೆ.
ಪಡಿತರ ಚೀಟಿಯಲ್ಲಿ ವಂಚನೆಯನ್ನು ತಡೆಗಟ್ಟಲು ಈ ಕೆವೈಸಿ (KYC) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಕೆವೈಸಿ ಲಿಂಕ್ ಮಾಡಿಕೊಳ್ಳದೆ ಇದ್ದಲ್ಲಿ ಅಂತಹ ಕಾರ್ಡ್ ಕೂಡ ಆಹಾರ ಇಲಾಖೆ ನಿಷೇಧಿಸಲಿದೆ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಗುಡ್ ನ್ಯೂಸ್! ಸದ್ಯದಲ್ಲೇ 2.95 ಲಕ್ಷ ಕಾರ್ಡುಗಳು ವಿತರಣೆ
ಮುಂದಿನ ತಿಂಗಳಿನಿಂದ ಸಿಗಲಿದೆಯಾ ಅಕ್ಕಿ?
ರಾಜ್ಯ ಸರ್ಕಾರ ಚುನಾವಣೆಗು ಮೊದಲು ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಪ್ರಕಾರ ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹತ್ತು ಕೆಜಿ ಅಕ್ಕಿಯನ್ನು ನೀಡಬೇಕಿತ್ತು. ಆದರೆ ಈಗ ಕೇಂದ್ರದಿಂದ ಬರುತ್ತಿರುವ ಉಚಿತ ಐದು ಕೆಜಿ ಅಕ್ಕಿಯನ್ನು ಮಾತ್ರ ವಿತರಣೆ ಮಾಡಲಾಗುತ್ತಿದೆ ಹಾಗೂ ರಾಜ್ಯ ಸರ್ಕಾರ ಹೆಚ್ಚುವರಿ 5 ಕೆ.ಜಿ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಿದೆ.
ಆದರೆ ನಾವು ಅಕ್ಕಿ ಹೊಂದಿಸಲು ಪ್ರಯತ್ನಿಸುತ್ತಿದ್ದೇವೆ, ಯಾವಾಗ ಸಂಪೂರ್ಣವಾಗಿ ಹೊಂದಿಸಲು ಸಾಧ್ಯವಾಗುತ್ತದೆಯೋ ಆಗ ಫಲಾನುಭವಿಗಳಿಗೆ ಅಕ್ಕಿಯನ್ನು ನೀಡುತ್ತೇವೆ ಹೊರತು ಹಣವನ್ನಲ್ಲ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯ ರೈತರಿಗಾಗಿ ಹೊಸ ಯೋಜನೆ; ಸೋಲಾರ್ ಪಂಪ್ ಸೆಟ್ ಗೆ 1.5 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸಿ
ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ರಾಜ್ಯ ಸರ್ಕಾರ ಅಕ್ಕಿ ಹೊಂದಿಸಲು ಸಫಲವಾದರೆ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ (Money Transfer) ಮಾಡುವ ಪ್ರಕ್ರಿಯೆ ನಿಲ್ಲುತ್ತದೆ ಹಾಗೂ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ.
Follow these steps to get a new ration card, Govt’s official order