ಹಸು ಕುರಿ ಮೇಕೆ ಸಾಕುವವರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ
ಒಂದು ದೇಶ ಪ್ರಗತಿ ಸಾಧಿಸಬೇಕು ಅಂದ್ರೆ ಆದೇಶದಲ್ಲಿ ವಾಸಿಸುವ ರೈತರ ಅಭಿವೃದ್ಧಿ (farmer’s development) ಬಹಳ ಮುಖ್ಯವಾಗಿರುತ್ತದೆ, ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುತ್ತವೆ.
ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ, ಹಾಗಾಗಿ ಹೈನುಗಾರಿಕೆ (dairy farming) ಕುರಿ, ಮೇಕೆ ಸಾಕಾಣಿಕೆ ಉದ್ಯಮ (Own Business) ಮಾಡಲು ಬಯಸುವವರಿಗೆ ಸರ್ಕಾರದಿಂದ ಪ್ರಮುಖ ಸೌಲಭ್ಯ ಸಿಗಲಿದೆ.

ಇಂತಹವರಿಗೆ ಸಿಗಲಿದೆ ಉಚಿತ ಮನೆ, ಸರ್ಕಾರದಿಂದ ಆರನೇ ಗ್ಯಾರಂಟಿ ಯೋಜನೆ ಘೋಷಣೆ
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ 2023! (Kisan credit card scheme 2023)
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ರೈತರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಾರ್ಡ್ ಹೊಂದಿರುವವರು ಸರ್ಕಾರದ ಸಾಲ ಸೌಲಭ್ಯವನ್ನು (subsidy loan) ಪಡೆದುಕೊಳ್ಳಬಹುದು, ಅತಿ ಕಡಿಮೆ ಬಡ್ಡಿ ದರಕ್ಕೆ ಸಾಲ (low interest loan) ಹಾಗೂ ಹಲವು ಉದ್ಯಮಕ್ಕೆ ಸಹಾಯಧನ ಕೂಡ ಸರ್ಕಾರದಿಂದ ಲಭ್ಯವಾಗುತ್ತಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಸಾಲಕ್ಕೆ 2% ಬಡ್ಡಿ ಸಹಾಯಧನವನ್ನು ಸರ್ಕಾರ ನೀಡುತ್ತದೆ ಹಾಗೂ ಸಾಲವನ್ನು ಸರಿಯಾದ ಸಮಯದಲ್ಲಿ ತೀರಿಸಿದರೆ 3% ಬಡ್ಡಿಗೆ ಸಹಾಯಧನ ಸರ್ಕಾರದಿಂದ ಲಭ್ಯವಿದೆ. ಅಂದರೆ ರೈತರು ಮಾಡುವ ಸಾಲಕ್ಕೆ ಒಟ್ಟಾರೆಯಾಗಿ ಬ್ಯಾಂಕ್ ನಲ್ಲಿ 7% ಬಡ್ಡಿ ಇದ್ದರೆ 5% ಬಡ್ಡಿ ಗೆ ಸಹಾಯಧನವನ್ನು ಸರ್ಕಾರ ನೀಡುತ್ತದೆ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಗುಡ್ ನ್ಯೂಸ್! ಸದ್ಯದಲ್ಲೇ 2.95 ಲಕ್ಷ ಕಾರ್ಡುಗಳು ವಿತರಣೆ
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಸಿಗುವ ಸಾಲ – Loan Details
ಹೈನುಗಾರಿಕೆ
ಮಿಶ್ರತಳಿ ದನಗಳ ನಿರ್ವಹಣೆಗೆ ಸಹಾಯಧನ ನೀಡಲಾಗುತ್ತದೆ, ಒಂದು ಹಸುವಿಗೆ 18000 ಹಾಗೂ 2 ಹಸುವಿಗೆ 36,000ಗಳ ಸಾಲ ಪಡೆಯಬಹುದು. ಅದೇ ರೀತಿ ಎಮ್ಮೆ ನಿರ್ವಹಣೆಗೆ ಒಂದು ಎಮ್ಮೆಗೆ 21,000 ರೂ. ಹಾಗೂ 2 ಎಮ್ಮೆ ಸಾಕಾಣಿಕೆಗೆ 42, 000ರೂ. ಸಾಲವಾಗಿ ಸಿಗಲಿದೆ.
ಕುರಿ ಸಾಕಾಣಿಕೆ
10+1 ಕುರಿಗಳನ್ನು ಕಟ್ಟಿ ಸಾಕಿದರೆ 29,950ರೂ. ಹಾಗೂ ಬಯಲಿನಲ್ಲಿ ಬಿಟ್ಟು ಸಾಕುವ ಕುರಿಗಳಿಗೆ 28,200ಗಳ ಸಾಲ ಸೌಲಭ್ಯ ಸಿಗಲಿದೆ. ಇದೇ ರೀತಿ ಮೇಕೆ ಸಾಕಾಣಿಕೆಗೂ ಕೂಡ ಕಟ್ಟಿ ಸಾಕುವ ಮೇಕೆಗೆ 29,950 ಹಾಗೂ ಬಿಟ್ಟು ಸಾಕು ಮೇಕೆ ನಿರ್ವಹಣೆಗೆ 14,700ಗಳನ್ನು ಸಾಲವಾಗಿ ಪಡೆಯಬಹುದು. 20 ಮೇಕೆಗಳನ್ನು ಕಟ್ಟಿ ಸಾಕಿದರೆ 57,200 ರೂಪಾಯಿ ಹಾಗೂ ಮೇಯಿಸುವ ಮೇಕೆ ನಿರ್ವಹಣೆಗೆ 28,200 ಸಾಲ ಪಡೆಯಬಹುದು.
ರಾಜ್ಯ ರೈತರಿಗಾಗಿ ಹೊಸ ಯೋಜನೆ; ಸೋಲಾರ್ ಪಂಪ್ ಸೆಟ್ ಗೆ 1.5 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸಿ
ಹಂದಿ ನಿರ್ವಹಣೆಗೆ ಸಾಲ
10 ಹಂದಿಗಳನ್ನು ಸಾಕಾಣಿಕೆಗೆ ಅರವತ್ತು ಸಾವಿರ ರೂಪಾಯಿಗಳನ್ನು ನಿರ್ವಹಣಾ ವೆಚ್ಚ ಸಾಲ (maintenance) ನೀಡಲಾಗುವುದು.
ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ
ಮಾಂಸದ ಕೋಳಿ ಸಾಕುವುದಾದರೆ ಒಂದು ಕೋಳಿಗೆ 80 ರೂಪಾಯಿಗಳಂತೆ, ಸಾವಿರ ಕೋಳಿಗಳಿಗೆ 80,000 ಸಾಲ ಪಡೆದುಕೊಳ್ಳಬಹುದು. ಅದೇ ರೀತಿ ಮೊಟ್ಟೆ ಕೋಳಿ ಸಾಕಾಣಿಕೆಗೆ ನಿರ್ವಹಣಾ ವೆಚ್ಚ ಒಂದು ಕೋಳಿಗೆ 180 ರೂಪಾಯಿಗಳಂತೆ ಸಾವಿರ ಕೋಳಿಗಳು 1,80,000 ರೂಪಾಯಿಗಳನ್ನು ಸಾಲವಾಗಿ ಪಡೆಯಬಹುದು.
ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲವೇ! ಸರ್ಕಾರವೇ ಕೊಡುತ್ತೆ ಪರಿಹಾರ; ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿ
ಅರ್ಹ ಫಲಾನುಭವಿಗಳು ಮಾರ್ಚ್ 31 2024ರ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ನಿಮ್ಮ ಉದ್ಯಮದ ಬಗ್ಗೆ ಮಾಹಿತಿ, ಬ್ಯಾಂಕ್ ಖಾತೆಯ ವಿವರ, ಅರ್ಜಿ ನಮೂನೆ ಮೊದಲಾದವುಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 8277100200 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ.
Get 3 lakh subsidy Loan for cow, sheep and goat farming from Govt