ರಾಜ್ಯ ರೈತರಿಗಾಗಿ ಹೊಸ ಯೋಜನೆ; ಸೋಲಾರ್ ಪಂಪ್ ಸೆಟ್ ಗೆ 1.5 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸಿ
ತೋಟಗಾರಿಕೆ ಅಭಿವೃದ್ಧಿ ಯೋಜನೆಯ (Karnataka horticulture department) ಅಡಿಯಲ್ಲಿ, ತೋಟಗಾರಿಕೆ ಇಲಾಖೆಯ ವತಿಯಿಂದ ವಿನೂತನ ತಂತ್ರಜ್ಞಾನ (technology) ಮತ್ತು ಯಂತ್ರೋಪಕರಣಗಳನ್ನು (machineries) ಪಡೆಯುವುದಕ್ಕೆ ರೈತರಿಗೆ ಸಹಾಯಧನ (subsidy for farmers) ನೀಡಲು ಸರ್ಕಾರ ನಿರ್ಧರಿಸಿದೆ.
2023-24ನೇ ಸಾಲಿನ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸೋಲಾರ್ ಪಂಪ್ ಸೆಟ್ (solar Water pump set) ಗಳನ್ನು ರೈತರು (Farmer) ತಮ್ಮ ತೋಟಗಳಿಗೆ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನ (Subsidy) ನೀಡಲಿದೆ.
ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲವೇ! ಸರ್ಕಾರವೇ ಕೊಡುತ್ತೆ ಪರಿಹಾರ; ಅರ್ಜಿ ಸಲ್ಲಿಸಿ
ರೈತರಿಗೆ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸಹಾಯಧನ – Solar Water Pump Set
ಇತ್ತೀಚಿನ ದಿನಗಳಲ್ಲಿ ವಿದ್ಯುತ್ (power cut) ಅಭಾವ ಕೂಡ ಹೆಚ್ಚಾಗಿದೆ, ಇದೇ ಕಾರಣಕ್ಕೆ ರೈತರು ತಮ್ಮ ಜಮೀನಿಗೆ ಸರಿಯಾಗಿ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಸೋಲಾರ್ (Solar) ಬಳಸಿ ಗಳ ಮೂಲಕ ನೀರಾವರಿ ಮಾಡಿಕೊಳ್ಳುವುದಕ್ಕೆ ಸರ್ಕಾರ ಸಬ್ಸಿಡಿ ಸಾಲವನ್ನು ನೀಡುತ್ತಿದೆ.
ಎಷ್ಟು ಸಿಗುತ್ತೆ ಸಬ್ಸಿಡಿ? (Subsidy)
ಮೂರು ಎಚ್ ಪಿ ಸೋಲಾರ್ ಪಂಪ್ ಸೆಟ್ ಗೆ ಒಂದು ಲಕ್ಷ ರೂಪಾಯಿ, ಐದು ಹೆಚ್ ಪಿ ಹಾಗೂ ಹೆಚ್ಚಿನ ಸಾಮರ್ಥ್ಯದ ಪಂಪ್ಸೆಟ್ಟುಗಳಿಗೆ 1.50 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದೆ ಸರ್ಕಾರ.
ಮೂರು ಹೆಚ್ ಪಿ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಿಕೊಳ್ಳಲು 1.98 ಲಕ್ಷ ರೂಪಾಯಿ ಬೇಕು. ಇದಕ್ಕೆ ಶೇಕಡ 50ರಂತೆ, 0.99 ಲಕ್ಷಕ್ಕೆ ಸಹಾಯಧನ ಸಿಗಲಿದೆ. ಅದೇ ರೀತಿ ಐದು ಹೆಚ್ ಪಿ ಪಂಪ್ಸೆಟ್ ಗಳನ್ನು ಅಳವಡಿಸಿಕೊಳ್ಳಲು 3 ಲಕ್ಷ ರೂಪಾಯಿ ಬೇಕು. ಇದಕ್ಕೆ ಶೇಕಡ 50 ಪರ್ಸೆಂಟ್ ಅಂದರೆ 1.50 ಲಕ್ಷ ರೂಪಾಯಿಗಳಿಗೆ ಸಹಾಯಧನ ಸರ್ಕಾರದಿಂದ ಸಿಗುತ್ತದೆ.
ಅಪ್ಪು ಅಜರಾಮರ! ಪುನೀತ್ ರಾಜಕುಮಾರ್ ಹೆಸರಿನಲ್ಲಿ ರಾಜ್ಯಾದ್ಯಂತ ಮತ್ತೊಂದು ಯೋಜನೆ
ಪಂಪ್ಸೆಟ್ ಸಬ್ಸಿಡಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!
ಜಮೀನಿನ ಪಹಣಿ ಪತ್ರ, ಆಧಾರ್ ಕಾರ್ಡ್, ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ, 20 ರೂಪಾಯಿಗಳ ಬಾಂಡ್ ಪೇಪರ್, ಎಫ್ ಐ ಡಿ ಸಂಖ್ಯೆ ಹಾಗೂ ಅರ್ಜಿದಾರರ ಭಾವಚಿತ್ರ ಬೇಕಾಗುತ್ತದೆ.
ಬಂಪರ್ ಆಫರ್; ಜಮೀನು ಖರೀದಿಸುವುದಕ್ಕೆ ಸರ್ಕಾರವೇ ಕೊಡುತ್ತೆ 25 ಲಕ್ಷ ಸಹಾಯಧನ
ಅರ್ಜಿ ಸಲ್ಲಿಸುವುದು ಹೇಗೆ?
ಸೋಲಾರ್ ಪಂಪ್ಸೆಟ್ (Solar Water Pump Set) ಸಹಾಯಧನ ಪಡೆದುಕೊಳ್ಳಲು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯಲ್ಲಿ ಅಗತ್ಯ ಇರುವ ದಾಖಲೆಗಳನ್ನು ಸಲ್ಲಿಸಿ ಅಲ್ಲಿ ಕೊಡುವ ಅರ್ಜಿ ಫಾರಂ ಭರ್ತಿ ಮಾಡಬೇಕು. ಫಲಾನುಭವಿಗಳ ಅರ್ಜಿ ಪರಿಶೀಲನೆ ನಡೆಸಿ ಸಹಾಯಧನ ನೀಡಲಾಗುತ್ತದೆ.
ಯೋಜನೆಯ ಪ್ರಯೋಜನ ಯಾರು ಪಡೆದುಕೊಳ್ಳಬಹುದು?
ಸೋಲಾರ್ ಪಂಪ್ ಸೆಟ್ ಸಹಾಯಧನವನ್ನು ಸಾಮಾನ್ಯವಾಗಿ ರೈತರು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ (SC/ ST) ಪಂಗಡದವರಿಗೆ ನೀಡಲಾಗುವುದು.
New Scheme for State Farmers, 1.5 lakh subsidy for solar pump set