Karnataka NewsBangalore News

ಅಪ್ಪು ಅಜರಾಮರ! ಪುನೀತ್ ರಾಜಕುಮಾರ್ ಹೆಸರಿನಲ್ಲಿ ರಾಜ್ಯಾದ್ಯಂತ ಮತ್ತೊಂದು ಯೋಜನೆ

ಕರ್ನಾಟಕ ರಾಜ್ಯ ಸರ್ಕಾರ (State government) ಈಗಾಗಲೇ ಸಾಕಷ್ಟು ಯೋಜನೆಗಳ ಮೂಲಕ ಜನರ ಮನ ಗೆದ್ದಿದೆ, ಈಗ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ನೆಲೆಯಾಗಿರುವ ಡಾಕ್ಟರ್ ಪುನೀತ್ ರಾಜಕುಮಾರ್ (Dr Puneet Rajkumar) ಅವರ ಹೆಸರಿನಲ್ಲಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ, ಜೊತೆಗೆ ಈ ಮೂಲಕ ಪುನೀತ್ ರಾಜಕುಮಾರ್ ಅವರ ಹೆಸರು ಅಜರಾಮರವಾಗಲಿದೆ.

ಹೆಚ್ಚುತ್ತಿದೆ ಹೃದ್ರೋಗ ಸಮಸ್ಯೆ (Heart attack)

ನಮಗೆಲ್ಲ ತಿಳಿದಿರುವ ಹಾಗೆ ನಮ್ಮ ನೆಚ್ಚಿನ ಡಾ. ಪುನೀತ್ ರಾಜಕುಮಾರ್ ಅವರು ತೀರಿಕೊಂಡಿದ್ದು ಕೂಡ ಹೃದಯಾಘಾತ ಸಮಸ್ಯೆಯಿಂದ, ಇತ್ತೀಚಿನ ದಿನಗಳಲ್ಲಿ ಯಾವುದೇ ವಯಸ್ಸಿನ ಭೇದವು ಇಲ್ಲದೆ, ಯಾವುದೇ ಲಿಂಗಬೇದವು ಇಲ್ಲದೆ ಹೃದಯಘಾತ (heart attack) ಎನ್ನುವುದು ಪ್ರತಿಯೊಬ್ಬರನ್ನ ಕಾಡುತ್ತಿದೆ.

Another statewide scheme in the name of Puneeth Rajkumar

ಅದೆಷ್ಟೋ ಯುವಕರೇ ಹೃದಯಘಾತದ ಸಮಸ್ಯೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ರೀತಿ ಜೀವ ಹಾನಿ ರಾಜ್ಯದಲ್ಲಿ ಮತ್ತೆ ಮುಂದುವರಿಯಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ನಮ್ಮ ಅಪ್ಪು ಹೆಸರಿನಲ್ಲಿ ಹೃದಯ ಜ್ಯೋತಿ (Hrudaya Jyothi scheme) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ.

ಬಂಪರ್ ಆಫರ್; ಜಮೀನು ಖರೀದಿಸುವುದಕ್ಕೆ ಸರ್ಕಾರವೇ ಕೊಡುತ್ತೆ 25 ಲಕ್ಷ ಸಹಾಯಧನ

ಹೃದಯ ಜ್ಯೋತಿ ಯೋಜನೆಯ ಪ್ರಯೋಜನ

Appu Hrudaya Jyothi Health scheme for APL and BPL Ration Card Holdersಹೃದಯ ಸಂಬಂಧಿ ಕಾಯಿಲೆ ಇರುವವರು ಅಥವಾ ಆಕಸ್ಮಾತ್ ಹೃದಯಘಾತವಾದರೆ ಅಂತವರಿಗೆ ಚಿಕಿತ್ಸೆ (treatment) ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಬ್ ಅಂಡ್ ಸ್ಪೋಕ್ ಮಾದರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಎಡಿಎಸ್ ಸಾಧನಗಳನ್ನ ಇಟ್ಟು ಹಠಾತ್ ಹೃದಯಾಘಾತ ಆದವರಿಗೆ ತಕ್ಷಣ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಸುಮಾರು 85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನ ಸ್ಪೋಕ್ ಕೇಂದ್ರಗಳನ್ನಾಗಿ ರೂಪಿಸಲು ಸರ್ಕಾರ ಮುಂದಾಗಿದೆ.

ಈ ಯೋಜನೆಯ ಅಡಿಯಲ್ಲಿ ಯಾವುದೇ ವ್ಯಕ್ತಿ ಹಠಾತ್ ಎದೆ ನೋವಿನಿಂದ ಕುಸಿದು ಬಿದ್ರೆ ಅಥವಾ ಆತನಲ್ಲಿ ಎದೆ ನೋವು ಕಾಣಿಸಿಕೊಂಡರೆ ಹತ್ತಿರದಲ್ಲಿರುವ ಸ್ಪೋಕ್ ಕೇಂದ್ರಗಳಿಗೆ ಅವರನ್ನು ಕರೆದುಕೊಂಡು ಹೋಗಿ ಉಚಿತವಾಗಿ ಇಸಿಜಿ ಮಾಡಿಸಿ ಅವರ ಚಿಕಿತ್ಸೆ ನೋಡಿಕೊಳ್ಳುವಂತೆ ಹೃದಯ ಜ್ಯೋತಿ ಯೋಜನೆ ಸಹಾಯಕಾರಿ ಆಗಲಿದೆ.

ಎಲ್ಲರ ಖಾತೆಗೂ ಹಂತ ಹಂತವಾಗಿ ಗೃಹಲಕ್ಷ್ಮಿ ಹಣ ಜಮಾ ಆಗುತ್ತೆ ಚಿಂತೆ ಬೇಡ; ಸರ್ಕಾರ ಸ್ಪಷ್ಟನೆ

ಯಾರಿಗೆ ಸಿಗಲಿದೆ ಪ್ರಯೋಜನ

ರಾಜ್ಯದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ (BPL Ration card) ಹೊಂದಿರುವವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ನವೆಂಬರ್ ತಿಂಗಳಿನಿಂದ ಅಂದರೆ ಈ ತಿಂಗಳಿನಿಂದಲೇ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುತಿದ್ದೇವೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಆರಂಭಿಸಲಾಗುತ್ತಿರುವ ಹೃದಯ ಜ್ಯೋತಿ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ಯಾವುದೇ ವ್ಯಕ್ತಿ ಹಠಾತ್ ಹೃದಯಾಘಾತ ಅನುಭವಿಸಿದರೆ ತಕ್ಷಣವೇ ಚಿಕಿತ್ಸೆ ನೀಡಲಾಗುವುದು.

ಕಡಿಮೆ ಕೃಷಿ ಜಮೀನು ಇರೋ ರೈತರಿಗೆ ಉಚಿತ ಬೋರ್‌ವೆಲ್, ಪಂಪ್ ಸೆಟ್ ಸೌಲಭ್ಯ! ಅರ್ಜಿ ಸಲ್ಲಿಸಿ

Another statewide scheme in the name of Puneeth Rajkumar

Our Whatsapp Channel is Live Now 👇

Whatsapp Channel

Related Stories