Karnataka NewsBangalore News

ಕಡಿಮೆ ಕೃಷಿ ಜಮೀನು ಇರೋ ರೈತರಿಗೆ ಉಚಿತ ಬೋರ್‌ವೆಲ್, ಪಂಪ್ ಸೆಟ್ ಸೌಲಭ್ಯ! ಅರ್ಜಿ ಸಲ್ಲಿಸಿ

ನಮ್ಮ ದೇಶದ ಬೆನ್ನೆಲುಬು ಎನಿಸಿಕೊಂಡಿರುವ ಅನ್ನದಾತ ರೈತರ (farmer) ಬೆಳೆಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ (Central government) ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ರೈತರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದು ರಾಜ್ಯದಲ್ಲಿ ಬರಪೀಡಿತ ಪ್ರದೇಶದ ರೈತರಿಗೂ ಕೂಡ ಅನುಕೂಲವಾಗುವ ಕೆಲವು ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ.

Rs 4.25 lakh subsidy for drilling borewell in your agricultural land

ಈಗಾಗಲೇ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ನೀಡಲಾಗುತ್ತಿತ್ತು, ಆದರೆ ಬರಪೀಡಿತ ಪ್ರದೇಶಗಳಲ್ಲಿ ಮಾತ್ರ ಹಣದ ಬದಲು ಅಕ್ಕಿಯನ್ನು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಅದೇ ರೀತಿ ರಾಜ್ಯದಲ್ಲಿ ಇರುವ ರೈತರ ಅಭಿವೃದ್ಧಿಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಗಂಗಾ ಕಲ್ಯಾಣ ಯೋಜನೆಯನ್ನು ಸರ್ಕಾರ ಪರಿಚಯಿಸಿದೆ.

ಸ್ವಂತ ವಾಹನ ಖರೀದಿಗೆ ಸಿಗುತ್ತೆ 4 ಲಕ್ಷ ಸಬ್ಸಿಡಿ ಹಣ! ಸರ್ಕಾರಿ ಯೋಜನೆಗೆ ಅಪ್ಲೈ ಮಾಡಿ

ಗಂಗಾ ಕಲ್ಯಾಣ ಯೋಜನೆ (Ganga Kalyana Yojana)

ರಾಜ್ಯದಲ್ಲಿ ವಾಸಿಸುವ ಬಡ ರೈತರಿಗೆ ಅನುಕೂಲವಾಗಲು ಗಂಗಾ ಕಲ್ಯಾಣ ಯೋಜನೆಯನ್ನು (Ganga Kalyana Yojana) ರಾಜ್ಯ ಸರ್ಕಾರ ಜಾರಿಗೆ ತಂದಿದೆ, ಈ ಯೋಜನೆಯಡಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೋರ್ವೆಲ್ (Borewell) ತೆಗೆದು ಪಂಪ್ ಸೆಟ್ ಬಳಸಿ ನೀರಾವರಿ ಸೌಲಭ್ಯ ಪಡೆದುಕೊಳ್ಳಲು ಸರ್ಕಾರ ಸಹಾಯಧನ ನೀಡುತ್ತದೆ.

ಯಾರಿಗೆ ಸಿಗಲಿದೆ ಸಹಾಯಧನ!

Karnataka Ganga Kalyana Yojanaಸರ್ಕಾರ ಈಗಾಗಲೇ ರೈತರಿಗಾಗಿ ಹಲವು ಯೋಜನೆ ಪರಿಚಯಿಸಿದ್ದು ಅವುಗಳಲ್ಲಿ ಗಂಗಾ ಕಲ್ಯಾಣ ಯೋಜನೆ ಕೂಡ ಪ್ರಮುಖವಾಗಿದೆ. ಒಂದರಿಂದ ಐದು ಎಕರೆ ಜಮೀನು ಹೊಂದಿರುವ ರೈತರು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬಹುದು.

ಕೊಳವೆಬಾವಿ ಪಂಪ್ ಸೆಟ್ (Borewell, pumpset) ಗಾಗಿ 1.50 ಲಕ್ಷ ರೂಪಾಯಿಗಳನ್ನು ಸರ್ಕಾರ ಸಾಲವಾಗಿ (Subsidy Loan) ನೀಡುತ್ತಿದೆ. ವೈಯಕ್ತಿಕ ಕೊಳವೆ ಬಾವಿ ಗಾಗಿ 2.50 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದ್ದು, 2,00,000ಗಳನ್ನು ಸಹಾಯಧನವಾಗಿ ಹಾಗೂ 50,000ಗಳನ್ನು ನಿಗಮದ ಕಡೆಯಿಂದ ನೀಡಲಾಗುವುದು ಇದಕೆ ಕೇವಲ 4% ನಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.

ಸ್ವಂತ ವ್ಯಾಪಾರ ಮಾಡಿಕೊಳ್ಳೋಕೆ ಸಿಗುತ್ತೆ 1 ಲಕ್ಷ ಹಣ! ಸರ್ಕಾರಿ ಯೋಜನೆಗೆ ಅರ್ಜಿ ಹಾಕಿ

ಇಲ್ಲಿ ಅರ್ಜಿ ಸಲ್ಲಿಸಿ!

ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳ ಮೂಲಕ ರೈತರು ಮಾತ್ರವಲ್ಲದೆ ಸ್ವ ಉದ್ಯೋಗ ಮಾಡಲು ಬಯಸುವವರೆಗೂ ಕೂಡ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಇನ್ನು ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಪಂಪ್ಸೆಟ್ ಪಡೆದು ಅದರ ಮೂಲಕ ನೀರಾವರಿ ಸೌಲಭ್ಯ ಪಡೆದುಕೊಳ್ಳಲು ಬಯಸುವವರು ತಮ್ಮ ಅರ್ಜಿಯನ್ನು, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ನಾಗರೀಕ ಸೇವಾ ಕೇಂದ್ರಗಳಲ್ಲಿ ಸಲ್ಲಿಸಬಹುದು.

ಅರ್ಜಿ ಹಾಕುವವರು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ ಒಂದು ಕುಟುಂಬದ ಒಬ್ಬ ಸದಸ್ಯ ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಹಾಗಾಗಿ ಯಾವ ರೈತರಿಗೆ ಪಂಪ್ಸೆಟ್ ನೀರಾವರಿ ಅಗತ್ಯ ಇದೆಯೋ ಅಂತವರು ಕೂಡಲೇ ಅರ್ಜಿ ಸಲ್ಲಿಸಿ.

Free bore well, pump set facility for farmers to Agriculture

Our Whatsapp Channel is Live Now 👇

Whatsapp Channel

Related Stories