ಸ್ವಂತ ವಾಹನ ಖರೀದಿಗೆ ಸಿಗುತ್ತೆ 4 ಲಕ್ಷ ಸಬ್ಸಿಡಿ ಹಣ! ಸರ್ಕಾರಿ ಯೋಜನೆಗೆ ಅಪ್ಲೈ ಮಾಡಿ

ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದರಲ್ಲಿ ಯುವಕರು ವಾಹನ ಖರೀದಿ (Vehicle Loan) ಮಾಡಿದರೆ ವಾಹನ ಬೆಲೆಯ 75% ಅಥವಾ ನಾಲ್ಕು ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ (subsidy Loan) ಪಡೆದುಕೊಳ್ಳಬಹುದು.

ಸರ್ಕಾರದ ಹಲವು ಯೋಜನೆಗಳು ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶ, ಹಾಗಾಗಿ ಯೋಜನೆಗಳನ್ನು (government schemes) ಜಾರಿಗೆ ತಂದ ನಂತರ ಅದನ್ನು ಸರಿಯಾದ ಸಮಯಕ್ಕೆ ಸರಿಯಾದವರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ.

ನಮ್ಮ ದೇಶದಲ್ಲಿ ನಿರುದ್ಯೋಗಿಗಳ (unemployed) ಸಂಖ್ಯೆ ಏನು ಕಡಿಮೆ ಇಲ್ಲ, ಆದರೆ ಅಂಥವರಲ್ಲಿ ಕೆಲವರು ತಮ್ಮದೇ ಆಗಿರುವ ಉದ್ಯೋಗ ಮಾಡಬೇಕು ಎಂದು ಬಯಸುತ್ತಾರೆ. ಅಂತವರಿಗಾಗಿ ರಾಜ್ಯ ಸರ್ಕಾರ ಒಂದು ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ.

ರೇಷನ್ ಕಾರ್ಡ್ ಇದ್ದವರಿಗೆ ಮತ್ತೊಂದು ಕಹಿ ಸುದ್ದಿ; ಕಾರ್ಡ್ ಇದ್ರೂ ಸಿಗೋದಿಲ್ಲವಂತೆ ರೇಷನ್

ಸ್ವಂತ ವಾಹನ ಖರೀದಿಗೆ ಸಿಗುತ್ತೆ 4 ಲಕ್ಷ ಸಬ್ಸಿಡಿ ಹಣ! ಸರ್ಕಾರಿ ಯೋಜನೆಗೆ ಅಪ್ಲೈ ಮಾಡಿ - Kannada News

ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Yojana)

ರಾಜ್ಯದಲ್ಲಿ ಕೆಲವು ಪ್ರಮುಖ ನಿಗಮಗಳು ತಮ್ಮ ಸಮುದಾಯದ ಅಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತೇವೆ, ಸಹಯೋಗದೊಂದಿಗೆ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದರಲ್ಲಿ ಯುವಕರು ವಾಹನ ಖರೀದಿ (Vehicle Loan) ಮಾಡಿದರೆ ವಾಹನ ಬೆಲೆಯ 75% ಅಥವಾ ನಾಲ್ಕು ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ (subsidy Loan) ಪಡೆದುಕೊಳ್ಳಬಹುದು.

ಯಾರು ಅರ್ಜಿ ಸಲ್ಲಿಸಬಹುದು?

2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (SC -ST) ಜನರ ಅಭಿವೃದ್ಧಿಗಾಗಿ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಮೂಲಕ, ಯುವಕರು ತಮ್ಮ ಸ್ವಂತ ಟ್ಯಾಕ್ಸಿ (taxi) ಖರೀದಿ ಮಾಡಿ ಆ ಮೂಲಕ ಹಣ ಸಂಪಾದನೆ ಮಾಡಬಹುದು.

ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಸರ್ಕಾರದಿಂದ ಪರಿಹಾರ; ಇನ್ಮುಂದೆ ಹಣ ಬಂದೇ ಬರುತ್ತೆ

ಕೆಳಗಿನ ನಿಗಮದ ಅಡಿಯಲ್ಲಿ ಬರುವ ಸಮುದಾಯದವರು ಅರ್ಜಿ ಸಲ್ಲಿಸಬಹುದು!

Loanಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ.

18 ರಿಂದ 55 ವರ್ಷ ವಯಸ್ಸಿನವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅವಕಾಶ. ಸರಕು ವಾಹನ ಅಥವಾ ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಗೆ ಶೇಕಡಾ 75ರಷ್ಟು ವಾಹನದ ಖರೀದಿಯ ಹಣ ಅಥವಾ ಗರಿಷ್ಠ ನಾಲ್ಕು ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ (Subsidy Loan) ನೀಡಲಾಗುವುದು.

ಕೃಷಿ ಭೂಮಿಯಲ್ಲಿ ಮನೆ ಅಥವಾ ಯಾವುದೇ ಕಟ್ಟಡ ಕಟ್ಟೋರಿಗೆ ಹೊಸ ನಿಯಮ! ಏನು ಗೊತ್ತಾ?

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ, ಬ್ಯಾಂಕು ಖಾತೆಯ ವಿವರ, ವಾಹನ ಖರೀದಿಯ ಅಂದಾಜು ಪಟ್ಟಿ ಮೊದಲಾದ ದಾಖಲೆಗಳನ್ನು ಕೊಡಬೇಕು.

ಅರ್ಜಿ ಸಲ್ಲಿಸುವುದು ಹೇಗೆ!

ಯೋಜನೆಯಡಿಯಲ್ಲಿ ಲಾಭ ಪಡೆದುಕೊಳ್ಳಲು ಆನ್ಲೈನ್ (online application) ಮೂಲಕವೇ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್ಸೈಟ್ (seva Sindhu website) ಮೂಲಕ ಅರ್ಜಿ ಹಾಕಬಹುದಾಗಿದೆ.

ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 29, 2023

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ; https://sevasindhu.karnataka.gov.in/Sevasindhu/Kannada?ReturnUrl=%2F

You will get 4 lakh subsidy for buying own vehicle, Apply for a government scheme

Follow us On

FaceBook Google News

You will get 4 lakh subsidy for buying own vehicle, Apply for a government scheme