ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಸರ್ಕಾರದಿಂದ ಪರಿಹಾರ; ಇನ್ಮುಂದೆ ಹಣ ಬಂದೇ ಬರುತ್ತೆ
ಬ್ಯಾಂಕ್ ಆಧಾರ್ ಸೀಡಿಂಗ್ (Aadhaar seeding) ನಿಂದ ಹಿಡಿದು ಬ್ಯಾಂಕ್ ಖಾತೆ ಆಕ್ಟಿವ್ (bank account) ಆಗಿರುವ ವರೆಗೆ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ತಿದ್ದುಪಡಿ (ration card correction) ಕೂಡ ಕಡ್ಡಾಯವಾಗಿದೆ.
ಕಳೆದ ಮೂರು ತಿಂಗಳಿನಿಂದ ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಉಳಿದ ಎಲ್ಲಾ ಗ್ಯಾರೆಂಟಿ ಯೋಜನೆಗಳಿಗಿಂತಲೂ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಜನ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ.
2 ಸಾವಿರ ರೂಪಾಯಿಗಳನ್ನು ಮನೆಯ ಯಜಮಾನಿಯ ಖಾತೆಗೆ (Bank Account) ಉಚಿತವಾಗಿ ಹಾಕಲಾಗುತ್ತದೆ. ಆದರೆ ಈ ಯೋಜನೆಯ ಪ್ರಯೋಜನ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರಿಗೂ ಸಿಕ್ಕಿಲ್ಲ.
ಗೃಹಲಕ್ಷ್ಮಿ ಯೋಜನೆಯ ಉಚಿತ ಹಣವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಸಾಕಷ್ಟು ಜನ ಅರ್ಜಿ (application) ಸಲ್ಲಿಸಿದ್ದಾರೆ, ಅಂತದ್ರಲ್ಲಿ ಅರ್ಜಿ ಸಲ್ಲಿಕೆ ಆಗಿರುವ ಮಹಿಳೆಯರಲ್ಲಿ 70% ನಷ್ಟು ಮಹಿಳೆಯರಿಗೆ ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆ ಆಗಿದೆ. ಅದೇ ರೀತಿ ಎರಡನೇ ಕಂತಿನ ಹಣ ಅಂದರೆ ಸೆಪ್ಟೆಂಬರ್ ತಿಂಗಳಿನ ಹಣವು ಕೂಡ ಈಗಾಗಲೇ ಫಲಾನುಭವಿ ಮಹಿಳೆಯರ ಖಾತೆಗೆ ಬಂದು ತಲುಪಿದೆ.
ಬಿಪಿಎಲ್ ರೇಷನ್ ಕಾರ್ಡ್ ಇದ್ದೋರು 30 ದಿನದೊಳಗೆ ಈ ಕೆಲಸ ಮಾಡಿಕೊಳ್ಳಿ, ಇಲ್ಲವಾದರೆ ಕಾರ್ಡ್ ರದ್ದು
ಎಲ್ಲರ ಖಾತೆಗೂ ಬಂದಿಲ್ಲ ಹಣ ಯಾಕೆ?
ಇನ್ನು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮಹಿಳೆಯರು ಮುಗಿಬಿದ್ದು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಪ್ರತಿಯೊಬ್ಬರ ಖಾತೆಗೂ ಕೂಡ ಇದುವರೆಗೆ ಹಣ ವರ್ಗಾವಣೆ ಆಗಿಲ್ಲ, ಒಂದಷ್ಟು ಜನರಿಗೆ ಹಣ ಸಿಕ್ಕಿದ್ದರೂ ಕೂಡ ಇನ್ನೂ ಹಲವರಿಗೆ 2000 ಸಿಕ್ಕಿಲ್ಲ.
ಮೊದಲ ಕಂತಿನ ಹಣ (first installment) ಬಾರದೆ ಇರುವಾಗಲು ಮಹಿಳೆಯರು ಆತಂಕಗೊಂಡಿದ್ದರು, ಆಗ ಸರ್ಕಾರ ಎಲ್ಲರ ಖಾತೆಗೂ 4,000ಗಳನ್ನು ಎರಡು ಕಂತಿನ ಹಣ ಸೇರಿ ಜಮಾ ಮಾಡುವುದಾಗಿ ತಿಳಿಸಿತ್ತು.
ಆದರೆ ಇಂತಹ ಯಾವುದೇ ಭರವಸೆ ಕೂಡ ಈಡೇರಲಿಲ್ಲ. ಮಹಿಳೆಯರ ಖಾತೆಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಬ್ಯಾಂಕ್ ಆಧಾರ್ ಸೀಡಿಂಗ್ (Aadhaar seeding) ನಿಂದ ಹಿಡಿದು ಬ್ಯಾಂಕ್ ಖಾತೆ ಆಕ್ಟಿವ್ (bank account) ಆಗಿರುವ ವರೆಗೆ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ತಿದ್ದುಪಡಿ (ration card correction) ಕೂಡ ಕಡ್ಡಾಯವಾಗಿದೆ.
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಈ ಜಿಲ್ಲೆಯವರಿಗೆ ಅವಕಾಶ! ಇಂದೇ ಅಪ್ಲೈ ಮಾಡಿ
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ!
ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರ ಖಾತೆಗೆ ತಲುಪಬೇಕು, ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಬೇಕು ಎನ್ನುವ ಕಾರಣಕ್ಕೆ ಮತ್ತೆ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈಗ ನವೆಂಬರ್ ತಿಂಗಳಿನಲ್ಲಿ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ. ಎಲ್ಲ ಬದಲಾವಣೆಗಳನ್ನು ಮಾಡಿಕೊಂಡಿದ್ದರು ಕೂಡ ಜನರ ಖಾತೆಗೆ ಮಾತ್ರ ಹಣ ತಲುಪಿಲ್ಲ.
ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಖಾತೆಗೆ ಹಣ ಬಂದಿದ್ಯೋ ಇಲ್ವೋ ಚೆಕ್ ಮಾಡುವುದು ಹೇಗೆ?
ಇಲ್ಲಿ ಖಾತೆ ಆರಂಭಿಸಿ ಎಂದ ಸಚಿವೆ!
ಇದೀಗ ಫಲಾನುಭವಿಗಳಿಗೆ ಅನುಕೂಲವಾಗಲು ಪರ್ಯಾಯ ಮಾರ್ಗವನ್ನು ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಸೂಚಿಸಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ, ಇಲ್ಲಿ ಈ ಕೆ ವೈ ಸಿ ಹಾಗೂ ಆಧಾರ್ ಸೀಡಿಂಗ್ ಮಾಡಿಕೊಳ್ಳುವುದು ಜನರಿಗೆ ಕಷ್ಟವಾಗುತ್ತಿದೆ.
ಹಾಗಾಗಿ ಇಂತಹ ಸಮಸ್ಯೆ ಯಾರ ಖಾತೆಯಲ್ಲಿ ಇದೆಯೋ ಅಂತವರು ಕೂಡಲೇ ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆದು ಅದಕ್ಕೆ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದು ಎಂದು ಸಚಿವೆ ತಿಳಿಸಿದ್ದಾರೆ.
ಅದರಿಂದ ನಿಮ್ಮ ಖಾತೆಗೆ ಹಣ ಬಾರದೇ ಇದ್ದರೆ ಕೂಡಲೇ ಪೋಸ್ಟ್ ಆಫೀಸ್ನಲ್ಲಿ (post office) ಖಾತೆ ತೆರೆದು ಅದಕ್ಕೆ ಮಾಡಿಸಿಕೊಂಡರೆ ತಕ್ಷಣವೇ ನಿಮಗೆ ಸರ್ಕಾರದಿಂದ ಸಿಗುವ ಉಚಿತ ಎರಡು ಸಾವಿರ ರೂಪಾಯಿ ಸಿಗುತ್ತದೆ.
Gruha Lakshmi Yojana money will come to those who will Still Not receive