ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಈ ಜಿಲ್ಲೆಯವರಿಗೆ ಅವಕಾಶ! ಇಂದೇ ಅಪ್ಲೈ ಮಾಡಿ
ರಾಜ್ಯ ಸರ್ಕಾರದ ಶಕ್ತಿ ಯೋಜನೆ (Shakti scheme) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ, ಅದುವೆ ಉಚಿತ ಹೋಲಿಕೆ ಯಂತ್ರ ವಿತರಣಾ ಯೋಜನೆ.
ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದ್ದು ರಾಜ್ಯ ಸರ್ಕಾರ ಅದನ್ನು ಮಹಿಳೆಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

ರಾಜ್ಯದ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ, ಇನ್ಮುಂದೆ ಈ ಎಲ್ಲಾ ಸೌಲಭ್ಯಗಳು ಉಚಿತವಾಗಿ ಸಿಗಲಿದೆ
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಈ ದಾಖಲೆಗಳು ಬೇಕು!
ಉಚಿತ ಹೊಲಿಗೆ ಯಂತ್ರಕ್ಕೆ (free swing machine) ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಬಳಿ ಹೊಲಿಗೆ ತರಬೇತಿ ಪ್ರಮಾಣ ಪತ್ರ ಇರಬೇಕು. ಜಾತಿ ಪ್ರಮಾಣ ಪತ್ರ (caste certificate) ಹಾಗೂ ಆದಾಯ ಪ್ರಮಾಣ ಪತ್ರವನ್ನು (income certificate) ಸಲ್ಲಿಕೆ ಮಾಡಬೇಕು.
ಆಧಾರ್ ಕಾರ್ಡ್ (Aadhaar Card) ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ನೀಡಬೇಕು. ಕುಶಲಕರ್ಮಿ ಗುರುತಿನ ಚೀಟಿ ಇದ್ದರೆ ಅದನ್ನು ಸಲ್ಲಿಕೆ ಮಾಡಬೇಕು ಹಾಗೂ ನಿಮ್ಮ ಮೊಬೈಲ್ ನಂಬರ್ ವಿಳಾಸ ಮೊದಲಾದವುಗಳನ್ನು ನೀಡಬೇಕಾಗುತ್ತದೆ.
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು!
ಬಡತನ ರೇಖೆಗಿಂತ ಕೆಳಗಿರುವ ಅಥವಾ ವಾರ್ಷಿಕ ಆದಾಯ 12 ಸಾವಿರ ರೂಪಾಯಿಗಳಿಗಿಂತ ಕೆಳಗಿನವರು ಈ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ಕನಿಷ್ಠ 20 ವರ್ಷ ವಯಸ್ಸಿನ ಯುವತಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಗರಿಷ್ಠ ವಯಸ್ಸು 49. ಟೈಲರಿಂಗ್ ಮಾಡಿದ ಅನುಭವ ಇದ್ದರೆ ಟೈಲರಿಂಗ್ ತರಬೇತಿ (tailoring training) ಪಡೆದುಕೊಂಡಿದ್ದರೆ ಅಂತವರು ಅರ್ಜಿ ಸಲ್ಲಿಸಬಹುದಾಗಿದೆ.
ಸ್ವಂತ ವ್ಯಾಪಾರ ಮಾಡಿಕೊಳ್ಳಲು ಸರ್ಕಾರವೇ ನೀಡುತ್ತೆ ಸಾಲ ಸೌಲಭ್ಯ; ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ
ಯಾವ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ!
ಟೈಲರಿಂಗ್ ನಲ್ಲಿ ಪರಿಣಿತಿ ಹೊಂದಿದ್ದರೆ ಅಥವಾ ಟೈಲರಿಂಗ್ ತರಬೇತಿ (Tailoring training) ಪಡೆದುಕೊಂಡಿದ್ದರೆ ಅಂತಹ ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಹಾಗಾಗಿ ಮಹಿಳೆಯರು ತಮ್ಮದಾಗಿರುವ ಸ್ವಂತ ಉದ್ಯಮ (Own Business) ಆರಂಭಿಸಬೇಕು ಎಂದುಕೊಂಡಿದ್ದರೆ ಸರ್ಕಾರದಿಂದ ಸಿಗುವ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಚಿಕ್ಕಮಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ವಾಸವಾಗಿರುವ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಖಾತೆಗೆ ಹಣ ಬಂದಿದ್ಯೋ ಇಲ್ವೋ ಚೆಕ್ ಮಾಡುವುದು ಹೇಗೆ?
ಗ್ರಾಮೀಣ ಭಾಗದ ಮಹಿಳೆಯರು ಗುಡಿ ಕೈಗಾರಿಕೆ ಅಥವಾ ಇತರ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆದುಕೊಂಡು ತಮ್ಮದೇ ಆಗಿರುವ ಸ್ವಂತ ಉದ್ಯಮವನ್ನು (own business) ಆರಂಭಿಸಿ ಸ್ವಾವಲಂಬನೆಯ ಜೀವನ ನಡೆಸಬೇಕು. ಇದರಿಂದ ತಮ್ಮ ಕುಟುಂಬಕ್ಕೂ ಕೂಡ ಆರ್ಥಿಕ ಸಹಾಯ ಮಾಡಲು ಮಹಿಳೆಯರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಉಚಿತ ಹೊಲಿಗೆ ಯಂತ್ರ ನೀಡುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ.
ಹಾಗಾಗಿ ಯಾರಿಗೆಲ್ಲ ಅಗತ್ಯ ಇದೆಯೋ ಹಾಗೂ ಹೊಲಿಗೆ ಯಲ್ಲಿ ಆಸಕ್ತಿ ಇದೆಯೋ ಅಂತವರು ಸುಲಭವಾಗಿ ಸರ್ಕಾರದಿಂದ ಉಚಿತವಾಗಿ ಸಿಗುವ ಹೊಲಿಗೆ ಯಂತ್ರವನ್ನು ಪಡೆದುಕೊಂಡು ಸ್ವ ಉದ್ಯೋಗ ಆರಂಭಿಸಿ.
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ; National Portal of India – https://www.india.gov.in/
free sewing machine for the people of this district, Apply today