ಬಿಪಿಎಲ್ ರೇಷನ್ ಕಾರ್ಡ್ ಇದ್ದೋರು 30 ದಿನದೊಳಗೆ ಈ ಕೆಲಸ ಮಾಡಿಕೊಳ್ಳಿ, ಇಲ್ಲವಾದರೆ ಕಾರ್ಡ್ ರದ್ದು
ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆಗೆ (Annabhagya Yojana) ರೇಷನ್ ಕಾರ್ಡ್ (Ration Card) ಎನ್ನುವುದು ಕಡ್ಡಾಯ.
ಬಿಪಿಎಲ್ ಕಾರ್ಡ್ (BPL card) ಎಪಿಎಲ್ ಕಾರ್ಡ್ (APL Card) ಅಥವಾ ಅಂತ್ಯೋದಯ ಕಾರ್ಡ್ ಈ ಮೂರರಲ್ಲಿ ಯಾವುದೇ ಒಂದು ರೇಷನ್ ಕಾರ್ಡ್ (Ration Card) ನೀವು ಹೊಂದಿದ್ದರೂ ಕೂಡ ನಿಮಗೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಯೋಜನೆಗಳ ಪ್ರಯೋಜನ ದೊರಕುತ್ತದೆ.
ಸರ್ಕಾರಿ ಹಾಗೂ ಖಾಸಗಿ ಸೆಕ್ಟರ್ ಗಳಲ್ಲಿ ಯಾವುದೇ ಕೆಲಸ ಆಗಬೇಕು ಅಂದ್ರು ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಬಹಳ ಸಹಾಯಕಾರಿಯಾಗಿರುತ್ತದೆ. ರೇಷನ್ ಕಾರ್ಡ್ ಅನ್ನುವುದು ಪಡಿತರ ಪಡೆದುಕೊಳ್ಳಲು ಮಾತ್ರವಲ್ಲದೆ ಒಬ್ಬ ವ್ಯಕ್ತಿ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ.
ಈಗಾಗಲೇ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆಗೆ (Annabhagya Yojana) ರೇಷನ್ ಕಾರ್ಡ್ (Ration Card) ಎನ್ನುವುದು ಕಡ್ಡಾಯ.
ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಈ ಜಿಲ್ಲೆಯವರಿಗೆ ಅವಕಾಶ! ಇಂದೇ ಅಪ್ಲೈ ಮಾಡಿ
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!
ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರಿಗೆ ಸಿಗಬೇಕು ಅಂದ್ರೆ ಅವರ ಹೆಸರಿನಲ್ಲಿ ರೇಷನ್ ಕಾರ್ಡ್ (Ration Card) ಇರಬೇಕು, ಹಾಗಾಗಿ ಸರ್ಕಾರ ಈಗಾಗಲೇ ಮೂರು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ, ಈಗ ಮತ್ತೆ ನವೆಂಬರ್ ತಿಂಗಳಿನಲ್ಲಿಯೂ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಆರಂಭವಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಅಂದ್ರೆ ಅಗತ್ಯ ಇರುವವರು ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರನ್ನ ಪ್ರಧಾನ ಸದಸ್ಯರ ಜಾಗದಲ್ಲಿ ಬದಲಾವಣೆ ಮಾಡಿಸಿಕೊಳ್ಳಬಹುದು. ಅದೇ ರೀತಿ ಹೆಸರು ಬದಲಾವಣೆ, ವಿಳಾಸ ಬದಲಾವಣೆ, ತಪ್ಪಿದ್ದ ಹೆಸರುಗಳನ್ನು ಸರಿಪಡಿಸುವುದು, ಹೊಸ ಸದಸ್ಯರ ಸೇರ್ಪಡೆ ಹೀಗೆ ಕೆಲವು ಬದಲಾವಣೆಗಳನ್ನು ನೀವು ರೇಷನ್ ಕಾರ್ಡ್ ನಲ್ಲಿ ಮಾಡಿಕೊಳ್ಳಬಹುದು. ಜೊತೆಗೆ ಸರ್ಕಾರಕ್ಕೆ ರೇಷನ್ ಕಾರ್ಡ್ ತಿದ್ದುಪಡಿಯ ಸಂದರ್ಭದಲ್ಲಿ ರೇಷನ್ ಕಾರ್ಡ್ ನಲ್ಲಿ ನಡೆಯುತ್ತಿರುವ ಸಾಕಷ್ಟು ವಂಚನೆ ಪ್ರಕರಣಗಳು ಅರಿವಿಗೆ ಬಂದಿದೆ.
ರಾಜ್ಯದ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ, ಇನ್ಮುಂದೆ ಈ ಎಲ್ಲಾ ಸೌಲಭ್ಯಗಳು ಉಚಿತವಾಗಿ ಸಿಗಲಿದೆ
ನಕಲಿ ರೇಷನ್ ಕಾರ್ಡ್ ಗೆ ಸಿದ್ಧತೆ!
ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಸಾಕಷ್ಟು ಜನ ನಕಲಿ ರೇಷನ್ (fake ration card) ಕಾರ್ಡ್ ಕೂಡ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ರೇಷನ್ ಕಾರ್ಡ್ ನಲ್ಲಿ ರಕ್ತ ಸಂಬಂಧಿಗಳು ಅಲ್ಲದೆ ಇರುವ ಅಥವಾ ಕುಟುಂಬದ ಸದಸ್ಯರು ಆಗಿರದೆ ಇರುವ ಸದಸ್ಯರ ಹೆಸರನ್ನು ಕೂಡ ಸೇರಿಸುತ್ತಿದ್ದಾರೆ.
ಹಾಗೂ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರುವ ಸಲುವಾಗಿ ಅಪ್ಪ ಹಾಗೂ ಮಗ ಅಥವಾ ಅತ್ತೆ ಹಾಗೂ ಸೊಸೆ ಬೇರೆ ಬೇರೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಇರುವ ಹೆಸರನ್ನು ಕೂಡ ತೆಗೆದು ಹಾಕುತ್ತಿದ್ದಾರೆ.
ಈ ಎಲ್ಲಾ ತಿದ್ದುಪಡಿಗಳ ಮುಖ್ಯ ಉದ್ದೇಶ ಸರಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು. ಆದರೆ ಇದು ಈಗ ಆಹಾರ ಇಲಾಖೆಯ ಗಮನಕ್ಕೆ ಬಂದಿದ್ದು ಇಂತಹ ಯಾವುದೇ ವಂಚನೆ ಪ್ರಕರಣ ದಾಖಲಾಗಿದ್ದಲ್ಲೂ ಅಂತವರ ರೇಷನ್ ಕಾರ್ಡ್ ಅನ್ನು ಯಾವುದೇ ನೋಟಿಸ್ ಕೂಡ ಜಾರಿಗೊಳಿಸದೆ ರದ್ದುಪಡಿಸಲು ಮುಂದಾಗಿದೆ.
ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಖಾತೆಗೆ ಹಣ ಬಂದಿದ್ಯೋ ಇಲ್ವೋ ಚೆಕ್ ಮಾಡುವುದು ಹೇಗೆ?
ಡಿಸೆಂಬರ್ 30ರ ಒಳಗೆ ಈ ಕೆಲಸ ಕಡ್ಡಾಯ!
ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನ ತಿಳಿದುಕೊಳ್ಳಲು ನಿಮ್ಮ ರೇಷನ್ ಕಾರ್ಡ್, ಸರ್ಕಾರದ ಡೇಟಾಬೇಸ್‌ನಲ್ಲಿ ಅಪ್ಡೇಟ್ ಆಗಿರಬೇಕು. ಇದಕ್ಕಾಗಿ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್, EKYC ಮಾಡಿಸಿಕೊಳ್ಳುವುದು ಕಡ್ಡಾಯ.
ಇದನ್ನ ನ್ಯಾಯಬೆಲೆ ಅಂಗಡಿಯಲ್ಲಿ ಮಾಡಿಕೊಳ್ಳಬಹುದು. ಅಂದ್ರೆ ರೇಷನ್ ಕಾರ್ಡ್ ಸಂಪೂರ್ಣ ಬಯೋಮೆಟ್ರಿಕ್ (biometric) ಆಧಾರಿತವಾಗಿದ್ದು ನಿಮ್ಮ ಬೆರಳಚ್ಚು ಇಲ್ಲದೆ ರೇಷನ್ ಪಡೆದುಕೊಳ್ಳಲು ಸಾಧ್ಯವಿಲ್ಲ.
ಇನ್ನು ಕೆವೈಸಿ ಮಾಡಿಸಿಕೊಳ್ಳಲು ಸರಕಾರ ಸಪ್ಟೆಂಬರ್ 30ರ ವರೆಗೆ ಅವಕಾಶ ನೀಡಿತ್ತು, ಆದರೆ ಸಾಕಷ್ಟು ಕಡೆ ಬಯೋಮೆಟ್ರಿಕ್ ಸರಿಯಾಗಿ ಕೆಲಸ ಮಾಡದೆ ಇರುವ ಸಲುವಾಗಿ ಎಲ್ಲರ ಕೆವೈಸಿ ಆಗಿಲ್ಲ.
ಇದಕ್ಕಾಗಿ ಸರ್ಕಾರ ಡಿಸೆಂಬರ್ 30ರ ವರೆಗೆ ಮತ್ತೆ ಅವಕಾಶ ಮಾಡಿಕೊಟ್ಟಿದೆ, ಅಂದ್ರೆ ಈ ವರ್ಷದ ಕೊನೆಯ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಗೆ ಕೆವೈಸಿ ಮಾಡಿಸಿಕೊಳ್ಳದೆ ಇದ್ದಲ್ಲಿ ನಿಮಗೆ ಸಿಗುವ ಸರ್ಕಾರದ ಎಲ್ಲಾ ಯೋಜನೆಗಳಿಂದ ವಂಚಿತರಾಗುತ್ತಿರಿ, ಜೊತೆಗೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುವ ಸಾಧ್ಯತೆ ಇದೆ.
If you have a BPL ration card, do this within 30 days, otherwise the card will be cancelled