ಕೃಷಿ ಭೂಮಿಯಲ್ಲಿ ಮನೆ ಅಥವಾ ಯಾವುದೇ ಕಟ್ಟಡ ಕಟ್ಟೋರಿಗೆ ಹೊಸ ನಿಯಮ! ಏನು ಗೊತ್ತಾ?
agricultural land : ಇತ್ತೀಚಿನ ದಿನಗಳಲ್ಲಿ ಜಮೀನು ಖರೀದಿ (property purchase) ಅಥವಾ ಇರುವ ಜಮೀನನ್ನು ಪರಿವರ್ತಿಸಿ ಆ ಜಮೀನಿನಲ್ಲಿ ಕಟ್ಟಡ ನಿರ್ಮಾಣ (building construction) ಮಾಡುವ ವಿಷಯದ ಬಗ್ಗೆ ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.
ಭೂಕಬಳಿಕೆ ಹಾಗೂ ಭೂ ಪರಿವರ್ತನೆ ಬಗ್ಗೆ ರಾಜ್ಯ ಪ್ರಾಧಿಕಾರದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಹೈಕೋರ್ಟ್(High court) ಒಂದು ಕೇಸ್ ವಿಚಾರವಾಗಿ ಮಹತ್ವದ ತೀರ್ಪನ್ನು ನೀಡಿದೆ.
ಹೈಕೋರ್ಟ್ ನ ಈ ತೀರ್ಪು (court judgement) ನಿಮಗೂ ಕೂಡ ಅನ್ವಯ ಆಗಬಹುದು, ಹಾಗಾಗಿ ನೀವು ಜಮೀನು ಹೊಂದಿದ್ದು ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲು ಹೊರಟಿದ್ದರೆ ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ.
ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಸರ್ಕಾರದಿಂದ ಪರಿಹಾರ; ಇನ್ಮುಂದೆ ಹಣ ಬಂದೇ ಬರುತ್ತೆ
ಮಾಸ್ಟರ್ ಪ್ಲಾನ್ (master plan) ವ್ಯಾಪ್ತಿಗೆ ಒಳಪಡುವಂತಹ ಭೂಮಿಯನ್ನ ಪರಿವರ್ತಿಸುವ ವಿಚಾರವಾಗಿ ಹೈಕೋರ್ಟ್ ಗೆ ಹೋಗಿರುವ ಕೇಸ್ ಒಂದಕ್ಕೆ ಈಗ ತೀರ್ಪನ್ನು ನೀಡಲಾಗಿದೆ.
ಈ ಕೇಸನ ಹಿನ್ನೆಲೆ ನೋಡುವುದಾದರೆ ಲೇಔಟ್ ಪ್ಲಾನಿಂಗ್ (layout planning) ಬಗ್ಗೆ ಅಪ್ರುವಲ್ ಸಿಗದೇ ಇದ್ದ ಕಾರಣಕ್ಕೆ ಕರ್ನಾಟಕ ರಾಜ್ಯ ಮಂಡವ್ಯ ಗೃಹ ನಿರ್ಮಾಣ ಸಹಕಾರ ಸಂಘ ಮಂಡ್ಯ (Mandya) ಅಭಿವೃದ್ಧಿ ಯೋಜನಾಧಿಕಾರದ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಇದೀಗ ಹೈಕೋರ್ಟ್ ಯೋಜನಾ ಪ್ರಾಧಿಕಾರವನ್ನು ಪ್ರಶ್ನಿಸಿದ್ದು ಕೃಷಿಯೇತರ ಭೂಮಿಯನ್ನಾಗಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡುವುದಿದ್ದರೆ ಭೂ ಕಂದಾಯ ಕಾಯ್ದೆ 1965 ಸೆಕ್ಷನ್ 95ರ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು. ಜೊತೆಗೆ ಸೆಕ್ಷನ್ 14 ಎ ಅಡಿಯಲ್ಲಿ ಕೆ ಟಿ ಸಿ ಪಿ ಕಾಯ್ದೆಯ ನಿಯಮಗಳನ್ನು ಕೂಡ ಪಾಲಿಸಬೇಕು ಎಂದು ತೀರ್ಮಾನ ನೀಡಿದೆ.
ಸಾಮಾನ್ಯವಾಗಿ ಕೃಷಿ ಭೂಮಿಯನ್ನು ಲೇಔಟ್ ಅಥವಾ ಮನೆ ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ನೀಡಲಾಗುವುದಿಲ್ಲ, ಒಂದು ವೇಳೆ ಹಾಗೆ ನಿರ್ಮಾಣ ಮಾಡುವುದಾದರೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಿಕೊಳ್ಳಬೇಕು.
ಬಿಪಿಎಲ್ ರೇಷನ್ ಕಾರ್ಡ್ ಇದ್ದೋರು 30 ದಿನದೊಳಗೆ ಈ ಕೆಲಸ ಮಾಡಿಕೊಳ್ಳಿ, ಇಲ್ಲವಾದರೆ ಕಾರ್ಡ್ ರದ್ದು
ಇದಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ ಅನುಮತಿ ಪಡೆದುಕೊಳ್ಳಬೇಕು, ನಂತರ ಸೆಕ್ಷನ್ 14ರ ಅಡಿಯಲ್ಲಿ ಭೂಕಬಳಿಕೆಯ ಬಗ್ಗೆ ಪ್ರಾಧಿಕಾರದ ಅನುಮತಿ ಕೂಡ ಪಡೆದುಕೊಳ್ಳುವುದು ಕಡ್ಡಾಯ. ಈ ಹಿಂದೆ ಕೃಷಿಭೂಮಿಯನ್ನು ಪರಿವರ್ತಿಸಿ ಕೃಷಿಯೇತರ ಭೂಮಿಯಾಗಿ ಬಳಸಿಕೊಂಡಿದ್ದು ಅದಕ್ಕೆ ಅನುಮತಿ ತೆಗೆದುಕೊಳ್ಳದೆ ಇದ್ದಲ್ಲಿ ಈಗಲಾದರೂ ಆ ಕೆಲಸ ಮಾಡಬೇಕು
ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದುಕೊಂಡು ಕೃಷಿ ಭೂಮಿಯನ್ನು ಪರಿವರ್ತಿಸಿಕೊಳ್ಳಬೇಕು ಎಂದು ಹೈಕೋರ್ಟ್ ತೀರ್ಮಾನ ನೀಡಿದೆ.
New rule for construction of house or any building on agricultural land