ರೇಷನ್ ಕಾರ್ಡ್ ಇದ್ದವರಿಗೆ ಮತ್ತೊಂದು ಕಹಿ ಸುದ್ದಿ; ಕಾರ್ಡ್ ಇದ್ರೂ ಸಿಗೋದಿಲ್ಲವಂತೆ ರೇಷನ್

ರೇಷನ್ ಕಾರ್ಡ್ ತಿದ್ದುಪಡಿಗೂ (ration card correction) ಕೂಡ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರಿಂದ, ಲಕ್ಷಾಂತರ ಜನ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿದ್ದಾರೆ, ಮಾಡಿಸಿಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರ (State government) ಜಾರಿಗೆ ತಂದಿರುವ ಎಲ್ಲಾ ಯೋಜನೆಗಳಿಗೂ ರೇಷನ್ ಕಾರ್ಡ್ (ration card) ಬೇಕೇ ಬೇಕು ಎನ್ನುವುದು ನಿಮಗೆ ಗೊತ್ತಿದೆ, ಅದು ಅಲ್ಲದೆ ರೇಷನ್ ಕಾರ್ಡ್ ತಿದ್ದುಪಡಿಗೂ (ration card correction) ಕೂಡ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರಿಂದ, ಲಕ್ಷಾಂತರ ಜನ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿದ್ದಾರೆ, ಮಾಡಿಸಿಕೊಳ್ಳುತ್ತಿದ್ದಾರೆ.

ರೇಷನ್ ಕಾರ್ಡ್ ತಿದ್ದುಪಡಿಗೆ ನವೆಂಬರ್ ತಿಂಗಳಲ್ಲಿಯೂ ಕೂಡ ಸರ್ಕಾರ ಅವಕಾಶ ಮಾಡಿಕೊಟ್ಟಿದೆ, ಇದಕ್ಕೆ ಮುಖ್ಯವಾದ ಕಾರಣ ಈ ಹಿಂದೆ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಾಗ ಸರ್ವರ್ ಸಮಸ್ಯೆ, ಬಯೋಮೆಟ್ರಿಕ್ (biometric) ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.

ಹಾಗಾಗಿ ಸಾಕಷ್ಟು ಜನರ ರೇಷನ್ ಕಾರ್ಡ್ ತಿದ್ದುಪಡಿ ಸರಿಯಾಗಿ ಆಗಿಲ್ಲ ಈ ಕಾರಣಕ್ಕಾಗಿ ಸರ್ಕಾರ ಮತ್ತೆ ಅವಕಾಶ ನೀಡಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

ರೇಷನ್ ಕಾರ್ಡ್ ಇದ್ದವರಿಗೆ ಮತ್ತೊಂದು ಕಹಿ ಸುದ್ದಿ; ಕಾರ್ಡ್ ಇದ್ರೂ ಸಿಗೋದಿಲ್ಲವಂತೆ ರೇಷನ್ - Kannada News

ಕೃಷಿ ಭೂಮಿಯಲ್ಲಿ ಮನೆ ಅಥವಾ ಯಾವುದೇ ಕಟ್ಟಡ ಕಟ್ಟೋರಿಗೆ ಹೊಸ ನಿಯಮ! ಏನು ಗೊತ್ತಾ?

ಪಡಿತರ ವಸ್ತು ವಿತರಕರ ಪ್ರತಿಭಟನೆ!

ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರತಿ ಕೆಜಿ ವಿತರಣೆ ಮಾಡಿದರೆ 1.24 ರೂ. ಕಮಿಷನ್ ನೀಡಲಾಗುತ್ತೆ. ಆದರೆ ಈಗ ಅಕ್ಕಿ ವಿತರಣೆ ಬದಲು ಸರ್ಕಾರ ಹಣ ನೀಡುತ್ತಿರುವ ಕಾರಣದಿಂದಾಗಿ ತಮಗೆ ಸಲ್ಲಬೇಕಾಗಿರುವ ಕಮಿಷನ್ (commission) ಸಿಗುತ್ತಿಲ್ಲ, ಹಾಗಾಗಿ ಕಮಿಷನ್ ಕೊಡಬೇಕು ಜೊತೆಗೆ ಇನ್ನಷ್ಟು ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವ ಕಾರಣಕ್ಕೆ ರಾಜ್ಯಾದ್ಯಂತ ಎಲ್ಲಾ ಪಡಿತರ ಅಂಗಡಿ ಅಥವಾ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಪಡಿತರ ವಿತರಕರ ಬೇಡಿಕೆ ಏನು?

Ration Cardಇತರ ರಾಜ್ಯಗಳಲ್ಲಿ ನೀಡುವಂತೆ ಕರ್ನಾಟಕದಲ್ಲಿಯೂ ಕೂಡ ಹೆಚ್ಚಿನ ಕಮಿಷನ್ ನೀಡಬೇಕು. ಇ ಕೆ ವೈ ಸಿ (ekyc) ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುವುದರಿಂದ 23.75 ಕೋಟಿ ಸಹಾಯಧನವನ್ನು ಸರ್ಕಾರ ಬಿಡುಗಡೆ ಮಾಡುವುದಾಗಿ ಹೇಳಿದ್ದು ಆದರೆ ಮಾಡಿಲ್ಲ ಇದನ್ನ ತಕ್ಷಣವೇ ಬಿಡುಗಡೆ ಮಾಡಬೇಕು.

ಅದೇ ರೀತಿ ಅಂಗಡಿ ವಿತರಕರು ಅಥವಾ ಸಿಬ್ಬಂದಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವನ್ನು ನೀಡಬೇಕು. ಒಂದು ವೇಳೆ 5 ಕೆ.ಜಿ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಇದ್ದರೆ ಮುಂದಿನ ತಿಂಗಳಿನಿಂದ ಅಕ್ಕಿಯ ಬದಲು ಗೋಧಿ ರಾಗಿ ಇತ್ಯಾದಿ ಬೇಳೆ ಕಾಳುಗಳನ್ನಾದರೂ ವಿತರಣೆ ಮಾಡಬೇಕು ಹಾಗೂ ಈ ವಿತರಣೆಗೆ ಸಲ್ಲ ಬೇಕಾಗಿರುವ ಕಮಿಷನ್ ಒದಗಿಸಬೇಕು. ಇವಿಷ್ಟು ನ್ಯಾಯಬೆಲೆ ಅಂಗಡಿ ವಿತರಕರು ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳು.

ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಸರ್ಕಾರದಿಂದ ಪರಿಹಾರ; ಇನ್ಮುಂದೆ ಹಣ ಬಂದೇ ಬರುತ್ತೆ

ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣವೋ ಅಕ್ಕಿಯೋ?

Annabhagya Schemeಮುಂದಿನ ತಿಂಗಳಿನಿಂದಾದರೂ ಹೆಚ್ಚುವರಿ ಅಕ್ಕಿಯನ್ನು ರಾಜ್ಯ ಸರ್ಕಾರ ಒದಗಿಸಲು ಸಾಧ್ಯವಾಗುವುದೆ ಎಂಬುದನ್ನು ಜನ ಕಾಯುತ್ತಿದ್ದಾರೆ, ಈಗಾಗಲೇ ಬರಪೀಡಿತ ಪ್ರದೇಶಗಳಿಗೆ ಹಣದ ಬದಲು (Money Transfer) ಅಕ್ಕಿಯನ್ನೇ ನೀಡುವುದಾಗಿ ಸರ್ಕಾರ ತಿಳಿಸಿದೆ

ಹಾಗಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬರಪೀಡಿತ ಪ್ರದೇಶದ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗಿಲ್ಲ, ಅದರ ಬದಲು ಅಕ್ಕಿಯನ್ನು ನೀಡಲಾಗಿದೆ. ಅದೇ ರೀತಿ ಇತರ ಪ್ರದೇಶಗಳಲ್ಲಿ ಅಕ್ಕಿಯ ಬದಲು ಬೇರೆ ಬೇಳೆ ಕಾಳುಗಳನ್ನ ನೀಡುವುದರ ಮೂಲಕ ವಿತರಕರ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದೆಯಾ ಎಂಬುದನ್ನ ಕಾದು ನೋಡಬೇಕು.

ಬಿಪಿಎಲ್ ರೇಷನ್ ಕಾರ್ಡ್ ಇದ್ದೋರು 30 ದಿನದೊಳಗೆ ಈ ಕೆಲಸ ಮಾಡಿಕೊಳ್ಳಿ, ಇಲ್ಲವಾದರೆ ಕಾರ್ಡ್ ರದ್ದು

Even if you have a ration card, you will not get the ration for this Reason

Follow us On

FaceBook Google News

Even if you have a ration card, you will not get the ration for this Reason