ಬಂಪರ್ ಆಫರ್; ಜಮೀನು ಖರೀದಿಸುವುದಕ್ಕೆ ಸರ್ಕಾರವೇ ಕೊಡುತ್ತೆ 25 ಲಕ್ಷ ಸಹಾಯಧನ

ಭೂ ಒಡೆತನ ಯೋಜನೆ (land purchase scheme 2023) ಅಡಿಯಲ್ಲಿ ಈ ಸೌಲಭ್ಯವನ್ನು ಜನರು ಪಡೆದುಕೊಳ್ಳಬಹುದು, ಇದರ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ನೀವು ಕೂಡ ನಿಮ್ಮ ಸ್ವಂತ ಕೃಷಿ ಭೂಮಿ (own Agriculture Land) ಹೊಂದಿರಬೇಕು ಅಥವಾ ಯಾವುದೇ ಜಮೀನು ಖರೀದಿ (Land Purchase) ಮಾಡಬೇಕು ಎಂದು ಬಯಸಿದ್ದೀರಾ?

ಹಾಗಾದ್ರೆ ಚಿಂತೆ ಬೇಡ ಕರ್ನಾಟಕ ಸರ್ಕಾರವೇ 25 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ಜಮೀನು ಖರೀದಿಗೆ ನೀಡುತ್ತಿದೆ. ಭೂ ಒಡೆತನ ಯೋಜನೆ (land purchase scheme 2023) ಅಡಿಯಲ್ಲಿ ಈ ಸೌಲಭ್ಯವನ್ನು ಜನರು ಪಡೆದುಕೊಳ್ಳಬಹುದು, ಇದರ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

Govt announced Rs 10 lakh subsidy Loan for women to buy agricultural land

ಬ್ಯಾಂಕ್ ಖಾತೆ ಸಮಸ್ಯೆ ಇದ್ದು ಗೃಹಲಕ್ಷ್ಮಿ ಹಣ ಸಿಗದವರಿಗೆ ಗುಡ್ ನ್ಯೂಸ್; ಈ ರೀತಿ ಮಾಡಿದ್ರೆ ಬರುತ್ತೆ ಹಣ

ಭೂ ಒಡೆತನ ಯೋಜನೆ (Karnataka land purchase scheme 2023)

ಕರ್ನಾಟಕ ರಾಜ್ಯ ಸರ್ಕಾರ 2023ರ ಬಜೆಟ್ ನಲ್ಲಿ ಈ ಬಗ್ಗೆ ಮಂಡಿಸಿತ್ತು, ಈಗ ರೈತರಿಗೆ ಹಾಗೂ ಜಮೀನು ಖರೀದಿ ಮಾಡಲು ಬಯಸುವವರಿಗೆ ಸಹಾಯಕವಾಗುವಂತಹ ಭೂ ಒಡೆತನ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.

ಈ ಯೋಜನೆಯ ಅಡಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಗೂ ರಾಮನಗರ ಜಿಲ್ಲೆಗಳಿಗೆ 25 ಲಕ್ಷ ಹಾಗೂ ಉಳಿದ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ನೀವು ಪಡೆದ ಮೊತ್ತಕ್ಕೆ 50% ನಷ್ಟು ಸರ್ಕಾರದ ಸಹಾಯಧನ (subsidy) ಹಾಗೂ 50% ಅನ್ನು ಸಾಲವಾಗಿ ( loan) ಪಡೆದುಕೊಂಡು ಅದನ್ನು ನೀವು ಕಂತುಗಳಲ್ಲಿ ತೀರಿಸಬೇಕಾಗುತ್ತದೆ.

ಎಲ್ಲರ ಖಾತೆಗೂ ಹಂತ ಹಂತವಾಗಿ ಗೃಹಲಕ್ಷ್ಮಿ ಹಣ ಜಮಾ ಆಗುತ್ತೆ ಚಿಂತೆ ಬೇಡ; ಸರ್ಕಾರ ಸ್ಪಷ್ಟನೆ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

property Documentsಭೂ ಒಡೆತನ ಯೋಜನೆಯ ಅಡಿಯಲ್ಲಿ 20 ರಿಂದ 25 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಭೂಮಿ ಖರೀದಿ (Land Purchase) ಮಾಡಲು ಬಯಸುವವರು ತಕ್ಷಣವೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲೆಗಳು ನಿಮ್ಮ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಕೃಷಿ ಕಾರ್ಮಿಕ ದೃಢೀಕರಣ ಪತ್ರ. ಇಷ್ಟು ದಾಖಲೆಗಳು ನಿಮ್ಮ ಬಳಿ ಇದ್ದರೆ ನವೆಂಬರ್ 29 2023ರ ಒಳಗೆ ಅರ್ಜಿ ಸಲ್ಲಿಸಿ.

ಕಡಿಮೆ ಕೃಷಿ ಜಮೀನು ಇರೋ ರೈತರಿಗೆ ಉಚಿತ ಬೋರ್‌ವೆಲ್, ಪಂಪ್ ಸೆಟ್ ಸೌಲಭ್ಯ! ಅರ್ಜಿ ಸಲ್ಲಿಸಿ

ಯಾರಿಗೆ ಸಿಗಲಿದೆ ಈ ಯೋಜನೆಯ ಪ್ರಯೋಜನ!

202324ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆರ್ಥಿಕ ಅಭಿವೃದ್ಧಿಗಾಗಿ ಭೂ ಒಡೆತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಯೋಜನೆಯ ಅಡಿಯಲ್ಲಿ ಈ ಕೆಳಗಿನ ನಿಗಮಗಳ ವ್ಯಾಪ್ತಿಗೆ ಬರುವ ಸಮುದಾಯದ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
ಕರ್ನಾಟಕ ತಾಂಡ ಸಮುದಾಯ ಅಭಿವೃದ್ಧಿ ನಿಗಮ
ಕರ್ನಾಟಕ ಮಹರ್ಷಿ ವಾಲ್ಮೀಕಿ ವಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ.

ಸ್ವಂತ ವಾಹನ ಖರೀದಿಗೆ ಸಿಗುತ್ತೆ 4 ಲಕ್ಷ ಸಬ್ಸಿಡಿ ಹಣ! ಸರ್ಕಾರಿ ಯೋಜನೆಗೆ ಅಪ್ಲೈ ಮಾಡಿ

ಎಲ್ಲಾ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ರಾಜ್ಯದ್ಯಂತ ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸ ಮಾಡುತ್ತಾರೆ, ಹಾಗಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ವಾಸಿಸುವ ಈ ಸಮುದಾಯಕ್ಕೆ ಸೇರಿದವರು ಭೂ ಒಡೆತನ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಆನ್ಲೈನ್ ಅರ್ಜಿ ಸಲ್ಲಿಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 29 2023,

ಅರ್ಜಿ ಸಲ್ಲಿಸಲು ಸೇವಾ ಸಿಂಧು ಅಧಿಕೃತ ವೆಬ್ಸೈಟ್ https://sevasindhu.karnataka.gov.in/Sevasindhu/Kannada?ReturnUrl=%2F ಕ್ಲಿಕ್ ಮಾಡಿ.

25 lakh subsidy is given by the government to buy the land or Property Purchase