ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಅದೆಷ್ಟೋ ಮಹಿಳೆಯರಿಗೆ ಮರೀಚಿಕೆಯಾಗಿಯೇ ಉಳಿದಿದೆ, ಸಾಕಷ್ಟು ಪ್ರಯತ್ನ ಪಟ್ಟರು ಅಂತವರ ಖಾತೆಗೆ ಮಾತ್ರ ಹಣ ವರ್ಗಾವಣೆ (DBT) ಆಗುತ್ತಿಲ್ಲ

ನಾವು ಅರ್ಜಿ ಸಲ್ಲಿಸಿದ್ದು ಆಗಿದೆ, ಎಲ್ಲಾ ರೀತಿಯ ದಾಖಲೆಗಳನ್ನು ನೀಡಿದ್ದೇವೆ ಆದರೂ ಕೂಡ ಯಾಕೆ ನಮ್ಮ ಖಾತೆಗೆ (Bank Account) ಮಾತ್ರ ಹಣ ಜಮಾ ಆಗುತ್ತಿಲ್ಲ (Money Transfer) ಎಂದು 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Gruha Lakshmi money will not be missed for any reason henceforth

ರಾಜ್ಯ ಕಾಂಗ್ರೆಸ್ ಸರ್ಕಾರದ (state government) ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರಿಗೆ ಪ್ರತಿ ತಿಂಗಳು ಉಚಿತವಾಗಿ ವರ್ಗಾವಣೆ ಮಾಡಲಾಗುತ್ತದೆ

ಅದರಲ್ಲಿ ಸುಮಾರು ಎರಡು ಕಂತಿನ ಹಣ (second installment) ಈಗಾಗಲೇ ಜಮಾ ಆಗಿದೆ. ಮೊದಲ ಕಂತಿನ ಹಣ 96 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆ ತಲುಪಿದೆ ಇನ್ನು ಎರಡನೇ ಕಂತಿನ ಹಣ ಹಂತ ಹಂತವಾಗಿ ಮಹಿಳೆಯರ ಖಾತೆಗೆ ಜಮಾ ಆಗುತ್ತಿದೆ.

ಎಲ್ಲರ ಖಾತೆಗೂ ಹಂತ ಹಂತವಾಗಿ ಗೃಹಲಕ್ಷ್ಮಿ ಹಣ ಜಮಾ ಆಗುತ್ತೆ ಚಿಂತೆ ಬೇಡ; ಸರ್ಕಾರ ಸ್ಪಷ್ಟನೆ

ಇನ್ನು ಹಣ ಬಾರದೆ ಇದ್ದರೆ ಅದಕ್ಕೆ ಕಾರಣ ಏನು?

ಈಗಾಗಲೇ ಸರ್ಕಾರವು ತಿಳಿಸಿರುವ ಹಾಗೆ ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದೆ, ಅಂಥವರ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ನಲ್ಲಿ ಈಕೆ ವೈ ಸಿ (ekyc) ಮಾಡಿಸಿಕೊಳ್ಳಲು ಸಾಕಷ್ಟು ಮಹಿಳೆಯರು ವಿಫಲರಾಗಿದ್ದಾರೆ, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಹಾಗೂ ಈ ಕೆ ವೈ ಸಿ ಆಗದೆ ಇದ್ದಲ್ಲಿ ಸರ್ಕಾರದಿಂದ ಹಣ ಜಮಾ ಆಗಿದ್ದರು ಕೂಡ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುವುದಿಲ್ಲ

ಹಾಗಾಗಿ ಮಹಿಳೆಯರು ಈ ಒಂದು ಪ್ರಮುಖ ಕೆಲಸವನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ, ಬ್ಯಾಂಕ್ ಖಾತೆಗೆ (bank account) ಎಲ್ಲ ಲಿಂಕ್ ಗಳು ಸರಿಯಾಗಿ ಆದರೆ ಗೃಹಲಕ್ಷ್ಮಿ ಹಣ ಬರುವುದರಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಒಂದು ವೇಳೆ ಮೊದಲ ಕಂತಿನ ಹಣ ಬಿಡುಗಡೆ ಆಗದೇ ಇದ್ದರೂ ನಿಮ್ಮ ಬ್ಯಾಂಕ್ ಖಾತೆ ಸರಿ ಹೋದರೆ ಎರಡು ಕಂತಿನ ಹಣವನ್ನು ಸೇರಿಸಿ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ ಎಂದು ಸರಕಾರ ಭರವಸೆ ನೀಡಿದ್ದು ಆದರೆ ಇಲ್ಲಿಯವರೆಗೆ ಆ ಕೆಲಸ ಆಗಿಲ್ಲ.

ಕಡಿಮೆ ಕೃಷಿ ಜಮೀನು ಇರೋ ರೈತರಿಗೆ ಉಚಿತ ಬೋರ್‌ವೆಲ್, ಪಂಪ್ ಸೆಟ್ ಸೌಲಭ್ಯ! ಅರ್ಜಿ ಸಲ್ಲಿಸಿ

ಈ ಕೆಲಸ ಮಾಡಿ ಹಣ ಬಂದೇ ಬರುತ್ತೆ!

Gruha Lakshmi Schemeಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಮಾತ್ರ ಬಾರದೆ ಇದ್ದ ಮಹಿಳೆಯರು ಅರ್ಜಿ ಸಲ್ಲಿಸಿದಾಗ ಕೊಟ್ಟಿರುವ ಸ್ವೀಕೃತಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ (Ration Card) ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಹತ್ತಿರದ ಅಧಿಕಾರಿಗಳ ಕಚೇರಿಗೆ ತೆಗೆದುಕೊಂಡು ಹೋಗಿ ಕೊಟ್ಟರೆ ಅಲ್ಲಿಯವರು ನಿಮ್ಮ ಖಾತೆಯಲ್ಲಿ ಯಾವ ಸಮಸ್ಯೆ ಇದೆ ಎಂಬುದನ್ನು ತಿಳಿಸಿ ಅದಕ್ಕೆ ಪರಿಹಾರವನ್ನು ಕೂಡ ಸೂಚಿಸುತ್ತಾರೆ.

ಸ್ವಂತ ವಾಹನ ಖರೀದಿಗೆ ಸಿಗುತ್ತೆ 4 ಲಕ್ಷ ಸಬ್ಸಿಡಿ ಹಣ! ಸರ್ಕಾರಿ ಯೋಜನೆಗೆ ಅಪ್ಲೈ ಮಾಡಿ

ಇನ್ನು ಎರಡನೆಯದಾಗಿ bank ಖಾತೆ ಹೊಂದಿರುವವರಿಗಿಂತಲೂ ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿರುವವರು ಸುಲಭವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುವಂತಾಗಿದೆ.

ಹಾಗಾಗಿ ಮಹಿಳೆಯರು ಆದಷ್ಟು ಬೇಗ ಪೋಸ್ಟ್ ಆಫೀಸ್ ನಲ್ಲಿ ಖಾತೆಯನ್ನು ತೆರೆದರೆ ಒಳ್ಳೆಯದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸೂಚಿಸಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಾತ್ರ ಇದುವರೆಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ

if Gruha lakshmi Scheme bank account problem, do this money will Deposit