ಇತ್ತೀಚಿಗೆ ವಿಧಾನಸೌಧದಲ್ಲಿ (vidhana soudha) ಪ್ರಗತಿ ಪರಿಶೀಲನ ಸಭೆಯನ್ನು ನಡೆಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರು ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ

ಕೆಲವು ಜಿಲ್ಲೆಗಳಿಗೆ ಈಗಾಗಲೇ ಸಂಪೂರ್ಣ ಹಣ ಜಮಾ (Money Transfer) ಆಗಿದ್ದು ಇನ್ನೂ ಕೆಲವು ಜಿಲ್ಲೆಗಳಿಗೆ ಹಣ ಜಮಾ ಮಾಡುವ ಪ್ರಕ್ರಿಯೆ ಮುಂದುವರೆದಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ ಹಣ ವರ್ಗಾವಣೆ (DBT) ಆಗಲಿದೆ ಎಂದಿದ್ದಾರೆ.

Aadhaar should be linked to the bank account to reach Gruha Lakshmi money

ಕಡಿಮೆ ಕೃಷಿ ಜಮೀನು ಇರೋ ರೈತರಿಗೆ ಉಚಿತ ಬೋರ್‌ವೆಲ್, ಪಂಪ್ ಸೆಟ್ ಸೌಲಭ್ಯ! ಅರ್ಜಿ ಸಲ್ಲಿಸಿ

ಕಗ್ಗಂಟಾದ ಗೃಹಲಕ್ಷ್ಮಿ ಯೋಜನೆ!

ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ನೇ ತಾರೀಖಿನಂದು ಚಾಲನೆ ನೀಡಿದ್ದು ಅದಾದ ಬಳಿಕ ಮಹಿಳೆಯರ ಖಾತೆಗೆ (Bank Account) ಹಂತ ಹಂತವಾಗಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆದಿದೆ

ಸುಮಾರು 88% ರಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿದೆ, ಆದರೆ ಇನ್ನೂ ಹಲವರಿಗೆ ಅರ್ಜಿ ಸಲ್ಲಿಸಿದರು ಕೂಡ ಹಣ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇರುವುದು, ಈ ಕೆ ವೈ ಸಿ (KYC) ಆಗದೇ ಇರುವುದು ಹಾಗೂ ಸರ್ಕಾರದ ತಾಂತ್ರಿಕ ದೋಷಗಳು ಕೂಡ ಕಾರಣವಾಗಿವೆ.

ಸ್ವಂತ ವಾಹನ ಖರೀದಿಗೆ ಸಿಗುತ್ತೆ 4 ಲಕ್ಷ ಸಬ್ಸಿಡಿ ಹಣ! ಸರ್ಕಾರಿ ಯೋಜನೆಗೆ ಅಪ್ಲೈ ಮಾಡಿ

ಹಂತ ಹಂತವಾಗಿ ಹಣ ಜಮಾ ಆಗುತ್ತೆ!

Gruha Lakshmi Yojaneಗೃಹಲಕ್ಷ್ಮಿ ಯೋಜನೆಯ ಬಗ್ಗೆ ಪ್ರಗತಿ ಪರಿಶೀಲನ ಸಭೆ ನಡೆಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎರಡನೇ ಕಂತಿನ ಹಣ ಹಂತ ಹಂತವಾಗಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ, ನವೆಂಬರ್ ಕೊನೆಯ ಒಳಗೆ ಪ್ರತಿಯೊಬ್ಬರ ಖಾತೆಗೂ ಹಣ ವರ್ಗಾವಣೆ ಆಗಲಿದೆ, ಇನ್ನು ಮೂರನೇ ಕಂತಿನ ಬಿಡುಗಡೆಯ ಹೊತ್ತಿಗೆ ಪ್ರತಿಯೊಬ್ಬ ಫಲಾನುಭವಿ ಖಾತೆಗಳಿಗೂ ಹಣ ವರ್ಗಾವಣೆ ಆಗುವಂತೆ ನೋಡಿಕೊಳ್ಳಲಾಗುವುದು ಸರ್ಕಾರದಿಂದ ಯಾವುದೇ ತಾಂತ್ರಿಕ ದೋಷಗಳಿದ್ರು (technical error) ಅವುಗಳನ್ನು ತಕ್ಷಣಕ್ಕೆ ಪರಿಹರಿಸಿಕೊಳ್ಳಬೇಕು ಎಂಬುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸ್ವಂತ ವ್ಯಾಪಾರ ಮಾಡಿಕೊಳ್ಳೋಕೆ ಸಿಗುತ್ತೆ 1 ಲಕ್ಷ ಹಣ! ಸರ್ಕಾರಿ ಯೋಜನೆಗೆ ಅರ್ಜಿ ಹಾಕಿ

ಇತರ ಇಲಾಖೆಯ ಸಹಾಯ ಪಡೆದುಕೊಳ್ಳಿ!

ಗೃಹಲಕ್ಷ್ಮಿ ಯೋಜನೆಯ ಸರಿಯಾದ ಪ್ರಯೋಜನವನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಪಡೆದುಕೊಳ್ಳಬೇಕು, ಅದಕ್ಕೆ ಅಗತ್ಯ ಇರುವ ಯಾವುದೇ ಬದಲಾವಣೆ ಬೇಕಿದ್ದರೂ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚಿಸಿದ್ದಾರೆ.

ಇಲಾಖೆಯ ಉಪ ನಿದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇ-ಗವರ್ನೆನ್ಸ್‌ ಇಲಾಖೆಯ ಸಹಕಾರದೊಂದಿಗೆ ತಾಂತ್ರಿಕ ದೋಷಗಳನ್ನು ಪರಿಹರಿಸಿಕೊಳ್ಳಬೇಕು. ಇದರ ಜೊತೆಗೆ ಅಂಗನವಾಡಿ ಸಹಾಯಕಿಯರ ಸಹಾಯವನ್ನು ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯ ಸಹಾಯವನ್ನು ಪಡೆದುಕೊಂಡು ಮಹಿಳೆಯರ ಮನೆ ಮನೆಗೆ ತೆರಳಿ ಅವರ ಖಾತೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿ, ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ತಿಂಗಳಿನಿಂದ ಅಂತ ಗೃಹಿಣಿಯರು ಖಾತೆಗೂ ಕೂಡ ಹಣ ಜಮಾ ಆಗುವಂತೆ ಮಾಡಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ್ದಾರೆ.

ಅದೇ ರೀತಿ ಬ್ಯಾಂಕ್ ಖಾತೆಯಲ್ಲಿ (Bank Account) ಸಮಸ್ಯೆ ಇದ್ರೆ ಪೋಸ್ಟ್ ಆಫೀಸ್ನಲ್ಲಿ ಖಾತೆ (Post Office Account) ತೆರೆಯಿರಿ ಅದಕ್ಕೆ ಹಣ ಬೇಗ ವರ್ಗಾವಣೆ ಆಗುತ್ತದೆ ಎಂಬುದಾಗಿ ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ

Gruha Lakshmi money will be credited to everyone’s account step by step, Government clarification