ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲವೇ! ಸರ್ಕಾರವೇ ಕೊಡುತ್ತೆ ಪರಿಹಾರ; ಅರ್ಜಿ ಸಲ್ಲಿಸಿ

ಸಾಕಷ್ಟು ರೈತರು ತಮ್ಮ ಜಮೀನಿಗೆ ಕಾಲುದಾರಿ (road to farmers land) ಅಥವಾ ಬಂಡಿದಾರಿ ಇಲ್ಲದೆ, ಖಾಸಗಿ ಜಾಗದ ಮೂಲಕ ಸಾಗಬೇಕಾಗುತ್ತದೆ

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರ (state government) ರಾಜ್ಯದ ರೈತರಿಗೆ ಖುಷಿಯ ವಿಚಾರ ಒಂದನ್ನು ಘೋಷಿಸಿದೆ. ಹಲವು ರೈತರು (farmers) ತಮ್ಮ ಜಮೀನಿಗೆ (agriculture land) ಹೋಗಲು ಬೇರೆಯವರ ಜಾಗದಲ್ಲಿ ಅಥವಾ ಬೇರೆಯವರ ಜಮೀನಿನ ಮೂಲಕ ಹಾದು ಹೋಗಬೇಕಾಗುತ್ತದೆ

ಇಂತಹ ಸಂದರ್ಭದಲ್ಲಿ ಜಾಗಕ್ಕಾಗಿ ಜಗಳ ಆಗುವುದು ಸಾಮಾನ್ಯ, ಸಾಕಷ್ಟು ರೈತರು ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ಸಂಕಷ್ಟ ಪಡುವಂತಾಗಿದೆ.

agriculture land

ಈ ಎಲ್ಲಾ ಸಮಸ್ಯೆಗೂ ರಾಜ್ಯ ಸರ್ಕಾರ ಬ್ರೇಕ್ ಹಾಕಲಿದ್ದು ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೊಸ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಅಪ್ಪು ಅಜರಾಮರ! ಪುನೀತ್ ರಾಜಕುಮಾರ್ ಹೆಸರಿನಲ್ಲಿ ರಾಜ್ಯಾದ್ಯಂತ ಮತ್ತೊಂದು ಯೋಜನೆ

ಸರ್ಕಾರವೇ ನೀಡಲಿದೆ ಪರಿಹಾರ!

ಸಾಕಷ್ಟು ರೈತರು ತಮ್ಮ ಜಮೀನಿಗೆ ಕಾಲುದಾರಿ (road to farmers land) ಅಥವಾ ಬಂಡಿದಾರಿ ಇಲ್ಲದೆ, ಖಾಸಗಿ ಜಾಗದ ಮೂಲಕ ಸಾಗಬೇಕಾಗುತ್ತದೆ, ಇದೇ ಕಾರಣಕ್ಕೆ ತಮ್ಮ ಜಮೀನಿನಲ್ಲಿ ದಾರಿ ಕೊಡುವುದಿಲ್ಲ ಎಂದು ಖಾಸಗಿ ಜಮೀನುದಾರರು ಜಗಳ ಮಾಡುವ ಸಾಧ್ಯತೆ ಇರುತ್ತದೆ.

ಹಾಗಾಗಿ ರೈತರು ಅವರ ಜಮೀನಿಗೆ ತೆರಳಲು ಖಾಸಗಿ ಜಾಗದಲ್ಲಿ (private property) ಜಾಗ ನೀಡಬೇಕು ಎಂದು ಸರ್ಕಾರ ತಿಳಿಸಿದೆ. ಒಂದು ವೇಳೆ ದಾರಿ ನೀಡದೆ ಇದ್ದಲ್ಲಿ ತಹಶೀಲ್ದಾರ್ ಅಥವಾ ಪೊಲೀಸರಿಗೆ (police complaint) ದೂರು ಸಲ್ಲಿಸಿ ಅವರು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂಬುದಾಗಿ ಸರ್ಕಾರ ವಿಶೇಷ ಆದೇಶ ಹೊರಡಿಸಿದೆ.

ಬಂಪರ್ ಆಫರ್; ಜಮೀನು ಖರೀದಿಸುವುದಕ್ಕೆ ಸರ್ಕಾರವೇ ಕೊಡುತ್ತೆ 25 ಲಕ್ಷ ಸಹಾಯಧನ

ಸುತ್ತೋಲೆ ಹೊರಡಿಸಿದ ಸರ್ಕಾರ!

Mandatory to Leave the Way For Farmers to Go Agriculture Landರೈತರು ತಮ್ಮ ಜಮೀನಿಗೆ (Farmers Land) ಹೋಗಲು ಕಾಲುದಾರಿ ಬಂಡಿದಾರಿ ವ್ಯವಸ್ಥೆ ಮಾಡುವ ಬಗ್ಗೆ ಕರ್ನಾಟಕ ಸರ್ಕಾರ ಜವಾಬ್ದಾರಿ ವಹಿಸಿಕೊಂಡಿದ್ದು ಈ ಬಗ್ಗೆ ವಿಶೇಷ ಸುತ್ತೋಲೆ ಬಿಡುಗಡೆ ಮಾಡಿದೆ. ಭೂ ಕಂದಾಯ ನಿಯಮ 1966 ನಿಯಮ 59, ಇದರ ಅಡಿಯಲ್ಲಿ ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ.

ಎಲ್ಲರ ಖಾತೆಗೂ ಹಂತ ಹಂತವಾಗಿ ಗೃಹಲಕ್ಷ್ಮಿ ಹಣ ಜಮಾ ಆಗುತ್ತೆ ಚಿಂತೆ ಬೇಡ; ಸರ್ಕಾರ ಸ್ಪಷ್ಟನೆ

ಭೂಮಿ ಪ್ರವೇಶಿಸುವ ಹಕ್ಕು (the Indian easement act 1882) ಪ್ರತಿ ಜಮೀನಿನ ಮಾಲೀಕರಿಗೆ ಇರುತ್ತದೆ. ಹಾಗಾಗಿ ಸದರಿ ಹಕ್ಕನ್ನು ಸಂಬಂಧ ಪಟ್ಟ ರೈತರಿಗೆ ನೀಡಬೇಕು ಎನ್ನುವ ಸಲುವಾಗಿ ಸರ್ಕಾರ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದ್ದು ಇನ್ನು ಮುಂದೆ ಯಾವುದೇ ರೈತರು ತಮ್ಮ ಜಮೀನಿಗೆ ಪ್ರವೇಶ ಪಡೆಯಲು ಯಾರೊಂದಿಗೂ ಕಾದಾಟ ಮಾಡಿಕೊಳ್ಳಬೇಕಾಗಿಲ್ಲ..

ನೇರವಾಗಿ ತಹಶೀಲ್ದಾರರು ಅಥವಾ ಪೊಲೀಸರನ್ನು ಸಂಪರ್ಕಿಸಿ ಅವರ ಮಧ್ಯಸ್ಥಿಕೆಯಲ್ಲಿ ಖಾಸಗಿ ಜಮೀನಿನಲ್ಲಿ ಕೂಡ ತಮ್ಮ ಜಾಗಕ್ಕೆ ಹೋಗಲು ಸಣ್ಣ ಕಾಲುದಾರಿ ಮಾಡಿಕೊಳ್ಳಲು ಅವಕಾಶವನ್ನು ಸರ್ಕಾರ ಒದಗಿಸಿ ಕೊಡುತ್ತಿದೆ. ರಾಜ್ಯಾದ್ಯಂತ ಸಾಕಷ್ಟು ರೈತರಿಗೆ ಇದರಿಂದ ಹೆಚ್ಚು ಪ್ರಯೋಜನವಾಗಲಿದೆ.

If there is no Road to go your agricultural land, then Know government Announcement