Story Highlights
ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ನೇರ ಪ್ರಯೋಜನ ಸಿಗುವುದು ಬಿಪಿಎಲ್ (BPL Ration card) ಹಾಗೂ ಎಪಿಎಲ್ ಕಾರ್ಡ್ (APL Ration Card) ಹೊಂದಿರುವವರಿಗೆ ಮಾತ್ರ
ಹೊಸ ಪಡಿತರ ಚೀಟಿ (new ration card) ಗಾಗಿ ಅರ್ಜಿ ಸಲ್ಲಿಸಿ ಎರಡುವರೆ ವರ್ಷ ಆಗಿದೆ ಆದರೆ ಇದುವರೆಗೆ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾತ್ರ ಆಗಿಲ್ಲ.
ಅದರಲ್ಲೂ ಈಗ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ನೇರ ಪ್ರಯೋಜನ ಸಿಗುವುದು ಬಿಪಿಎಲ್ (BPL Ration card) ಹಾಗೂ ಎಪಿಎಲ್ ಕಾರ್ಡ್ (APL Ration Card) ಹೊಂದಿರುವವರಿಗೆ ಮಾತ್ರ
ಹಾಗಾಗಿ ಹೊಸ ಪಡಿತರ ಕಾರ್ಡ್ ಪಡೆದುಕೊಳ್ಳಲು ಜನ ಕಾಯುತ್ತಿದ್ದಾರೆ. ಈ ನಡುವೆ ಈ ಬಗ್ಗೆ ಮಾತನಾಡಿರುವ ಆಹಾರ ಮತ್ತು ನಾಗರಿಕ ಪೂರೈಕೆಗಳ ಸಚಿವ ಕೆ.ಎಚ್ ಮುನಿಯಪ್ಪ (K.H Muniyappa) ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ರೈತರಿಗಾಗಿ ಹೊಸ ಯೋಜನೆ; ಸೋಲಾರ್ ಪಂಪ್ ಸೆಟ್ ಗೆ 1.5 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸಿ
ಸಚಿವರು ಹೇಳಿದ್ದೇನು?
ಸುದ್ದಿಗೋಷ್ಠಿ ಒಂದರಲ್ಲಿ ಮಾತನಾಡಿದ ಕೆ.ಎಚ್ ಮುನಿಯಪ್ಪ, ಹಿಂದಿನ ಬಿಜೆಪಿ ಸರ್ಕಾರ (BJP government) ಹೊಸ ಪಡಿತರ ಚೀಟಿ ವಿತರಣೆ ಮಾಡುವುದಕ್ಕೆ ಬ್ರೇಕ್ ಹಾಕಿದ್ದು ಈಗ ನಾವು ಮತ್ತೆ ಅದನ್ನ ಆರಂಭಿಸುತ್ತಿದ್ದೇವೆ, ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಲ್ಲಿ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರು ಹೆಚ್ಚು.
ಜನರ ವೈಯಕ್ತಿಕ ವಿವರಣೆಗಳ ಆಧಾರದ ಮೇಲೆ ಬಂದಿರುವ ಅರ್ಜಿಗಳನ್ನು ಬಿಪಿಎಲ್ ಹಾಗೂ ಎಪಿಎಲ್ ಎಂದು ಬೇರ್ಪಡಿಸಿ ಸದ್ಯದಲ್ಲೇ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲವೇ! ಸರ್ಕಾರವೇ ಕೊಡುತ್ತೆ ಪರಿಹಾರ; ಅರ್ಜಿ ಸಲ್ಲಿಸಿ
ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆ! (AnnaBhagya Yojana)
ಆಹಾರ ಭದ್ರತೆ ಕಾಯ್ದೆಯನ್ನು 2013ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದು, ಕೇಂದ್ರ ಸರ್ಕಾರ ಅದನ್ನ ಮುಂದುವರೆಸಿಕೊಂಡು ಹೋಗುತ್ತಿದೆ, ಆದರೆ ರಾಜ್ಯ ಸರ್ಕಾರ ಕೇಳಿರುವ 5 ಕೆಜಿ ಹೆಚ್ಚು ಕೇಂದ್ರ ಸರ್ಕಾರ ಒದಗಿಸದೆ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡಿದೆ ಎಂದು ಸಚಿವರು ಟೀಕಿಸಿದ್ದಾರೆ.
ಅಕ್ಕಿ ಕೊಡುವಂತೆ ಕೇಳಿದ್ರೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಆಂಧ್ರ ಪ್ರದೇಶ, ತೆಲಂಗಾಣ, ಛತ್ತೀಸ್ಗಢ ಮೊದಲಾದ ರಾಜ್ಯಗಳಲ್ಲಿ ಅಕ್ಕಿ ಹೆಚ್ಚಾಗಿ ಬೆಳೆಯುವುದರಿಂದ ಅಲ್ಲಿ ಹಣಕೊಟ್ಟು ಖರೀದಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅಕ್ಕಿ ಸಿಕ್ಕ ತಕ್ಷಣ ಹಣ ಕೊಡುವುದನ್ನು ನಿಲ್ಲಿಸಿ, ಫಲಾನುಭವಿಗಳಿಗೆ ಅಕ್ಕಿಯನ್ನು ಕೊಡಲಾಗುವುದು.
ಬಂಪರ್ ಆಫರ್; ಜಮೀನು ಖರೀದಿಸುವುದಕ್ಕೆ ಸರ್ಕಾರವೇ ಕೊಡುತ್ತೆ 25 ಲಕ್ಷ ಸಹಾಯಧನ
ವಿತರಕರ ಬೇಡಿಕೆ ಈಡೇರಿಸುತ್ತಾ ಸರ್ಕಾರ?
ನಮಗೆ ಹತ್ತು ಕೆಜಿ ಅಕ್ಕಿಯ ಕಮಿಷನ್ ನೀಡಬೇಕು ಎಂದು ಪಡಿತರ ವಿತರಕರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈಗ ಜನರಿಗೆ ನೀಡಲಾಗುತ್ತಿರುವ 5 ಕೆಜಿ ಅಕ್ಕಿಗೆ ವಿತರಕರಿಗೆ ಕಮಿಷನ್ (commission) ನೀಡಲಾಗುತ್ತಿದೆ, ಇನ್ನು ಉಳಿದ ಐದು ಕೆಜಿ ಅಕ್ಕಿಯ ಬದಲು ಹಣವನ್ನೇ ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ.
ವಿತರಕರ ಬೇಡಿಕೆಯ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಸದ್ಯದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ 2.92 ಲಕ್ಷ ಪಡಿತರ ಚೀಟಿ ಅರ್ಜಿಯಲ್ಲಿ ಎಷ್ಟು ಫಲಾನುಭವಿಗಳಿಗೆ ಪಡಿತರ ಚೀಟಿ ಕೊಡಲಾಗುವುದು ಎಂಬುದನ್ನು ಕಾದು ನೋಡಬೇಕು.
Good news if you have applied for a new ration card, 2.95 lakh cards will be distributed soon