Karnataka NewsBangalore News

ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗೋಲ್ಲ, ಹಣವೂ ಸಿಗೋಲ್ಲ! ಅಷ್ಟಕ್ಕೂ ಏನಾಯ್ತು ಗೊತ್ತಾ?

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (Guarantee schemes) ಘೋಷಿಸಿದ ನಂತರ ಒಂದಲ್ಲ ಒಂದು ರೀತಿಯ ಸಂಕಷ್ಟವನ್ನು ಎದುರಿಸುವಂತೆ ಆಗಿದೆ. ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣದ ಬಿಡುಗಡೆಯಲ್ಲಿಯೂ ಸಾಕಷ್ಟು ಗೊಂದಲಗಳು ಆಗಿದ್ದು ಈಗಲೂ ಕೂಡ ಹಲವು ಮಹಿಳೆಯರು ಅರ್ಜಿ ಸಲ್ಲಿಸಿದರು ಹಣವನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ

ಇದೇ ಕಾರಣಕ್ಕೆ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಅನ್ನಭಾಗ್ಯ ಯೋಜನೆ (Annabhagya scheme) ಕೂಡ ಸರ್ಕಾರಕ್ಕೆ ಕಗ್ಗಂಟಾಗಿದೆ!

Do this if Annabhagya Yojana money not reached your Bank account yet

ಯುವಕರಿಗೆ ದೀಪಾವಳಿ ಗಿಫ್ಟ್ ಕೊಡಲು ಮುಂದಾದ ಸರ್ಕಾರ! ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್

ಅಕ್ಕಿಯ ಬದಲು ಹಣ ಕೊಡಬೇಡಿ ಎಂದ ವಿತರಕರು

ಗರೀಬ್ ಕಲ್ಯಾಣ ಯೋಜನೆ (Garib Kalyan Yojana) ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು, ದೇಶದಲ್ಲಿ ಇರುವ ಬಡತನ ಹಸಿವು ನಿವಾರಣೆ ಮಾಡಬೇಕು ಎನ್ನುವ ಸಲುವಾಗಿ ಗರಿಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವರಿಗೆ ಉಚಿತ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ.

ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರ ತಾನು ಕೂಡ ಹೆಚ್ಚುವರಿ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ತನ್ನ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ತಿಳಿಸಿತ್ತು.

ಆದರೆ ರಾಜ್ಯ ಸರ್ಕಾರಕ್ಕೆ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗಿಲ್ಲ, ಈ ಹಿನ್ನೆಲೆಯಲ್ಲಿ ತನ್ನ ಮಾತಿನಂತೆ ಅಕ್ಕಿ ಕೊಡಲು ಸಾಧ್ಯವಾಗದೆ ಇದ್ದರೂ ಆ ಅಕ್ಕಿಗೆ ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಕುಟುಂಬದ ಯಜಮಾನನ ಖಾತೆಗೆ ನೇರವಾಗಿ ಹಣ ವರ್ಗಾವಣೆ (Money Transfer) ಮಾಡಲಾಗುತ್ತಿದೆ. ಅನ್ನ ಭಾಗ್ಯ ಯೋಜನೆಯ ಡಿ ಬಿ ಟಿ (DBT) ಪ್ರತಿಯೊಬ್ಬ ಯಜಮಾನನ ಖಾತೆಗೆ ತಲುಪುತ್ತಿದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ 80,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

ವಿತರಕರ ಪ್ರತಿಭಟನೆ!

Annabhagya Schemeಈ ರೀತಿ ಅಕ್ಕಿಯ ಬದಲು ಹಣ ನೀಡುತ್ತಿರುವುದರಿಂದ ನ್ಯಾಯಬೆಲೆ ಅಂಗಡಿಯ ವಿತರಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಅಕ್ಕಿಯ ಬದಲು ಗೋಧಿ ರಾಗಿ ಮೊದಲಾದ ಧಾನ್ಯಗಳನ್ನಾದರೂ ನೀಡಿ ಆದರೆ ಹಣವನ್ನು ನೀಡಬೇಡಿ ಎಂದು ವಿತರಕರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

ನಮ್ಮ ರಾಜ್ಯದಲ್ಲಿ ವಿತರಕರಿಗೆ ಒಂದು ಕೆಜಿ ಅಕ್ಕಿಯ ಮೇಲೆ 1.24ಗಳ ಕಮಿಷನ್ (commission) ದೊರೆಯುತ್ತದೆ. ಈಗ ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿ ವಿತರಣೆ ಮಾಡುವುದಕ್ಕೆ ಕಮಿಷನ್ ಸಿಗುತ್ತಿದೆ, ಆದರೆ ರಾಜ್ಯ ಸರ್ಕಾರ ಅಕ್ಕಿ ವಿತರಣೆ ಮಾಡುತ್ತಿಲ್ಲ ಆದ್ದರಿಂದ ತಮಗೆ ಕಮಿಷನ್ ಬರುತ್ತಿಲ್ಲ ಎನ್ನುವುದು ಎಲ್ಲಾ ನ್ಯಾಯಬೆಲೆ ಅಂಗಡಿಯ ವಿತರಕರ ವಾದ. ಇದೇ ಕಾರಣಕ್ಕೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳು ಅಥವಾ ವಿತರಕರು ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಸಲ್ಲಿಸಿದ್ದಾರೆ.

ಇಂತಹ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ರೂಪಾಯಿ, ಇನ್ನು 2 ಸಾವಿರ ಬಂದಿಲ್ಲ ಅನ್ನೋ ಚಿಂತೆ ಬೇಡ

ವಿತರಕರ ಕುಟುಂಬದ ಸದಸ್ಯರು ಅಕಸ್ಮಾತ್ ಮರಣ ಹೊಂದಿದರೆ ಅವರಿಗೆ ಸರ್ಕಾರ ಪರಿಹಾರ ಕೊಡಬೇಕು, ಇದರ ರಾಜ್ಯಗಳಲ್ಲಿ ಕೊಡುವಂತೆ ಕಮಿಷನ್ ದರವನ್ನು ಹೆಚ್ಚಿಸಬೇಕು, ಫಲಾನುಭವಿಗಳ ಖಾತೆಗೆ (Bank Account) ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಿ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಇದ್ದರೂ ಇದರ ಧಾನ್ಯಗಳನ್ನು ನೀಡಬೇಕು ಈ ಮೂಲಕ ತಮಗೆ ಕಮಿಷನ್ ಒದಗಿಸಿ ಕೊಡಬೇಕು ಎನ್ನುವುದು ವಿತರಕರ ಬೇಡಿಕೆಗಳಾಗಿವೆ.

ಒಂದು ವೇಳೆ ಸರ್ಕಾರ ತಮ್ಮ ಬೇಡಿಕೆ ಈಡೇರಿಸಲು ಒಪ್ಪದೇ ಇದ್ದರೆ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಅಕ್ಕಿ ನೀಡುವುದಿಲ್ಲ ಎಂದು ವಿತರಕರು ಪಟ್ಟು ಹಿಡಿದು ಕೊಳ್ಳುತ್ತಿದ್ದಾರೆ.

ರಾಜ್ಯದ್ಯಂತ ಬಂದ್ ಗೆ ಕರೆ!

ಇನ್ನು ತಮ್ಮ ಬೇಡಿಕೆ ಈಡೇರದೆ ಇದ್ದಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಸರ್ಕಾರದಿಂದ ಬಂದಿರುವ ಅಕ್ಕಿ ಮೂಟೆಯನ್ನು ಬಿಡಿಸುವುದಿಲ್ಲ ಯಾರಿಗೂ ಪಡಿತರ ವಸ್ತುಗಳನ್ನು ವಿತರಣೆ ಮಾಡುವುದಿಲ್ಲ ಎಂದು ನ್ಯಾಯಬೆಲೆ ಅಂಗಡಿಯ ವಿತರಕರು ಸರ್ಕಾರಕ್ಕೆ ತಿಳಿಸಿದ್ದಾರೆ. ಆದರೆ ಈ ರೀತಿ ಪ್ರತಿಭಟನೆಯಿಂದ ನಿಜವಾಗಿ ತೊಂದರೆ ಅನುಭವಿಸಬೇಕಾಗಿರುವುದು ಪಡಿತರ ವಸ್ತುಗಳ ಫಲಾನುಭವಿಗಳು. ಹಾಗಾಗಿ ಸರ್ಕಾರ ಆದಷ್ಟು ಬೇಗ ಬೇಡಿಕೆಯನ್ನು ಈಡೇರಿಸುತ್ತಾ ಎಂಬುದನ್ನು ಕಾದು ನೋಡಬೇಕು.

ಹೊಸ ರೇಷನ್ ಕಾರ್ಡ್ ಪಡೆಯೋಕೆ ಹೀಗೆ ಮಾಡಿ; ಹೊರಬಿತ್ತು ಸರ್ಕಾರದ ಅಧಿಕೃತ ಆದೇಶ

Under Annabhagya Yojana rice and money will not Available from Now

Our Whatsapp Channel is Live Now 👇

Whatsapp Channel

Related Stories