Story Highlights
ಯಾರು ರೇಷನ್ ಕಾರ್ಡ್ ತಿದ್ದುಪಡಿ (ration card correction) ಮಾಡಿಕೊಳ್ಳುವ ಅಗತ್ಯ ಇದೆಯೋ ಅಂತವರು ತಕ್ಷಣವೇ ಹೋಗಿ ತಿದ್ದುಪಡಿ ಮಾಡಿಕೊಳ್ಳಿ, ಇದು ಬಹುಶ: ಕೊನೆಯ ಅವಕಾಶ ಆಗಿರಬಹುದು!
ಸರ್ಕಾರದ ಹೊಸ ಅಪ್ಡೇಟ್ (update) ಪ್ರಕಾರ ಕೆಲವು ಜಿಲ್ಲೆಗಳಿಗೆ (district) ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಮತ್ತೆ ಮೂರು ದಿನಗಳ ಅವಕಾಶ ಕೊಡಲಾಗಿದೆ
ಹಾಗಾಗಿ ಯಾರು ರೇಷನ್ ಕಾರ್ಡ್ ತಿದ್ದುಪಡಿ (ration card correction) ಮಾಡಿಕೊಳ್ಳುವ ಅಗತ್ಯ ಇದೆಯೋ ಅಂತವರು ತಕ್ಷಣವೇ ಹೋಗಿ ತಿದ್ದುಪಡಿ ಮಾಡಿಕೊಳ್ಳಿ, ಇದು ಬಹುಶ: ಕೊನೆಯ ಅವಕಾಶ ಆಗಿರಬಹುದು!
ರಾಜ್ಯ ಸರ್ಕಾರ ಹೊರಡಿಸಿರುವ ಯಾವುದೇ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಅಂದ್ರೆ ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಸುಸ್ಥಿತಿಯಲ್ಲಿ ಇರಬೇಕು. ಎಪಿಎಲ್ ಕಾರ್ಡ್ (APL Card) ಆಗಿರಲಿ ಅಥವಾ ಬಿಪಿಎಲ್ ಕಾರ್ಡ್ (BPL ration Card) ಆಗಿರಲಿ ಅದನ್ನ ನೀವು ಆಕ್ಟಿವ್ ಆಗಿ ಇಟ್ಟು ಕೊಂಡಿರಬೇಕು.
ಉಚಿತ ಸೈಕಲ್ ವಿತರಣೆ ಕುರಿತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ಒಂದು ವೇಳೆ ನಿಮ್ಮ ಬಳಿ ಇರುವ ರೇಷನ್ ಕಾರ್ಡ್ ಅನ್ನು ಆರು ತಿಂಗಳ ಕಾಲ ರೇಶನ್ ಪಡೆಯಲು ಬಳಸದೆ ಇದ್ದರೆ ಅಂತಹ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ತೀರ್ಮಾನಿಸಿದೆ. ಇದರ ಜೊತೆಗೆ ನಕಲಿ ರೇಷನ್ ಕಾರ್ಡ್ (fake ration card) ಗಳು ಕೂಡ ಪತ್ತೆಯಾಗಿದ್ದು ಇಂತಹ ಕಾರ್ಡುಗಳು ಇನ್ನೂ ಮುಂದೆ ಅಮಾನ್ಯಗೊಳ್ಳಲಿದೆ. (Ration card cancellation)
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!
ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಫಲಾನುಭವಿ ಮಹಿಳೆಯರಿಗೆ ಇರಲೇಬೇಕಾದ ಒಂದು ಪ್ರಮುಖ ದಾಖಲೆ ಅಂದ್ರೆ ರೇಷನ್ ಕಾರ್ಡ್ ಅವರ ಹೆಸರಿನಲ್ಲಿ ಇರಬೇಕು, ಅಂದ್ರೆ ರೇಷನ್ ಕಾರ್ಡ್ ಮನೆಯ ಯಜಮಾನಿಯ ಹೆಸರಿನಲ್ಲಿ ಇರಬೇಕು. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಈ ತಿದ್ದುಪಡಿ ಬಹಳ ಅನಿವಾರ್ಯವಾಗಿದೆ, ನೀವಿನ್ನು ತಿದ್ದುಪಡಿ ಮಾಡಿಕೊಂಡಿಲ್ಲ ಎಂದರೆ ಸರ್ಕಾರ ಕೊನೆಯ ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ತಕ್ಷಣವೇ ಹೋಗಿ ತಿದ್ದುಪಡಿ ಮಾಡಿಕೊಳ್ಳಿ.
ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಬಾರಿ ಹಾಗೂ ಈಗ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ. ಅಕ್ಟೋಬರ್ ತಿಂಗಳಿನ ಮೊದಲ ವಾರದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಜಿಲ್ಲಾವಾರು ವಿಭಾಗಗಳನ್ನು ಮಾಡಿ ಮೂರು ವಿಭಾಗಗಳಲ್ಲಿ ಆಯಾ ದಿನಾಂಕದಂದು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.
ಹಳ್ಳಿಗಳಲ್ಲಿ ವಾಸಿಸುವವರಿಗೆ ಹೊಸ ಯೋಜನೆ ಜಾರಿಗೆ ತಂದ ಸರ್ಕಾರ! ಸಿಗಲಿದೆ ಈ ಉಚಿತ ಸೌಲಭ್ಯ
ಆದರೆ ಸರ್ವರ್ ಸಮಸ್ಯೆಯಿಂದಾಗಿ ಜನರ ರೇಷನ್ ಕಾರ್ಡ್ ತಿದ್ದುಪಡಿ ಸಾಧ್ಯವಾಗಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದು ಕುಳಿತರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಇದೇ ಕಾರಣಕ್ಕೆ ಸರ್ಕಾರ ಈಗ ಮತ್ತೊಂದು ಅವಕಾಶ ಮಾಡಿಕೊಟ್ಟಿದ್ದು ಆಯ್ದ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ.
ನಿನ್ನೆಯಿಂದಲೇ ತಿದ್ದುಪಡಿ ಆರಂಭ
ಹೌದು ರಾಜ್ಯ ಸರ್ಕಾರ ಕೆಲವು ಆಯ್ದ ಜಿಲ್ಲೆಗಳಲ್ಲಿ ಮಾತ್ರ ಮತ್ತೆ ಮೂರು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ ಅಕ್ಟೋಬರ್ 19 ರಿಂದ ಅಂದರೆ ನಿನ್ನೆಯಿಂದ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದ್ದು 21 ಅಕ್ಟೋಬರ್ ತಾರೀಖಿನ ವರೆಗೆ ಮುಂದುವರೆಯಲಿದೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ, ಅಗತ್ಯ ಇರುವವರು ಹತ್ತಿರದ ಸೇವ ಕೇಂದ್ರಗಳಿಗೆ ಹೋಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು.
ಅನ್ನಭಾಗ್ಯ ಯೋಜನೆಯ ಹಣ ಇನ್ನೂ ನಿಮ್ಮ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ? ಇಲ್ಲಿದೆ ಪಕ್ಕಾ ಕಾರಣ
ಇನ್ನು ಇದು ಸಂಪೂರ್ಣ ಬಯೋಮೆಟ್ರಿಕ್ (biometric) ಆಧಾರವಾಗಿದ್ದು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅಗತ್ಯ ಇರುವವರು ಸ್ವತ: ತಾವೇ ಹೋದರೆ ಒಳ್ಳೆಯದು.
ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಹೆಸರುಗಳ ಬದಲಾವಣೆ, ಹೊಸ ಹೆಸರುಗಳ ಸೇರ್ಪಡೆ, ವಿಳಾಸ ಬದಲಾವಣೆ, ಮೃತಪಟ್ಟ ಸದಸ್ಯರ ಹೆಸರನ್ನು ತೆಗೆದುಹಾಕುವುದು ಈ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
ಯಾವೆಲ್ಲ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶ ಇದೆ?
ಬಳ್ಳಾರಿ
ಬೀದರ್
ಚಿಕ್ಕಬಳ್ಳಾಪುರ
ಚಿತ್ರದುರ್ಗ
ದಾವಣಗೆರೆ
ಕಲಬುರಗಿ
ಕೋಲಾರ
ಕೊಪ್ಪಳ
ರಾಯಚೂರು
ರಾಮನಗರ
ಶಿವಮೊಗ್ಗ
ತುಮಕೂರು
ಯಾದಗಿರಿ
ವಿಜಯನಗರ ಜಿಲ್ಲೆ
Allow 3 days for ration card correction in these districts, Apply for name addition, correction