ಅನ್ನಭಾಗ್ಯ ಯೋಜನೆಯ ಹಣ ಇನ್ನೂ ನಿಮ್ಮ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ? ಇಲ್ಲಿದೆ ಪಕ್ಕಾ ಕಾರಣ
ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಕಳೆದ ಎರಡು ತಿಂಗಳಿನಿಂದಲೂ ಹಾಕಿಕೊಂಡು ಬರಲಾಗುತ್ತಿದೆ.
ಇನ್ನು ಸೆಪ್ಟೆಂಬರ್ (September month) ತಿಂಗಳಿನ ಹಣ ಕೂಡ ಈಗಾಗಲೇ ಬಿಡುಗಡೆಯಾಗಿದೆ, ಲಕ್ಷಾಂತರ ಕುಟುಂಬದವರು ಈ ಹಣದ ಪ್ರಯೋಜನ ಕೂಡ ಪಡೆದುಕೊಂಡಿದ್ದಾರೆ. ಆದರೆ ಇನ್ನಷ್ಟು ಜನರಿಗೆ ಹಣ ತಲುಪಿಲ್ಲ..
ಇದಕ್ಕೆ ಹಲವಾರು ಕಾರಣಗಳು ಕೂಡ ಇವೆ. ಇನ್ನು ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ (K.H Muniyappa) ಅವರು ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೊಸ ಅಪ್ಡೇಟ್! ಹಬ್ಬಕ್ಕೆ ಮಹಿಳೆಯರಿಗೆ ವಿಶೇಷ ಗಿಫ್ಟ್ ಕೊಡಲಿದೆ ಸರ್ಕಾರ
ಇನ್ನು ಮುಂದೆ ಇಂಥವರಿಗೆ ಹಣ ಜಮಾ ಆಗುವುದಿಲ್ಲ:
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿ ಕೊಡಬೇಕಿತ್ತು ಸರ್ಕಾರ, ಆದರೆ 5 ಕೆಜಿ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ (free rice) ಕೊಡುತ್ತಿದ್ದರು ರಾಜ್ಯ ಸರ್ಕಾರಕ್ಕೆ ಮತ್ತೆ 5 ಕೆಜಿ ಅಕ್ಕಿ ಹೊಂದಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ (Money Deposit) ಮಾಡ್ತಾ ಇರುವ ವಿಚಾರ ನಿಮಗೆಲ್ಲರಿಗೂ ಗೊತ್ತಿದೆ. ಆದರೂ ಕೆಲವರ ಖಾತೆಗೆ (Bank Account) ಹಣ ಜಮಾ ಆಗಿಲ್ಲ ಯಾಕೆ ಎನ್ನುವುದಕ್ಕೆ ಸಚಿವ ಮುನಿಯಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕಾರಣಕ್ಕೆ ಹಣ ಜಮಾ ಆಗುತ್ತಿಲ್ಲ!
ಮಳೆಯ ಅಭಾವದಿಂದ ರಾಜ್ಯದ ಸಾಕಷ್ಟು ಪ್ರದೇಶಗಳಲ್ಲಿ ಬೆಳೆ ಸರಿಯಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಕೆಲವು ಪ್ರದೇಶಗಳನ್ನು ಬರಪೀಡಿತ ಪ್ರದೇಶ (Drought prone area) ಎಂದು ಘೋಷಿಸಲಾಗಿದೆ.
ಈ ಕಾರಣಕ್ಕೆ ಇಂತಹ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ ಹಣದ ಬದಲು 10 ಕೆಜಿ ಅಕ್ಕಿಯನ್ನು ಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಹಾಗಾಗಿ ಬರಪೀಡಿತ ಪ್ರವೇಶದಲ್ಲಿ ವಾಸಿಸುವವರಿಗೆ ನೇರವಾಗಿ ಹಣ ವರ್ಗಾವಣೆ ಆಗುವುದಿಲ್ಲ ಅದರ ಬದಲು 10 ಕೆಜಿ ಅಕ್ಕಿ ಸಿಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವವರಿಗೆ ಸಿಹಿಸುದ್ದಿ! ಹಬ್ಬಕ್ಕೆ ರೈತರಿಗೆ ವಿಶೇಷ ಉಡುಗೊರೆ
ಮುಂದಿನ ತಿಂಗಳಿನಿಂದ ಅಕ್ಕಿಯೇ ಸಿಗುತ್ತದೆಯೇ?
ಇನ್ನು ಸರ್ಕಾರಕ್ಕೆ 5 ಕೆಜಿ ಅಕ್ಕಿಯನ್ನು ಹೆಚ್ಚುವರಿ ಹೊಂದಿಸಲು ಸಾಧ್ಯವಾಗಿಲ್ಲ. ಆದರೆ ಈಗಾಗಲೇ ಮೂರು ಕಂತಿನ ಹಣ ಬಿಡುಗಡೆ (three installments) ಮಾಡಲಾಗಿದೆ, ಇನ್ನು ಮುಂದೆ ಆದರೂ ಹಣದ ಬದಲು ಅಕ್ಕಿ ಅಥವಾ ಪೌಷ್ಟಿಕ ಆಹಾರವನ್ನು (nutrient food) ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ
ಹಾಗಾಗಿ ಅಕ್ಟೋಬರ್ ತಿಂಗಳಿನ ಹಣ ನವೆಂಬರ್ ನಲ್ಲಿ ಬಿಡುಗಡೆ ಆಗುವ ಸಂದರ್ಭದಲ್ಲಿ ಹಣದ ಬದಲು ಅಕ್ಕಿಯನ್ನೇ ಸರ್ಕಾರ ಹೊಂದಿಸುತ್ತದೆಯೋ ಎನ್ನುವುದನ್ನು ಕಾದು ನೋಡಬೇಕು.
ಸ್ವಂತ ಜಮೀನು, ಆಸ್ತಿ ಇದ್ದವರಿಗೆ ಹೊಸ ನಿಯಮ! ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ರೂಲ್ಸ್ ಜಾರಿ
ಸ್ಟೇಟಸ್ ತಿಳಿದುಕೊಳ್ಳಿ;
ಸೆಪ್ಟೆಂಬರ್ ಅಂತಿಮ ಅನ್ನಭಾಗ್ಯ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು https://ahara.kar.nic.in/status1/status_of_dbt.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಡಿ ಬಿ ಟಿ ಸ್ಟೇಟಸ್ ಚೆಕ್ (check DBT status) ಮಾಡಿಕೊಳ್ಳಬಹುದು.
Do you know why Annabhagya Yojana money has not reached to your Bank account yet