ಸ್ವಂತ ಜಮೀನು, ಆಸ್ತಿ ಇದ್ದವರಿಗೆ ಹೊಸ ನಿಯಮ! ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ರೂಲ್ಸ್ ಜಾರಿ

ಇದೀಗ ಸಾಲ ಮರುಪಾವತಿಗೆ (Loan Re Payment) ಹೊಸ ನಿಯಮವನ್ನು ಪರಿಚಯಿಸಿರುವ ಆರ್ಬಿಐ (RBI) ಯಾರು ಸಾಲ (Loan) ತೆಗೆದುಕೊಳ್ಳುವಾಗ ತಮ್ಮ ಆಸ್ತಿ ಪತ್ರವನ್ನು ಬ್ಯಾಂಕ್ (property documents) ನಲ್ಲಿ ಅಡಮಾನ ಇಟ್ಟಿರುತ್ತಾರೋ ಅಂತವರಿಗೆ ಈ ನಿಯಮ ಅನ್ವಯವಾಗಲಿದೆ.

ಗ್ರಾಹಕರಿಗೆ ಅನುಕೂಲವಾಗುವಂತಹ ಹಲವು ನಿಯಮಗಳನ್ನು ಕಾಲಕ್ಕೆ ತಕ್ಕ ಹಾಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ರೂಪಿಸುತ್ತಿದೆ. ಈ ಬ್ಯಾಂಕಿಂಗ್ ನಿಯಮಗಳು ಆಗಾಗ ಬದಲಾಗುತ್ತದೆ ಹಾಗೂ ಪರಿಷ್ಕರಣೆ ಗೊಳ್ಳುತ್ತವೆ.

ಬ್ಯಾಂಕಿಂಗ್ ನಿಯಮಗಳ ಆಧಾರದ ಮೇಲೆ ಗ್ರಾಹಕರಿಗೆ ಸಿಗುವ ಸಾಲ (Loan) ಹಾಗೂ ಮತ್ತಿತರ ಬ್ಯಾಂಕಿಂಗ್ (banking) ಸೌಲಭ್ಯಗಳಲ್ಲಿಯೂ ಕೂಡ ವ್ಯತ್ಯಾಸವಾಗುವುದನ್ನು ಗಮನಿಸಬಹುದು.

ಇದೀಗ ಸಾಲ ಮರುಪಾವತಿಗೆ (Loan Re Payment) ಹೊಸ ನಿಯಮವನ್ನು ಪರಿಚಯಿಸಿರುವ ಆರ್ಬಿಐ (RBI) ಯಾರು ಸಾಲ (Loan) ತೆಗೆದುಕೊಳ್ಳುವಾಗ ತಮ್ಮ ಆಸ್ತಿ ಪತ್ರವನ್ನು ಬ್ಯಾಂಕ್ (property documents) ನಲ್ಲಿ ಅಡಮಾನ ಇಟ್ಟಿರುತ್ತಾರೋ ಅಂತವರಿಗೆ ಈ ನಿಯಮ ಅನ್ವಯವಾಗಲಿದೆ.

ಸ್ವಂತ ಜಮೀನು, ಆಸ್ತಿ ಇದ್ದವರಿಗೆ ಹೊಸ ನಿಯಮ! ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ರೂಲ್ಸ್ ಜಾರಿ - Kannada News

ಸಾಲ ಮಾಡುವವರ ಸಂಕಷ್ಟವನ್ನು ಅರಿತಿರುವ ಆರ್‌ಬಿಐ ಈ ಹೊಸ ನಿಯಮವನ್ನು ಜಾರಿಗೊಳಿಸಿದೆ ಎನ್ನಬಹುದು, ಡಿಸೆಂಬರ್ ಒಂದರಿಂದ ದೇಶಾದ್ಯಂತ ಬ್ಯಾಂಕಿಂಗ್ ಕ್ಷೇತ್ರದ ಈ ಹೊಸ ನಿಯಮ ಅನ್ವಯವಾಗಲಿದೆ.

ಮೊದಲು ನಿಮ್ಮ ಆಧಾರ್ ಕಾರ್ಡ್ ಲಾಕ್ ಮಾಡಿ; ಇಲ್ಲವೇ ನಿಮ್ಮ ಖಾತೆಯಲ್ಲಿ ಹಣ ಕದಿಯಬಹುದು

ಸಾಲ ಮರುಪಾವತಿ ಮಾಡುವವರಿಗೆ ಹೊಸ – Loan Re Payment

ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಸಾಲ (Bank Loan) ತೆಗೆದುಕೊಳ್ಳುವಾಗ ನಾವು ಎಷ್ಟು ಸಾಲದ ಅಗತ್ಯ ಇರುತ್ತದೆಯೋ ಅಷ್ಟು ಮೌಲ್ಯದ ಆಸ್ತಿ ಪತ್ರವನ್ನು (property documents) ಅಡವಿಡಬೇಕಾಗುತ್ತದೆ. ಎಷ್ಟು ಮೌಲ್ಯದ ಆಸ್ತಿ ಅಥವಾ ಇತರ ದಾಖಲೆಗಳನ್ನು ನೀಡುತ್ತೇವೆಯೋ ಅಷ್ಟು ಮೌಲ್ಯದ ಹಣವನ್ನು ಸಾಲವಾಗಿ ಪಡೆಯಬಹುದು.

ಇನ್ನು ಸಾಲಗಾರ ಯಾವಾಗ ತನ್ನ ಸಾಲವನ್ನು ತೀರಿಸುತ್ತಾನೋ ಆಗ ಆತನಿಗೆ ಆತ ಬ್ಯಾಂಕಿನಲ್ಲಿ ಅಡವಿಟ್ಟ ಎಲ್ಲಾ ಕಾಗದ ಪತ್ರಗಳನ್ನು ಬ್ಯಾಂಕ್ ಹಿಂತಿರುಗಿಸಬೇಕು.

ಬೀದಿ ಬದಿ ವ್ಯಾಪಾರಿಗಳಿಗೆ ಸಿಗಲಿದೆ ಉಚಿತ ವಸತಿ ಸೌಲಭ್ಯ! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಆರ್ ಬಿ ಐ ತಂದಿರುವ ಹೊಸ ರೂಲ್ಸ್ ಏನು?

property New Rulesಆರ್ ಬಿ ಐ ನ ಹೊಸ ನಿಯಮ ಬ್ಯಾಂಕುಗಳಿಗೆ (Banks) ಸ್ವಲ್ಪ ತಲೆ ನೋವಾಗಬಹುದು. ಯಾಕಂದ್ರೆ ಸಾಲ ತೆಗೆದುಕೊಂಡವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ (loan repayment ) ಅವರು ಮರುಪಾವತಿ ಮಾಡಿದ ಒಂದು ತಿಂಗಳ ಒಳಗೆ ಸಾಲಗಾರರಿಂದ ಅಡಮಾನ ಇಟ್ಟುಕೊಂಡ ಎಲ್ಲ ಆಸ್ತಿ ಪತ್ರಗಳನ್ನು ಬ್ಯಾಂಕ್ ಹಿಂತಿರುಗಿಸಬೇಕು

ಒಂದು ವೇಳೆ ಒಂದು ತಿಂಗಳ ಒಳಗೆ ಬ್ಯಾಂಕ್ ಸಾಲಗಾರರ ಆಸ್ತಿ ಪತ್ರವನ್ನು ಹಿಂತಿರುಗಿಸದೆ ಇದ್ದಲ್ಲಿ ಬಾರಿ ಮೊತ್ತದ ದಂಡ ಪಾವತಿಸಬೇಕು. ಇದೇ ಬರುವ ಡಿಸೆಂಬರ್ 1 2023 ರಿಂದಲೇ ಈ ಹೊಸ ನಿಯಮ ಜಾರಿಗೆ ಬರಲಿದ್ದು, ಬ್ಯಾಂಕುಗಳು ಅಡವಿಟ್ಟುಕೊಂಡ ಆಸ್ತಿಪತ್ರವನ್ನು ಒಂದು ತಿಂಗಳ ಒಳಗೆ ಹಿಂತಿರುಗಿಸದೆ ಇದ್ದಲ್ಲಿ ಒಂದು ತಿಂಗಳ ಬಳಿಕ ಆಸ್ತಿ ಪತ್ರವನ್ನು ಕೊಡುವವರೆಗೂ ಪ್ರತಿದಿನ 5,000ಗಳನ್ನ ಸಾಲಗಾರರಿಗೆ ದಂಡವಾಗಿ ಪಾವತಿಸಬೇಕು.

ಹೌದು, ಸಾಲಗಾರ ಸಾಲ ತೀರಿಸಿದ ಬಳಿಕ 30 ದಿನಗಳ ಒಳಗೆ ಬ್ಯಾಂಕ್ ಸ್ಥಿರಾಸ್ತಿ ಅಥವಾ ಚರಾಸ್ತಿ ಪತ್ರವನ್ನು ಅವರಿಗೆ ಹಿಂತಿರುಗಿಸಿ ಕೊಡುವುದು ಬ್ಯಾಂಕ್ ನ ಕರ್ತವ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಾಲ ತೀರಿಸಿದ ನಂತರವೂ ಸಾಲಗಾರರ ಅಡಮಾನ ಇಟ್ಟ ಆಸ್ತಿಪತ್ರವನ್ನು ಹಿಂತಿರುಗಿಸದೆ ಆಟ ಆಡಿಸುತ್ತಿದೆ ಎನ್ನುವ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಹೊಸ ರೂಲ್ಸ್ ಮಾಡಿದೆ.

ಈ ಮೇಕೆ ತಳಿ ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ, ಸುಲಭವಾಗಿ ಗಳಿಸಿ ಲಕ್ಷ ಲಕ್ಷ ಆದಾಯ

ಯಾವುದೇ ಕಾರಣಕ್ಕೂ ಅಡಮಾನ ಇಟ್ಟುಕೊಂಡಿರುವ ಆಸ್ತಿ ಪತ್ರವನ್ನು ಒಂದು ತಿಂಗಳಿಗಿಂತ ಹೆಚ್ಚು ಸಮಯ ಬ್ಯಾಂಕ್ ಇಟ್ಟುಕೊಳ್ಳುವಂತಿಲ್ಲ. ಸಾಲ ತೀರಿಸಿದ ತಕ್ಷಣವೇ ಅದನ್ನ ಅವರಿಗೆ ಹಿಂತಿರುಗಿಸಿ ಕೊಡಬೇಕು.

ಒಂದು ವೇಳೆ ಅಡವಿಟ್ಟುಕೊಂಡ ಆಸ್ತಿ ಪತ್ರ ಕಳೆದುಹೋದರೆ ಅಥವಾ ಅದಕ್ಕೆ ಏನಾದರೂ ಹಾನಿ ಆಗಿದ್ದರೆ ಅಂತಹ ಸಂದರ್ಭದಲ್ಲಿ ಮತ್ತೆ 30 ದಿನಗಳ ಅವಕಾಶ ನೀಡಲಾಗುವುದು. ಇನ್ನು ಆಸ್ತಿ ಪತ್ರ ಹಾನಿಯಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಹೊಸ ಆಸ್ತಿ ಪತ್ರ ಮಾಡಿಕೊಳ್ಳಲು ನೋಂದಾವಣೆಗೆ (registration) ಮೊದಲಾದ ವಿಷಯಕ್ಕೆ ಬೇಕಾಗಿರುವ ಖರ್ಚು ವೆಚ್ಚಗಳನ್ನು ಬ್ಯಾಂಕ್ ನೋಡಿಕೊಳ್ಳಬೇಕು.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗಳ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು ಪ್ರತಿಯೊಂದು ಬ್ಯಾಂಕ್ ಕೂಡ ಆರ್‌ಬಿಐನ ಈ ಹೊಸ ನಿಯಮವನ್ನು ಪಾಲಿಸಲೇಬೇಕು.

A new rule for Property, Enforcement of Rules relating to Property Documents

Follow us On

FaceBook Google News

A new rule for Property, Enforcement of Rules relating to Property Documents