ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯದಲ್ಲಿ ವಾಸಿಸುವ ರೈತಾಪಿ (Farmers) ಜನರಿಗೆ ಅನುಕೂಲವಾಗಲು ಕೆಲವು ಯೋಜನೆಗಳನ್ನು ರೂಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತರು (farmers) ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರೆ
ಅಂತವರಿಗೆ ಕಂದಾಯ ಇಲಾಖೆಯ ಮೂಲಕ ಹೊಸ ನಿಯಮವನ್ನು ಜಾರಿಗೊಳಿಸಿದೆ ಸರ್ಕಾರ, ಈ ನಿಯಮದ ಅಡಿಯಲ್ಲಿ ರೈತರಿಗೆ ಯಾವ ರೀತಿ ಪ್ರಯೋಜನ ಆಗಬಹುದು ನೋಡೋಣ.
ಇಂತಹವರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ; ಗೃಹಲಕ್ಷ್ಮಿ ಹಣವೂ ಬರೋಲ್ಲ
ಸರ್ಕಾರಿ ಜಮೀನಿನಲ್ಲಿ ವಾಸಿಸುವವರಿಗೆ ಗುಡ್ ನ್ಯೂಸ್
ಸರ್ಕಾರಿ ಜಮೀನಿನಲ್ಲಿ (government land) ಸಾಕಷ್ಟು ವರ್ಷಗಳಿಂದ ಉಳುಮೆ ಮಾಡಿಕೊಂಡು ಇರುವ ರೈತರಿಗೆ ಅಕ್ರಮ ಸಕ್ರಮ ಯೋಜನೆಯನ್ನು ಸರ್ಕಾರ ಮತ್ತೆ ಜಾರಿಗೆ ತಂದಿದೆ
ಈ ಮೂಲಕ ರೈತರು ಸರ್ಕಾರಿ ಜಮೀನಿನಲ್ಲಿ ವಾಸವಾಗಿದ್ದರೆ ಅಂತವರಿಗೆ ಹಕ್ಕು ಪತ್ರ ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ರಾಜ್ಯ ಕಂದಾಯ ಇಲಾಖೆ ಈ ಬಗ್ಗೆ ಮಾಹಿತಿಯನ್ನು ನೀಡಿತು, ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ರೈತರಿಗೆ ಆಸ್ತಿ ವರ್ಗಾವಣೆ (property transfer) ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದೆ.
ಯಾವುದೇ ವ್ಯಕ್ತಿ ಯಾವುದೇ ಜಾಗದಲ್ಲಿ ಎಷ್ಟು ವರ್ಷಗಳಿಂದ ವಾಸವಾಗಿದ್ದರು ಆ ಜಾಗ (Property) ಆತನ ಹೆಸರಿನಲ್ಲಿ ಇಲ್ಲದಿದ್ದರೆ ಅವನಿಗೆ ಸರ್ಕಾರದಿಂದ ಸಿಗುವ ಯಾವ ಸೌಲಭ್ಯಗಳು ಕೂಡ ಸಿಗುವುದಿಲ್ಲ, ಹಾಗಾಗಿ ರೈತರು ಈ ಕಷ್ಟವನ್ನು ಅನುಭವಿಸಬಾರದು ಎನ್ನುವ ಕಾರಣಕ್ಕೆ ಸರ್ಕಾರ ಹೊಸ ರೀತಿ ಜಾರಿಗೆ ತಂದಿದ್ದು ಅಕ್ರಮ ಜಮೀನಿನಲ್ಲಿ ಇರುವವರ ಹೆಸರಿನಲ್ಲಿಯೇ ಆಸ್ತಿ ಬರೆದು ಕೊಡಲು ನಿರ್ಧರಿಸಲಾಗಿದೆ.
ಇಷ್ಟು ದಿನ ಆದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಇಲ್ವಾ? ಹಾಗಾದ್ರೆ ಈ ರೀತಿ ಮಾಡಿ ಸಾಕು
ಬಗರ್ ಹುಕುಂ ನೀತಿ: (bagair Hukum)
ಉಳುವವನೇ ಒಡೆಯ ಎನ್ನುವ ನೀತಿಯನ್ನು ಬ್ರಿಟಿಷರು (British government) ಜಾರಿಗೆ ತಂದಿದ್ದರು, ಆದರೆ ಯಾವಾಗ ಸ್ವಾತಂತ್ರ್ಯ (independence) ಸಿಕ್ತೋ ಈ ನೀತಿಯನ್ನು ಹಿಂಪಡೆದುಕೊಳ್ಳಲಾಗಿತ್ತು.
ಬಹಳ ವರ್ಷದಿಂದ ಉಳುಮೆ ಮಾಡಿಕೊಂಡು ಬಂದ ರೈತ ಇಂದು ಆತ ವಾಸಿಸುವ ಜಾಗವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಇದನ್ನು ಗಮನಿಸಿರುವ ಸರ್ಕಾರ ಈ ಎಲ್ಲಾ ಅಕ್ರಮಗಳನ್ನು ತಡೆಯಲು ಬಗೆರ್ ಹುಕುಂ ಅಪ್ಲಿಕೇಶನ್ (application) ಅನ್ನು ಅಭಿವೃದ್ಧಿಪಡಿಸಿದ ಸರ್ಕಾರಿ ಅಧಿಕಾರಿಗಳು ಎಲ್ಲಾ ಕಡೆಗೆ ಹೋಗಿ ಕೃಷಿ ನಡೆಯುತ್ತಿದೆಯೋ ಅಥವಾ ಬೇರೆ ಚಟುವಟಿಕೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಬಗೆರ್ ಹುಕುಂ ತಂತ್ರಾಂಶ (Technology) ಸಹಾಯಕವಾಗಲಿದೆ
ಇದರಲ್ಲಿ ಪ್ರತಿಯೊಬ್ಬ ರೈತರ ಭೂಮಿಯ ಬಗ್ಗೆ ಮಾಹಿತಿ ಇದ್ದು, ಯಾವ ಜಾಗದಲ್ಲಿ ಏನು ನಡೆಯುತ್ತಿದೆ? ಯಾರಿಗೆ ಆ ಜಾಗ ಸಲ್ಲಬೇಕು? ಒತ್ತುವರಿ ಆಗಿದೆಯೋ ಇಲ್ಲವೋ ಮೊದಲಾದ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಇದರ ಆಧಾರದ ಮೇಲೆ ರೈತರು ದೂರು ನೀಡಿದರೆ ಅದನ್ನು ಸರ್ಕಾರ ಪರಿಗಣಿಸುತ್ತದೆ.
Good news for those who are Agriculture in government land
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.