ಒಟ್ಟು ಗೃಹಲಕ್ಷ್ಮಿ ಯೋಜನೆ ( GruhaLakshmi scheme) ಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ 1.16 ಕೋಟಿಗೆ ಏರಿದೆ. ಇದಕ್ಕಾಗಿ ಸರ್ಕಾರ ಮೀಸಲಿಟ್ಟ ಹಣ 4,449 ಕೋಟಿ ರೂಪಾಯಿ. ಇಷ್ಟೆಲ್ಲ ಆದ್ರೂ ಕೆಲವು ಗೃಹಿಣಿಯರಿಗೆ ಮಾತ್ರ 2000 ಜಮಾ (Money Deposit) ಆಗಿಲ್ಲ.
ಇದಕ್ಕೆ ಸರ್ಕಾರ ಈಗಾಗಲೇ ಸಾಕಷ್ಟು ಕಾರಣಗಳನ್ನು ಕೂಡ ಕೊಟ್ಟಿದೆ, ಇನ್ನು ನೀವು ಕೆಲವು ಕೆಲಸ ಮಾಡದೆ ಇದ್ರೆ ನಿಮ್ಮ ಖಾತೆಗೆ (Bank Account) ಹಣ ವರ್ಗಾವಣೆ ಆಗಲು ಸಾಧ್ಯವಿಲ್ಲ, ಹಾಗಾಗಿ ತಕ್ಷಣವೇ ಈ ಕೆಳಗಿನ ಕೆಲವು ವಿಷಯಗಳನ್ನು ಗಮನಿಸಿ.
ನಿಮ ಖಾತೆ, ಆಧಾರ್, ಹಾಗೂ ಬ್ಯಾಂಕ್ ಸಮಸ್ಯೆ ಇಲ್ಲದೆ ಹೋದಲ್ಲಿ ಖಂಡಿತ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ (Money Deposit) ಆಗುತ್ತದೆ, ಆ ಬಗ್ಗೆ ಯಾವುದೇ ಸಂದೇಹ ಬೇಡ.
ಮೊದಲು ಇದನ್ನು ಚೆಕ್ ಮಾಡಿಕೊಳ್ಳಿ, ನೀವು ನಿಮ್ಮ ಬ್ಯಾಂಕ್ (bank) ನಲ್ಲಿ ನಿಮ್ಮ ಖಾತೆಯ ಜೊತೆಗೆ ಆಧಾರ್ ಲಿಂಕ್ ಆಗಿದೆಯಾ (Aadhaar link) ಎಂಬುದನ್ನು ಚೆಕ್ ಮಾಡಿ ಅಥವಾ ನೀವು ಆನ್ಲೈನ್ ನಲ್ಲಿ ಚೆಕ್ ಮಾಡುವುದಾದರೆ, UIDAI ನಾ ಅಧಿಕೃತ ವೆಬ್ಸೈಟ್ (website) ನಲ್ಲಿ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಿ, ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
ಈಕೆವೈಸಿ ಮಾಡಿಸಬೇಕು!
ಆದರೆ ಈ ಕೆವೈಸಿ (ekyc) ಮಾಡಿಸಿಕೊಂಡಿರುವುದೇ ಇಲ್ಲ ಅಥವಾ ಈಗ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಈ ಕೆಲಸ ಮಾಡಿಸಿಕೊಳ್ಳುತ್ತಿರುವುದರಿಂದ ಸರ್ವರ್ ಸಮಸ್ಯೆಯಿಂದಾಗಿಯೂ ಈಕೆ ವೈ ಸಿ ಸರಿಯಾಗಿ ಆಗದೆ ಇರಬಹುದು, ಹಾಗಾಗಿ ಈಕೆವೈಸಿ ಆಗಿದ್ಯೋ ಇಲ್ವೋ ಎಂಬುದನ್ನು ಬ್ಯಾಂಕಿನಲ್ಲಿ ತಿಳಿದುಕೊಳ್ಳಿ ಅಥವಾ ಆನ್ಲೈನ್ ನಲ್ಲಿ ಆಹಾರ ಇಲಾಖೆಯ ವೆಬ್ಸೈಟ್ ಮೂಲಕ ತಿಳಿದುಕೊಳ್ಳಿ.
ಸರ್ಕಾರ ಈಗಾಗಲೇ ಮಾಹಿತಿ ನೀಡಿರುವ ಪ್ರಕಾರ ರೇಷನ್ ಕಾರ್ಡ್ (Ration Card) ಮಹಿಳೆಯ ಹೆಸರಿನಲ್ಲೆ ಇರಬೇಕು ಹಾಗೂ ಮಹಿಳೆಯ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ನ ವಿವರಗಳು ಒಂದೇ ರೀತಿಯಾಗಿ ಇರಬೇಕು, ಹೆಸರು ಅಥವಾ ವಿಳಾಸ ವ್ಯತ್ಯಾಸ ಇದ್ದರೆ ನಿಮ್ಮ ಖಾತೆಗೆ 2000 ಬರುವುದಿಲ್ಲ. ಹಾಗಾಗಿ ಇದನ್ನು ಚೆಕ್ ಮಾಡಿಕೊಳ್ಳುವುದು ಬಹಳ ಮುಖ್ಯ.
ಹಲವರಿಗೆ ನಿಮ್ಮ ಅರ್ಜಿ ರಿಜೆಕ್ಟ್ (application reject) ಆಗಿದೆ ಎಂಬ ಸಂದೇಶವು ಬಂದಿರಬಹುದು, ಹಾಗೇನಾದರೂ ನೀವು ಸಂದೇಶ ಸ್ವೀಕರಿಸಿದರೆ ಕೂಡಲೇ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ.
ನೀವು ಕೊಟ್ಟ ವಿವರಗಳು ತಪ್ಪಾಗಿದ್ದಲ್ಲಿ ನಿಮ್ಮ ಅರ್ಜಿ ರಿಜೆಕ್ಟ್ ಆಗಿರಬಹುದು ಅಥವಾ ನೀವು ಸಲ್ಲಿಸಿದ ಅರ್ಜಿ ಸರ್ಕಾರದ ಡೇಟಾಬೇಸ್ ನಲ್ಲಿ ಸೇವ್ ಆಗದೆ ಇರಬಹುದು. ಅಂತಹ ಸಂದರ್ಭದಲ್ಲಿಯೂ ನೀವು ಸಲ್ಲಿಸಿದ ಅರ್ಜಿ ಸರ್ಕಾರಕ್ಕೆ ಸೇರಿರುವುದಿಲ್ಲ.
ಎಲ್ಲಾ ಸರಿಯಾಗಿದ್ದು ನಿಮಗೆ ಅರ್ಜಿ ಸಲ್ಲಿಕೆಯ ಬಗ್ಗೆ ಸಂದೇಹ ಬಂದಿದ್ದರೆ ಖಂಡಿತವಾಗಿಯೂ ನಿಮ್ಮ ಖಾತೆಗೆ 2000 ಜಮಾ ಆಗೇ ಆಗುತ್ತದೆ. ಸರ್ಕಾರ ಈಗಾಗಲೇ ಸುಮಾರು 80% ನಷ್ಟು ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಿದೆ.
ಇನ್ನು 20% ನಷ್ಟು ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇರುವುದರಿಂದ ಇದು ಪರಿಹಾರ ಆದ ಕೂಡಲೇ ಅವರ ಖಾತೆಗೂ ಕೂಡ ಮೊದಲ ಕಂತಿನ ಹಣ ಬಿಡುಗಡೆ ಆಗಲಿದೆ.
ಇನ್ನು ಯಾವ ಮಹಿಳೆಯರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲವೋ ಅವರ ಎಲ್ಲಾ ವಿವರಗಳು ಕೂಡ ಸರಿಯಾಗಿ ಇದ್ದರೆ ಎಲ್ಲಾ ಮಾಹಿತಿಗಳು ದಾಖಲೆಗಳು ಸರಿಯಾಗಿ ಇದ್ದರೆ ಎರಡನೇ ಕಂತಿನ ಹಣ ಬಿಡುಗಡೆ (second installment) ಆಗುತ್ತಿದ್ದ ಹಾಗೆ ಅಂತವರ ಖಾತೆಗೆ 4000 ಜಮಾ ಆಗುವುದಾಗಿ ಸರ್ಕಾರ ತಿಳಿಸಿದೆ.
ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ ಮುಗಿಯೋದರ ಒಳಗೆ ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ.
do this if Still Gruha Lakshmi Yojana Money Not Deposit to Your Bank Account
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
do this if Still Gruha Lakshmi Yojana Money Not Deposit to Your Bank Account