Karnataka NewsBangalore News

ಇಂತಹವರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ; ಗೃಹಲಕ್ಷ್ಮಿ ಹಣವೂ ಬರೋಲ್ಲ

ಇಂದು ಜನರ ಬಳಿ ಬೇರೆ ಯಾವ ದಾಖಲೆಗಳು ಇರುತ್ತವೆಯೊ ಇಲ್ಲವೋ ಗೊತ್ತಿಲ್ಲ, ಆದರೆ ರೇಷನ್ ಕಾರ್ಡ್ (ration card) ಮಾತ್ರ ಇದ್ದೇ ಇರುತ್ತೆ. ಯಾಕಂದ್ರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಯ (guarantee schemes) ಪ್ರಯೋಜನ ಪಡೆಯಬೇಕು ಅಂದ್ರೆ ರೇಷನ್ ಕಾರ್ಡ್ ಕೂಡ ಬಹಳ ಮಹತ್ವ ಆಗಿರುವ ದಾಖಲೆಯಾಗಿದೆ, ಈ ಹಿನ್ನೆಲೆಯಲ್ಲಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಜನ ಮುಗಿಬಿದ್ದಿದ್ದಾರೆ.

ರೇಷನ್ ಕಾರ್ಡ್ ಗಾಗಿ ಅರ್ಜಿ!

ಕಳೆದ ಕೆಲವು ವರ್ಷಗಳ ಲೆಕ್ಕಾಚಾರ ನೋಡಿದ್ರೆ ರೇಷನ್ ಕಾರ್ಡ್ ಬಗ್ಗೆ ಯಾರು ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ ಈಗ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಸಿಗಬೇಕು ಅಂದ್ರೆ ರೇಷನ್ ಕಾರ್ಡ್ ಮುಖ್ಯ ಎನ್ನುವ ಕಾರಣಕ್ಕೆ ಇರುವ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (ration card correction) ಮಾಡುವುದು ಹಾಗೂ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು, ಮೊದಲಾದ ಪ್ರಕ್ರಿಯೆಗಳು ಭರದಿಂದ ಸಾಗಿವೆ.

Order to cancel the BPL ration card of such people

ಇತ್ತ ಸರ್ಕಾರ ಹಳೆಯ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಿ ಅವುಗಳನ್ನ ಫಲಾನುಭವಿಗಳಿಗೆ ಕೊಡಲು ನಿರ್ಧಾರ ಮಾಡಿದೆ.

ಇಷ್ಟು ದಿನ ಆದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಇಲ್ವಾ? ಹಾಗಾದ್ರೆ ಈ ರೀತಿ ಮಾಡಿ ಸಾಕು

ಇಂಥವರ ರೇಷನ್ ಕಾರ್ಡ್ ರದ್ದಾಗುತ್ತದೆ;

ಬಿಪಿಎಲ್ ಕಾರ್ಡ್ ಮಾತ್ರವಲ್ಲ, ಎಪಿಎಲ್ ಕಾರ್ಡ್ ನವರೂ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಇದಕ್ಕೆ ಮುಖ್ಯವಾಗಿರುವ ಕಾರಣ ಸುಳ್ಳು ಮಾಹಿತಿ ಹಾಗೂ ಒಂದೇ ಮನೆಯಲ್ಲಿ ಎರಡು ಮೂರೂ ರೇಷನ್ ಕಾರ್ಡುಗಳು .

ಬಿಪಿಎಲ್ ಕಾರ್ಡ್ (BPL card) ಎಲ್ಲರಿಗೂ ಬೇಕು ಹಾಗಾಗಿ ಹೊಸ ಅರ್ಜಿಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತಿದ್ದ ಹಾಗೆ ಲಕ್ಷಾಂತರ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆ ಆಗಿದೆ. ಈ ನಡುವೆ ಆಹಾರ ಇಲಾಖೆಯಿಂದ ಮಹತ್ವದ ಆದೇಶ ಹೊರ ಬಿದ್ದಿದ್ದು ಇಂಥವರ ರೇಷನ್ ಕಾರ್ಡ್ ರದ್ದು (ration card cancellation) ಮಾಡಲಾಗುವುದು.

ಹೌದು ಯಾರು ಬಿಪಿಎಲ್ ಕಾರ್ಡ್ ಹೊಂದಿದ್ದು ಪಡಿತರ ತೆಗೆದುಕೊಳ್ಳುತ್ತಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದಾಗುತ್ತದೆ, ಅಂದರೆ ಸರ್ಕಾರ ಬಡತನ ರೇಖೆಗಿಂತ ಕೆಳಗಿನ ಜನರಿಗೆ ಅನುಕೂಲವಾಗಲು ಪ್ರತಿ ತಿಂಗಳು ಪಡಿತರ ನೀಡುತ್ತದೆ, ಆದರೆ ಕಾರ್ಡ್ ಇದ್ದರು ಕೆಲವರು ಕೂಡ ಪಡಿತರ ತೆಗೆದುಕೊಳ್ಳುತ್ತಿಲ್ಲ ಹೀಗೆ ಕಳೆದ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇದ್ದವರ ರೇಷನ್ ಕಾರ್ಡ್ ಕೂಡಲೇ ರದ್ದಾಗಲಿದೆ.

ಒಂದೇ ಮನೆಯಲ್ಲಿದ್ದು ಎರಡು ಮೂರು ರೇಷನ್ ಕಾರ್ಡ್ ಹೊಂದಿರುವವರಿಗೆ ಕಟ್ಟುನಿಟ್ಟಿನ ಆದೇಶ

ಸರ್ಕಾರದ ಮಾನದಂಡ ಪಾಲಿಸುವುದು ಕಡ್ಡಾಯ!

BPL Ration Cardಇತ್ತೀಚಿನ ಅನ್ನಭಾಗ್ಯ ಯೋಜನೆ (Annabhagya scheme) ಅಡಿಯಲ್ಲಿ ಕೇಂದ್ರ ಸರ್ಕಾರ ಕೊಡುವ 5 ಕೆಜಿ ಉಚಿತ ಅಕ್ಕಿ (free rice) ಜೊತೆಗೆ ರಾಜ್ಯ ಸರ್ಕಾರ 5 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ವರ್ಗಾವಣೆ (DBT) ಮಾಡುತ್ತಿದೆ.

ಈ ಹಿನ್ನಲೆಯಲ್ಲಿ ಸಾಕಷ್ಟು ಜನ ಹಣಕ್ಕಾಗಿ ನಕಲಿ ರೇಷನ್ ಕಾರ್ಡ್ ಕೂಡ ತಯಾರು ಮಾಡಿಕೊಳ್ಳುತ್ತಿದ್ದಾರೆ, ಅಷ್ಟೇ ಅಲ್ಲದೆ ಅಗತ್ಯ ಇರುವವರಿಗಿಂತ ಅನರ್ಹರೇ ಬಿಪಿಎಲ್ ಕಾರ್ಡನ್ನು ಹೆಚ್ಚಾಗಿ ಹೊಂದಿದ್ದಾರೆ

ಇಂತವರ ಖಾತೆಗೆ ಬರಲಿದೆ ಉಚಿತ 3000 ರೂಪಾಯಿ! ಸರ್ಕಾರದಿಂದ ಹೊಸ ಯೋಜನೆ ಘೋಷಣೆ

ಈ ಹಿನ್ನೆಲೆಯಲ್ಲಿ ಯಾರೂ ಸರ್ಕಾರ ತಿಳಿಸಿದ ಆರು ಮಾನದಂಡಗಳ ಒಳಗೆ ಬಾರದೆ ಇದ್ದರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೋ ಅಂತವರ ಕಾರ್ಡ್ ರದ್ದತಿಗೆ ಸರ್ಕಾರ ಮುಂದಾಗಿದೆ. ಒಂದು ವೇಳೆ ಯಾವುದೇ ರೇಷನ್ ಕಾರ್ಡ್ ಹೋಲ್ಡರ್ ಬಗ್ಗೆ ಅನುಮಾನ ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲುಬಹುದು.

ಹಾಗೂ ಮುಂದೆ ಬಿಪಿಎಲ್ ಕಾರ್ಡ್ ನೀಡುವುದಕ್ಕೂ ಮೊದಲು ಆಹಾರ ಇಲಾಖೆಯ ಅಧಿಕಾರಿಗಳು ಕುಟುಂಬಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಒಟ್ಟಿನಲ್ಲಿ ಉಚಿತವಾಗಿ ಸಿಗುವ ಸೌಲಭ್ಯ ಪಡೆದುಕೊಳ್ಳಲು ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ರೆ ಅಂಥವರ ಕಾರ್ಡ್ ರದ್ದಾಗುತ್ತದೆ.

Govt to cancel BPL card, there will be ration for such people

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories