Karnataka NewsBangalore News

ಹಳ್ಳಿಗಳಲ್ಲಿ ವಾಸಿಸುವವರಿಗೆ ಹೊಸ ಯೋಜನೆ ಜಾರಿಗೆ ತಂದ ಸರ್ಕಾರ! ಸಿಗಲಿದೆ ಈ ಉಚಿತ ಸೌಲಭ್ಯ

ದೇಶದ ಪ್ರತಿಯೊಂದು ಭಾಗದಲ್ಲಿಯೂ ವಾಸಿಸುವ ಪ್ರತಿಯೊಬ್ಬ ಪ್ರಜೆಗೂ ಅನುಕೂಲವಾಗುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು. ಯಾಕಂದ್ರೆ ದೇಶದ ಪ್ರಜೆಗಳೇ ದೇಶದ ಜೀವಾಳ.

ಹಾಗಾಗಿ ಪ್ರಜೆಗಳಿಗೆ ಅನುಕೂಲವಾಗುವಂತಹ ಹಾಗೂ ಪ್ರಜೆಗಳ ಆರ್ಥಿಕ ಸಬಲೀಕರಣಕ್ಕೆ (financial support) ಸಾಧ್ಯವಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರಗಳು (State Government) ಜಾರಿಗೆ ತರುತ್ತವೆ

Karnataka Government Digital literacy program in Gram Panchayat

ಈ ನಡುವೆ ರಾಜ್ಯ ಸರ್ಕಾರ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳಲ್ಲಿ ಗ್ರಾಮೀಣ ಭಾಗದ ಜನರಿಗೂ ಅನುಕೂಲವಾಗುವಂತಹ ಯೋಜನೆಗಳು ಹೆಚ್ಚು ಯಶಸ್ವಿಯಾಗಿವೆ ಎನ್ನಬಹುದು.

ಅನ್ನಭಾಗ್ಯ ಯೋಜನೆಯ ಹಣ ಇನ್ನೂ ನಿಮ್ಮ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ? ಇಲ್ಲಿದೆ ಪಕ್ಕಾ ಕಾರಣ

ಗ್ರಾಮೀಣ ಜನತೆಗೆ ಗುಡ್ ನ್ಯೂಸ್!

ಯಾವುದೇ ದೇಶದ ಸಬಲೀಕರಣ ಆಗಬೇಕು ಅಂದ್ರೆ ಆ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ವಿದ್ಯಾವಂತನಾಗಿ (educated) ಇರುವುದು ಬಹಳ ಮುಖ್ಯ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ (Education) ಸಿಗುವುದು ದೊಡ್ಡ ವಿಚಾರವಲ್ಲ ಆದರೆ ಗ್ರಾಮೀಣ ಭಾಗದಲ್ಲಿಯೂ (village) ಕೂಡ ದೇಶ ಮುಂದುವರೆಯುತ್ತಿದ್ದ ಹಾಗೆ ಗ್ರಾಮೀಣ ಭಾಗದ ಜನರಿಗೂ ಆಧುನಿಕ ಶಿಕ್ಷಣ (education for village people) ಸಿಗುವುದು ಬಹಳ ಮುಖ್ಯ.

ಶಿಕ್ಷಣ ಅಂದರೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ವಯಸ್ಕರಿಗೂ ಕೂಡ ಶಿಕ್ಷಣದ ಅಗತ್ಯ ಇರುತ್ತದೆ. ಈಗ ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿಯೂ ಡಿಜಿಟಲ್ ಶಿಕ್ಷಣದ (digital education) ಬಗ್ಗೆ ಗಮನವಹಿಸಿದೆ.

ಗೃಹಜ್ಯೋತಿ ಯೋಜನೆ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ವಿದ್ಯುತ್ ದರದ ಬಗ್ಗೆ ಸ್ಪಷ್ಟನೆ ನೀಡಿದ ಬೆಸ್ಕಾಂ

ಡಿಜಿಟಲ್ ಸಾಕ್ಷರತೆ (Digital literacy program)

Digital literacy programಗ್ರಾಮೀಣ ಭಾಗದಲ್ಲಿ ಇರುವ ಪ್ರತಿಯೊಬ್ಬರಿಗೂ ಕೂಡ ದೇಶದ ಆಗುಹೋಗುಗಳ ಬಗ್ಗೆ ತಿಳುವಳಿಕೆ ಇರಬೇಕು ಹಾಗೂ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ದೇಶದಲ್ಲಿ ಸುಮಾರು 35 ಗ್ರಾಮ ಪಂಚಾಯತ್ (gram Panchayat) ನಲ್ಲಿ ಡಿಜಿಟಲ್ ಸಾಕ್ಷರತೆ ಸಾರಲು ಸರ್ಕಾರ ಮುಂದಾಗಿದೆ.

ಇದೇ ಬರುವ ಡಿಸೆಂಬರ್ 31 2023ರ ಒಳಗೆ ಕನಿಷ್ಠ 35 ಗ್ರಾಮ ಪಂಚಾಯಿತಿನಲ್ಲಿ ಡಿಜಿಟಲ್ ಸಾಕ್ಷರತೆ ಸಾರಲು ಸರ್ಕಾರ ಹೊಸ ಕಾರ್ಯಕ್ರಮಗಳನ್ನು ರೂಪಿಸಿದೆ.

ಗ್ರಾಮಸ್ಥರು ನಿತ್ಯದ ಹಣಕಾಸು ವ್ಯವಹಾರದಿಂದ ಹಿಡಿದು ಪ್ರತಿಯೊಂದು ಚಟುವಟಿಕೆಯಲ್ಲಿಯೂ ಕೂಡ ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಈ ಹೊಸ ಯೋಜನೆ ಆಗಿರುವ ಡಿಜಿಟಲ್ ಸಾಕ್ಷರತೆ ಸಾರಲು ಸರ್ಕಾರ ಮುಂದಾಗಿದೆ.

ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ಡಿಜಿಟಲ್ ಹಣಕಾಸಿನ ವಹಿವಾಟು ನಡೆಯಬೇಕು ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಆಯ್ದ 35 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿಜಿಟಲ್ ಸಾಕ್ಷರತೆ ಆರಂಭಿಸಲಾಗುವುದು.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೊಸ ಅಪ್ಡೇಟ್! ಹಬ್ಬಕ್ಕೆ ಮಹಿಳೆಯರಿಗೆ ವಿಶೇಷ ಗಿಫ್ಟ್ ಕೊಡಲಿದೆ ಸರ್ಕಾರ

ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ;

ಡಿಜಿಟಲ್ ಸಾಕ್ಷರತೆ, ಇದೊಂದು ತರಬೇತಿ ಕಾರ್ಯಕ್ರಮವಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗೆ ಡಿಜಿಟಲ್ ಹಣಕಾಸು ವ್ಯವಹಾರ ಮಾಡಿಕೊಳ್ಳಲು ತಿಳುವಳಿಕೆ ನೀಡುವ ಕಾರ್ಯಕ್ರಮವಾಗಿದೆ.

ಈ ನಿಟ್ಟಿನಲ್ಲಿ ಅಗತ್ಯ ಇರುವವರಿಗೆ ತರಬೇತಿ ನೀಡಲು ಪದವಿ ಮುಗಿಸಿರುವ, ಕಂಪ್ಯೂಟರ್ ಜ್ಞಾನ (computer knowledge) ಹೊಂದಿರುವ, ಹಾಗೂ ಗ್ರಾಮದಲ್ಲಿ ವಾಸಿಸುತ್ತಿರುವ ಯುವಕರನ್ನು ಸ್ವಯಂಸೇವಕರನ್ನಾಗಿ (voluntary) ನೇಮಿಸಿಕೊಂಡು ಗ್ರಾಮೀಣ ಜನರಿಗೆ ತರಬೇತಿ ನೀಡಲು ಸರ್ಕಾರ ಮುಂದಾಗಿದೆ.

ಗ್ರಾಮೀಣ ಭಾಗದ ಜನರಿಗೆ, ತರಬೇತಿ (training) ಪಡೆದುಕೊಂಡಿರುವ ಪದವೀಧರರಿಂದ ತರಬೇತಿ ನೀಡಲಾಗುವುದು. ಅಗತ್ಯವಿರುವ ಸ್ಮಾರ್ಟ್ ಫೋನ್ (Smartphone), ಲ್ಯಾಪ್ಟಾಪ್ (laptop) ಕಂಪ್ಯೂಟರ್ ಸಿಸ್ಟಮ್ ಇಂಟರ್ನೆಟ್ ಸೌಲಭ್ಯ ಎಲ್ಲವನ್ನು ಕೂಡ ಸರ್ಕಾರವೇ ಒದಗಿಸಲಿದೆ.

ಸದ್ಯ 35 ಗ್ರಾಮಗಳು ಡಿಜಿಟಲ್ ಸಾಕ್ಷರತೆ ತರಬೇತಿ ಪಡೆದುಕೊಳ್ಳಲಿವೆ. ಹಾಗೂ ಸರ್ಕಾರದ ಈ ಉಪಕ್ರಮ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರಯೋಗ ಆಗಲಿದೆ ಎನ್ನಬಹುದು.

Karnataka Government Digital literacy program in Gram Panchayat

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories